ಭಾರಿ ಮಳೆಯಿಂದ ಬಿಹಾರದ ಕತಿಹಾರ್‌ದಲ್ಲಿ ಮಂದಾರ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಈಗ ಸೇತುವೆ ಕೊಚ್ಚಿ ಹೋಗಿದ್ದ ವಿಡಿಯೋ ವೈರಲ್‌ ಆಗಿದೆ.

ಬಿಹಾರ (ಆ.16): ಭಾರಿ ಮಳೆಯಿಂದ ಬಿಹಾರದ ಕತಿಹಾರ್‌ದಲ್ಲಿ ಮಂದಾರ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಈಗ ಸೇತುವೆ ಕೊಚ್ಚಿ ಹೋಗಿದ್ದ ವಿಡಿಯೋ ವೈರಲ್‌ ಆಗಿದೆ.

Add Asianetnews Kannada as a Preferred SourcegooglePreferred

ವರುಣನ ಆರ್ಭಟ ಹಿನ್ನೆಲೆ ಕತಿಹಾರ್‌ನಿಂದ ತೆರಳಬೇಕಾಗಿದ್ದ ರೈಲುಗಳ ಸಮಯ ಬದಲಾಗಿದೆ. ಅನೇಕ ರೈಲುಗಳ ಪ್ರಯಾಣ ರದ್ದಾಗಿದೆ ಎಂದು ತಿಳಿದು ಬಂದಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ಬಿಹಾರ್‌ ತತ್ತರಿಸಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲೂ ಸಹ ಮಳೆಯಿಂದ ಸಂಚಾರ ಅಸ್ತವ್ಯಸ್ತವಾಗಿದೆ. ವಾಹನ ದಟ್ಟಣೆಯಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಅಲ್ಲಲ್ಲಿ ಭೂ ಕುಸಿತ ಉಂಟಾಗಿದೆ. ಸಾವಿರಾರು ಮನೆ, ಸೇತುವೆ, ಕೃಷಿ ಬೆಳೆ ನಾಶವಾಗಿವೆ. ಪ್ರವಾಹದಿಂದ ಸುಮಾರು 85ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 65 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟದಲ್ಲಿ ಸಿಲುಕಿದ್ದಾರೆ.

(ಸಾಂದರ್ಭಿಕ ಚಿತ್ರ)