ಶತಮಾನದ ಮಹಾಮಳೆಗೆ ಕೊಡಗು ತತ್ತರಿಸಿದೆ. ಸಾವಿರಾರು ಜನರ ಜೀವನ ಅತಂತ್ರವಾಗಿದೆ. ಈ ಮಧ್ಯೆ ಜಲಜಾಕ್ಷಿ ಎಂಬ ಮಹಿಳೆ ಕೂಡ ಮಳೆಗೆ ತಮ್ಮ ಮನೆಯನ್ನು ಕಳೆದುಕೊಂಡಿದ್ದು, ಪತಿಯನ್ನು ಕಳೆದುಕೊಂಡಿರುವ ಇವರು ಹೃದಯ ಸಂಬಂಧಿ ಕಾಯಿಲೆಯಿಂದ ಕೂಡ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಲಜಾಕ್ಷಿ ಎಂಬ ಮಹಿಳೆಗೆ ಮನೆಯನ್ನು ಮರಳಿ ಕೊಡಿಸುವ ಸಂಕಲ್ಪವನ್ನು ನಿಮ್ಮ ಸುವರ್ಣನ್ಯೂಸ್ ಮಾಡಿದೆ.
Kodagu Aug 19, 2018, 8:21 PM IST
ಮಡಿಕೇರಿಯ ಭಾರೀ ಮಳೆಗೆ ಸಿಲುಕಿದ ಜನರ ಪರದಾಡುತ್ತಿದ್ದಾರೆ. ಈ ಮಧ್ಯೆ ಹಲವು ರಿಲೀಫ್ ಸೆಂಟರ್ ಗಳನ್ನು ಸ್ಥಾಪಿಸಿ, ನಿರಾಶ್ರಿತರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಪ್ರವಾದಲ್ಲಿ ಸಿಲುಕಿಬಂದ ಬಾಣಂತಿ, ಸುವರ್ಣ ನ್ಯೂಸ್ ಜೊತೆ ಮಾತಾಡಿದ್ದು, ಆಕೆ ಏನು ಹೇಳಿದ್ದಾಳೆ ಎಂಬುದನ್ನು ಕೇಳೋಣ ಬನ್ನಿ.
Kodagu Aug 19, 2018, 7:48 PM IST
ಶತಮಾನದ ಮಳೆಗೆ ತತ್ತರಿಸಿರುವ ಕೊಡಗಿನ ಮಡಿಕೇರಿಗೆ ಇಂದು ಸಚಿವ ಆರ್.ವಿ ದೇಶಪಾಂಡೆ ಭೆಟಿ ನೀಡಿದರು. ಇಲ್ಲಿನ ಜೋಡುಪಾಲಕ್ಕೆ ದೇಶಪಾಂಡೆ ಭೇಟಿ ನೀಡಿ ಪರಿಹಾರ ಕಾರ್ಯ ಪರಿಶೀಲನೆ ನಡೆಸಿದರು.
Kodagu Aug 19, 2018, 7:36 PM IST
ಪ್ರವಾಹಪೀಡಿತ ಕೇರಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಇಸ್ರೊದ ಐದು ಉಪಗ್ರಹಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಪ್ರವಾಹ ಸ್ಥಿತಿಗತಿಯ ನಿಗಾವಹಿಸುವ ಮತ್ತು ಪರಿಹಾರ ಕಾರ್ಯಾಚರಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ಉಪಗ್ರಹಗಳು ನೆರವಾಗುತ್ತಿವೆ.
NEWS Aug 19, 2018, 7:19 PM IST
ಪ್ರವಾಹ ಹಾಗೂ ಭೂಕುಸಿತದಿಂದ ತತ್ತರಿಸಿರುವ ಕೊಡಗು ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿದ್ದಾರೆ. ಸಂತ್ರಸ್ತರನ್ನು ಭೇಟಿಯಾದ ಯಡಿಯೂರಪ್ಪ, ನೆರವು ನೀಡಲು ಬಿಜೆಪಿಯು ಎಲ್ಲ ರೀತಿಯಲ್ಲಿ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.
Kodagu Aug 19, 2018, 6:09 PM IST
ನೀಲಿ ಬಣ್ಣದ ಟೀ ಶರ್ಟ್ ತೊಟ್ಟು, ಕಾಲೆಲ್ಲಾ ಕೆಸರು ಮೆತ್ತಿಕೊಂಡು ಕೂತಿರುವ ಈ ವ್ಯಕ್ತಿ ಎರ್ನಾಕುಳಂ ಜಿಲ್ಲಾಧಿಕಾರಿ ಎಂ.ಜಿ. ರಾಜಮಾಣಿಕಂ. ಕೇರಳ ಪ್ರವಾಹದ ಹಿನ್ನೆಲೆಯಲ್ಲಿ ವಯನಾಡ್ ವಿಭಾಗದ ರಕ್ಷಣಾ ಕಾರ್ಯದ ಮೇಲುಸ್ತುವಾರಿ ವಹಿಸಿಕೊಂಡಿರುವ ಅವರು ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ...
NEWS Aug 19, 2018, 5:31 PM IST
ಮಳೆ-ನೆರೆಯಿಂದ ತತ್ತರಿಸಿಸಿರುವ ಕೊಡಗಿಗೆ 2ನೇ ದಿನ ಭೇಟಿನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಪರಿಶೀಲನೆ ವೀಕ್ಷಣೆ ನಡೆಸಿದ್ದಾರೆ. ಧೃತಿಗೆಡಬೇಡಿ, ಸರ್ಕಾರವು ಸಕಲ ನೆರವು ಒದಗಿಸಲು ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಭಯಪಡಬೇಡಿ ಎಂದು ಎಚ್ಡಿಕೆ ಈ ಸಂದರ್ಭದಲ್ಲಿ ಹೇಳಿದ್ದಾರೆ.
Kodagu Aug 19, 2018, 5:12 PM IST
ಪ್ರವಾಹ ಪೀಡಿತ ಕೊಡಗು ಜಿಲ್ಲೆಯಲ್ಲಿ ಅಸ್ಸಾಮ್ ಮೂಲದ ವ್ಯಕ್ತಿಯೊಬ್ಬನನ್ನು ಎನ್ಡಿಆರ್ಎಫ್ ತಂಡವು ರಕ್ಷಿಸಿದೆ. ಅಸ್ವಸ್ಥನಾಗಿದ್ದ ವ್ಯಕ್ತಿ ಬಿಸ್ಕೆಟ್ ತಿನ್ನುತ್ತಾ ಕುಳಿತಿದ್ದ ಆ ಯುವಕನನ್ನು ಇದೀಗ ಸುಳ್ಯದ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
Kodagu Aug 19, 2018, 4:59 PM IST
ಕಳೆದ 15 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಹಾಮಳೆಗೆ ಕೊಡಗು ಕೊಚ್ಚಿ ಹೋಗಿದೆ. ಜಿಲ್ಲಾದ್ಯಂತ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯಪಡೆದಿರುವವರು ಇನ್ನೂ ತಮ್ಮ ಮನೆ-ಮಠಗಳನ್ನು ಕಳೆದುಕೊಂಡಿರುವ ಆಘಾತದಲ್ಲಿದ್ದಾರೆ. ಸಂತ್ರಸ್ತರು ಸುವರ್ಣನ್ಯೂಸ್ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ಹೀಗೆ...
Kodagu Aug 19, 2018, 4:25 PM IST
NEWS Aug 19, 2018, 4:10 PM IST
ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಕುಮಾರ್ಸವಾಮಿ ಭೇಟಿ 2ನೇ ದಿನವೂ ಮುಂದುವರೆದಿದೆ. ಕುಶಾಲ ನಗರ ಹಾಗೂ ಮತ್ತಿತರ ಪ್ರದೇಶಗಳಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಆವರ್ತಿ ಗ್ರಾಮದಲ್ಲಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದ್ದಾರೆ.
NEWS Aug 19, 2018, 3:27 PM IST
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಖ್ಯಮಂತ್ರಿ ರಾಮ್’ನಾಥ್ ಕೋವಿಂದ್ ಗೆ ಕರೆ ಮಾಡಿ ಕೊಡಗು ಜಲ ಪ್ರಳಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ರಕ್ಷಣಾ ಕಾರ್ಯ ಯಾವ ರೀತಿ ಸಾಗುತ್ತಿದೆ ಎಂಬುದನ್ನು ತಿಳಿದುಕೊಂಡಿದ್ದಾರೆ.
NEWS Aug 19, 2018, 3:27 PM IST
ಕೇರಳದಲ್ಲಿ ಸಂತ್ರಸ್ತರು ರಕ್ಷಣೆಗಾಗಿ ಮೊರೆಯಿಡುತ್ತಿದ್ದರೆ, ಮಹಿಳೆಯೊಬ್ಬಳು ಪ್ರವಾಹಕ್ಕೆ ಸಿಲುಕಿರುವ ತನ್ನ ಮನೆಯಿಂದ 25 ನಾಯಿಗಳನ್ನು ಬಿಟ್ಟು ಬರಲು ನಿರಾಕರಿಸಿದ್ದಾಳೆ.
NATIONAL Aug 19, 2018, 2:00 PM IST
ಭಾರೀ ಪ್ರವಾಹದಿಂದ ಕೊಡಗಿನ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿ. ನೆರವಿನ ನಿರೀಕ್ಷೆಯಲ್ಲಿ ಪ್ರವಾಹ ಪೀಡಿತರು | ಸಂತ್ರಸ್ತ ಜನತೆಗೆ ನೆರವಾಗುವ ಕಾರ್ಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು: ಸಿದ್ದರಾಮಯ್ಯ
NEWS Aug 19, 2018, 12:53 PM IST
ಒಂದು ಕಡೆ ಜಲ ಪ್ರಳಯವಾಗುತ್ತಿದೆ. ಕೊಡಗು, ಮಡಿಕೇರಿ ಜನರ ಬದುಕು ದುಸ್ತರವಾಗಿದೆ. ಇನ್ನೊಂದು ಕಡೆ ಕೆಆರ್ ಎಸ್, ಕಬಿನಿ ಬಿರುಕು ಬಿಟ್ಟಿದೆ ಎನ್ನುವ ಸುದ್ದಿ ವಾಟ್ಸಾಪ್ ನಲ್ಲಿ ಹರಿದಾಡ್ತಾ ಇದೆ. ಮಳೆ, ಪ್ರವಾಹದಿಂದ ತತ್ತರಿಸಿದ ಜನತೆಗೆ ಈ ಸುದ್ದಿ ಇನ್ನಷ್ಟು ಆಘಾತವನ್ನುಂಟು ಮಾಡಿದೆ. ಇದು ನಿಜನಾ? ನಿಮ್ಮ ಆತಂಕ ದೂರ ಮಾಡುತ್ತಿದೆ ಸುವರ್ಣ ನ್ಯೂಸ್.
NEWS Aug 19, 2018, 12:25 PM IST