ಕೊಚ್ಚಿ: ಕೇರಳದಲ್ಲಿ ಸಂತ್ರಸ್ತರು ರಕ್ಷಣೆಗಾಗಿ ಮೊರೆಯಿಡುತ್ತಿದ್ದರೆ, ಮಹಿಳೆಯೊಬ್ಬಳು ಪ್ರವಾಹಕ್ಕೆ ಸಿಲುಕಿರುವ ತನ್ನ ಮನೆಯಿಂದ 25 ನಾಯಿಗಳನ್ನು ಬಿಟ್ಟು ಬರಲು ನಿರಾಕರಿಸಿದ್ದಾಳೆ.

ತ್ರಿಶ್ಶೂರ್‌ನಲ್ಲಿ ಪ್ರವಾಹಕ್ಕೆ ಸುನಿತಾ ಎಂಬ ಮಹಿಳೆಯ ಸಹಾಯಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದವು. ಮನೆಯಲ್ಲಿ ಪ್ರವಾಹ ಮಟ್ಟ ಹೆಚ್ಚಳವಾಗುತ್ತಿದ್ದರೂ ತನ್ನ ಮನೆಯಲ್ಲಿ ಆಶ್ರಯ ಪಡೆದಿದ್ದ ಬೀದಿನಾಯಿಗಳು, ಹಾಗೂ ಬೇರೆ ಮನೆಯ ನಾಯಿಗಳನ್ನು ಬಿಟ್ಟು ಬರಲು ನಿರಾಕರಿಸಿದ್ದಾಳೆ.

ಈ ಹಿನ್ನೆಲೆಯಲ್ಲಿ ಪ್ರಾಣಿ ದಯಾ ಸಂಘಟನೆಗಳು ಶ್ವಾನಗಳ ರಕ್ಷಣೆಗೆ ಧಾವಿಸಿದ ಬಳಿಕ ಸಂತ್ರಸ್ತ ಶಿಬಿರಕ್ಕೆ ಬರಲು ಒಪ್ಪಿಕೊಂಡಿದ್ದಾಳೆ