Asianet Suvarna News Asianet Suvarna News

9 ದಿನಗಳಿಂದ ಗುಹೆಯಲ್ಲಿದ್ದ ಫುಟ್ಬಾಲ್ ಟೀಂ ಸುರಕ್ಷಿತ!

9 ದಿನಗಳಿಂದ ಗುಹೆಯಲ್ಲಿದ್ದ ಫುಟ್ಬಾಲ್ ಟೀಂ ಸುರಕ್ಷಿತ

ಥಾಯ್ಲೆಂಡ್ ನ ಚಿಯಾಂಗ್ ರಾಯ್ ನಲ್ಲಿ ತಂಡ ಪತ್ತೆ

ಪ್ರವಾಹದಿಂದ ಕೊಚ್ಚಿ ಹೋಗಿದ್ದ ಬಾಲಕರು

ಕೋಚ್ ಸಮೇತ ಎಲ್ಲ ಬಾಲಕರೂ ಸುರಕ್ಷಿತ

Thai cave rescue: Soccer team found alive one kilometer underground

ಚಿಯಾಂಗ್ ರಾಯ್(ಜು.3): ಪ್ರವಾಹ ಸೃಷ್ಟಿಯಾಗಿ ಸುಮಾರು 9 ದಿನಗಳ ಕಾಲ ಗುಹೆಯಲ್ಲಿ ಸಿಲುಕಿದ್ದ 12 ಫುಟ್ಬಾಲ್ ಆಟಗಾರರು ಮತ್ತು ತಂಡದ ಕೋಚ್ ಜೀವಂತವಾಗಿದ್ದಾರೆ.

ಕೋಚ್ ಸಮೇತ ಬಾಲಕರು ಸುತ್ತಾಡಲು ಹೋದಾಗ ಈ ಅವಘಡ ಸಂಭವಿಸಿತ್ತು. ಗುಹೆಯೊಳಗೆ ಇದ್ದಾಗ ಪ್ರವಾಹದಿಂದ 13 ಮಂದಿ ಕೊಚ್ಚಿ ಹೋಗಿದ್ದರು. ನಂತರ ಪುಟ್ಟಾಯ್ ಬೀಚ್ ಬಳಿ ಸಿಲುಕಿದ್ದರು. 9 ದಿನಗಳಿಂದ ಎಲ್ಲರೂ ಒಟ್ಟಾಗಿ ಅಲ್ಲಿಯೇ ಇದ್ದಾರೆ.

25 ವರ್ಷದ ಕೋಚ್ ಜೊತೆ 12 ಬಾಲಕರು ನಿಗೂಢವಾಗಿ ಕಾಣೆಯಾಗಿ ಆತಂಕ ಸೃಷ್ಟಿಯಾಗಿತ್ತು. ನಂತರ ಶೋಧ ಕಾರ್ಯಕ್ಕೆ  ಬ್ರಿಟಿಷ್ ಗುಹಾ-ಮುಳುಗು ತಜ್ಞರಾದ ಜಾನ್ ವೊಲಾಂಥೇನ್ ಮತ್ತು ರಿಕ್ ಸ್ಟಾಂಟನ್ ಮುಂದಾಗಿದ್ದರು. 

ಇದೀಗ ಬಾಲಕರು ಇರುವ ಜಾಗವನ್ನು ಪತ್ತೆ ಮಾಡಲಾಗಿದ್ದು ಬಾಲಕರ ರಕ್ಷಣೆಗೆ ಪೊಲೀಸರು, ರಕ್ಷಣಾದಳ ಹಾಗೂ ಥಾಯ್ ನೇವಿ ತಜ್ಞರು ತೊಡಗಿದ್ದಾರೆ. ಇನ್ನು ಗುಹೆಯಲ್ಲಿ ನೀರಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮೊದಲು ನೀರು ಖಾಲಿ ಮಾಡಿದ ನಂತರ ಬಾಲಕರನ್ನು ರಕ್ಷಣೆ ಮಾಡಲಾಗುತ್ತದೆ.  ಅಲ್ಲಿಯವರೆಗೂ ಗುಹೆಯಲ್ಲಿ ಆಕ್ಸಿಜನ್, ಆಹಾರವನ್ನು ಪೂರೈಸಲಾಗುತ್ತಿದೆ. ಬಾಲಕರು ಪತ್ತೆಯಾದ ವಿಡಿಯೋವನ್ನು ಥಾಯ್ ಸರ್ಕಾರ ಬಿಡುಗಡೆ ಮಾಡಿದೆ.

Latest Videos
Follow Us:
Download App:
  • android
  • ios