ಪ್ರವಾಹ ಪೀಡಿತ ಗುಹೆಯಲ್ಲಿ ಸಿಲುಕಿಕೊಂಡಿರುವ ಥಾಯ್ಲೆಂಡ್‌ನ ಕಿರಿಯರ ಫುಟ್ಬಾಲ್‌ ತಂಡಕ್ಕೆ ಭರ್ಜರಿ ಅವಕಾಶವೊಂದು ಒದಗಿದೆ.

ಮಾಸ್ಕೋ: ಪ್ರವಾಹ ಪೀಡಿತ ಗುಹೆಯಲ್ಲಿ ಸಿಲುಕಿಕೊಂಡಿರುವ ಥಾಯ್ಲೆಂಡ್‌ನ ಕಿರಿಯರ ಫುಟ್ಬಾಲ್‌ ತಂಡವನ್ನು ಫಿಫಾ ಅಧ್ಯಕ್ಷ ಗಿಯಾನ್ನಿ ಇನ್‌ಫ್ಯಾಂಟಿನೋ ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ ವೀಕ್ಷಣೆಗೆ ಆಹ್ವಾನಿಸಿದ್ದಾರೆ. 

ಅಧ್ಯಕ್ಷ ಗಿಯಾನ್ನಿ ‘ಥಾಯ್ಲೆಂಡ್‌ ಕಿರಿಯರ ಫುಟ್ಬಾಲ್‌ ತಂಡದ ಎಲ್ಲ ಆಟಗಾರರು ಹಾಗೂ ಕೋಚ್‌ ಶೀಘ್ರವಾಗಿ ಅವರವರ ಕುಟುಂಬಗಳಿಗೆ ಕ್ಷೇಮವಾಗಿ ಮರಳಲಿ. ಜತೆಗೆ ಗುಹೆಯಲ್ಲಿ ಸಿಲುಕಿರುವ ಫುಟ್ಬಾಲಿಗರನ್ನು ಫೈನಲ್‌ಗೆ ಅತಿಥಿಗಳನ್ನಾಗಿ ಆಹ್ವಾನಿಸಲು ಸಂತಸವೆನಿಸುತ್ತದೆ’ ಎಂದು ಥಾಯ್ಲೆಂಡ್‌ ಫುಟ್ಬಾಲ್‌ ಸಂಸ್ಥೆಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.