ದೆಹಲಿಯಲ್ಲಿ ಮಳೆ ಅಬ್ಬರ ಹೇಗಿದೆ ಎಂದರೆ ಕಟ್ಟಡಗಳೆಲ್ಲ ಸೋರುತ್ತಿವೆ. ಸೆಕ್ರೇಟರಿಯೇಟ್ ಕಚೇರಿ ಮಳೆ ಅಬ್ಬರಕ್ಕೆ ನಲುಗಿದ್ದು ನೀರು ಸೋರುತ್ತಿರುವ ದೃಶ್ಯ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ನವದೆಹಲಿ[ಜು.13] ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಇಲ್ಲಿನ ಸೆಕ್ರೇಟರಿಯೇಟ್ ಕಚೇರಿ ಸೋರುತ್ವತಿದೆ. ಸೋರುವ ಕಟ್ಟಡದಲ್ಲೇ ನೌಕರರು ಕೆಲಸ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉತ್ತರ ಭಾಋತದ ಹಲವು ಕಡೆ ಸುರಿಯುತ್ತಿರುವ ಮಳೆ ಪ್ರವಾಹ ಸ್ಥಿತಿಯನ್ನು ತಂದಿಟ್ಟಿದೆ. ಮುಂಬೈನಲ್ಲಿಯೂ ಉಂಟಾಗಿದ್ದ ಜಲಪ್ರಳಯ ಅಂತೂ ಇಂತು ಸಹಜ ಸ್ಥಿತಿಗೆ ಬಂದಿದೆ. ತಿಲಕ್ ಬ್ರಿಡ್ಜ್ ಕೆಳಗಡೆ ನೀರು ತುಂಬಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಇನ್ನು ಪಾಲಿರ್ಮೆಂಟ್ ಬಳಿಯೂ ವರ್ಷಧಾರೆ ಮುಂದುವರಿದಿದೆ. ಶುಕ್ರವಾರದ ಧಾರಾಕಾರ ಮಳೆ ದೆಹಲಿ ಜನ ಜೀವನವನ್ನು ಅಸ್ತವ್ಯಸ್ಥ ಮಾಡಿದೆ.
Scroll to load tweet…
