ಚಾಲೆಂಜ್ ಮಾಡಿ ನದಿಗೆ ಹಾರಿದ ಯುವಕ ನಾಪತ್ತೆ

First Published 11, Jul 2018, 10:58 AM IST
A guy challenge with friends and jump to River
Highlights

ಕೇರಳದ ವೈನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕಪಿಲಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.  ಉಕ್ಕಿ ಹರಿಯುತ್ತಿರುವ ಕಪಿಲಾನದಿಗೆ ನಂಜನಗೂಡು ಬಳಿಯ ಹಳೆ ಸೇತುವೆಯಿಂದ ಜಿಗಿದಿದ್ದ ಓರ್ವ ಯುವಕನ ನಾಪತ್ತೆಯಾಗಿದ್ದಾನೆ.  ಯುವಕನ ಹುಡುಕಾಟದಲ್ಲಿ ಅಗ್ನಿ ಶಾಮಕ ಹಾಗೂ ಈಜು ತಜ್ಞರು ತೊಡಗಿದ್ದಾರೆ. 
 
ಮೈಸೂರು (ಜು. 11): ನದಿ ಪ್ರವಾಹದಲ್ಲಿ ಈಜುವ ಸಾಹಸ ಮಾಡಲು ಹೋಗಿ ಯುವಕನೊಬ್ಬ ನಾಪತ್ತೆಯಾಗಿದ್ದಾನೆ.  ಚಾಲೆಂಜ್ ಮಾಡಿ ಒಟ್ಟೊಟ್ಟಿಗೆ ಐವರು ಯುವಕರು ನಂಜನಗೂಡು ಹಳೆ ಸೇತುವೆಯಿಂದ ಜಿಗಿದಿದ್ದಾರೆ. ಐವರ ಪೈಕಿ ಓರ್ವ ನಾಪತ್ತೆಯಾಗಿದ್ದಾನೆ. 

loader