Asianet Suvarna News Asianet Suvarna News

ಅಸ್ಸೋಂ ಪ್ರವಾಹ ಸಂತ್ರಸ್ತರ ನೆರವಿಗೆ ಸಿಖ್ ಯುವಕರು..!

ಅಸ್ಸೋಂ ಪ್ರವಾಹದಲ್ಲಿ ಮಾನವೀಯತೆಯ ನೆರೆ

ಸಂತ್ರಸ್ತರಿಗೆ ಸಹಾಯ ಮಾಡುತ್ತಿರುವ ಸಿಖ್ ಖಾಲ್ಸಾ ಪಡೆ

ಆಹಾರ, ನೀರು, ಔಷಧ ಪೂರೈಕೆ ಮಾಡುತ್ತಿರುವ ಸಿಖ್ ಯುವಕರು

ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲು ಬೋಟ್ ವ್ಯವಸ್ಥೆ

Sikh Volunteers From The Khalsa Aid Are Helping Victims Stranded In The Assam Floods

ದಿಸ್‌ಪುರ್(ಜೂ.23): 'ಏನಾದರೂ ಆಗು ಮೊದಲು ಮಾನವನಾಗು'..ಎಂಬುದು ರಾಷ್ಟ್ರಕವಿ ಕುವೆಂಪು ಅವರು ಇಡೀ ವಿಶ್ವಕ್ಕೆ ಹೇಳಿ ಕೊಟ್ಟ ಪಾಠ. ಜಾತಿ, ಧರ್ಮ, ಬಣ್ಣ ಇವುಗಳನ್ನೆಲ್ಲಾ ಮೀರಿದ ಮನುಷ್ಯತ್ವವೇ ಕೊನೆಯತನಕ ಉಳಿಯೋದು, ಕೊನೆತನಕ ಬದುಕೋದು. ಇದಕ್ಕೆ ಅಸ್ಸೋಂ ಪ್ರವಾಹ ಸ್ಪಷ್ಟ ಉದಹಾರಣೆ ಎನ್ನಬಹುದು.

ಅಸ್ಸೋಂ ಪ್ರವಾಹಕ್ಕೂ ಮಾನವೀಯತೆಗೂ ಏನು ಸಂಬಂಧ ಅಂತೀರಾ?. ಸಂಬಂಧ ಇದೆ. ಅಸ್ಸೋಂ ರಾಜ್ಯದಲ್ಲಿ ತಲೆದೋರಿರುವ ಪ್ರವಾಹ ಸಾಕಷ್ಟು ಜನರನ್ನು ಬಲಿ ಪಡೆದಿದೆ. ಸಾವಿರಾರು ಜನ ಮನೆ ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಹಗಲಿರುಳೂ ದುಡಿಯುತ್ತಿದೆ. ಈ ಮಧ್ಯೆ ಪಂಜಾಬ್‌ನಿಂದ ಬಂದಿರುವ ಸಿಖ್ ಸಮುದಾಯದ ಯುವಕರ ಗುಂಪೊಂದು ಪ್ರವಾಹಪೀಡಿತ ಪ್ರದೇಶಗಳಲ್ಲಿ ಸ್ವಯಂಪ್ರೇರಣೆಯಿಂದ ಜನರಿಗೆ ಸಹಾಯ ಮಾಡುತ್ತಿದೆ.

ಪಂಜಾಬ್‌ನಿಂದ ಬಂದಿರುವ ಖಾಲ್ಸಾ ಎಂಬ ಯುವಕರ ಗುಂಪು ಸ್ವಯಂಪ್ರೇರಿತವಾಗಿ ಅಸ್ಸೋಂ ಪ್ರವಾಹಪೀಡಿತ ಪ್ರದೇಶಗಳಲ್ಲಿ ಜನಸೇವೆ ಮಾಡುತ್ತಿದೆ. ಜನರನ್ನು ರಕ್ಷಿಸಲು ಖುದ್ದಾಗಿ ಖಾಸಗಿ ಬೋಟ್‌ಗಳನ್ನು ತಂದಿರುವ ಈ ಗುಂಪು, ಪ್ರವಾಹದಿಂದ ಜಲಾವೃತವಾಗಿರುವ ಪ್ರದೇಶಗಳಿಗೆ ಬೋಟ್ ಸಮೇತ ಕಾಲಿಡುವ ಖಾಲ್ಸಾ ಯುವಕರ ಪಡೆ, ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ತಲುಪಿಸುತ್ತಿದೆ. ಅಷ್ಟೇ ಅಲ್ಲದೇ ಸಂತ್ರಸ್ತರಿಗೆ ಆಹಾರ, ಕುಡಿಯುವ ನೀರು ಮತ್ತು ಅಗತ್ಯ ಔಷಧಗಳನ್ನು ಸರಬರಾಜು ಮಾಡುವ ಮೂಲಕ ಮನುಷ್ಯತ್ವ ಭಾಷೆ, ಗಡಿಗಳನ್ನೂ ಮೀರಿದ್ದು ಎಂಬುದನ್ನು ಸಾರುತ್ತಿದೆ.

Follow Us:
Download App:
  • android
  • ios