ಭಾರೀ ಪ್ರವಾಹದಿಂದ ಕೊಡಗಿನ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿ. ನೆರವಿನ ನಿರೀಕ್ಷೆಯಲ್ಲಿ ಪ್ರವಾಹ ಪೀಡಿತರು | ಪ್ರವಾಹಪೀಡಿತ ಕೊಡಗಿನ ಸಂತ್ರಸ್ತ ಜನತೆಗೆ ನೆರವಾಗುವ ಕಾರ್ಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು: ಸಿದ್ದರಾಮಯ್ಯ
ಬೆಂಗಳೂರು: ಭಾರೀ ಪ್ರವಾಹದಿಂದ ತತ್ತರಿಸುವ ಕೊಡಗು ಜಿಲ್ಲೆಗೆ ಕೂಡಲೇ ನೆರೆ ಪರಿಹಾರ ಬಿಡುಗಡೆಮಾಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರಸರ್ಕಾರವನ್ನು ಒತ್ತಾಯಿಸಿದ್ದಾರೆ.
ನೆರೆ ಪೀಡಿತ ಕೊಡಗಿನ ಪರಿಸ್ಥಿತಿಯನ್ನು ಪ್ರಧಾನಿ ಮೋದಿ ಪರಿಶೀಲಿಸಬೇಕು. ಪ್ರಥಮ ಚಿಕಿತ್ಸೆ, ಪುನರ್ವಸತಿ ಮತ್ತು ಪುನರ್ನಿರ್ಮಾಣ ಕೆಲಸಗಳಿಗೆ ಕೂಡಲೇ ನೆರೆ ಪರಿಹಾರವನ್ನು ಬಿಡುಗಡೆ ಮಾಡಬೇಕು, ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕೊಡಗಿನಲ್ಲಿ ಕಂಡು ಕೇಳರಿಯದ ಜಲಪ್ರಳಯಕ್ಕೆ ಜನ ತತ್ತರಿಸಿದ್ದಾರೆ. ನೂರಾರು ಮನೆಗಳು ನೆಲಸಮಾಧಿಯಾಗಿದ್ದು ಗುಡ್ಡಗಳು ಕುಸಿಯುತ್ತಿವೆ. ವರುಣನ ರೌದ್ರಾವತಾರಕ್ಕೆ ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ.
ಜಿಲ್ಲೆಯಾದ್ಯಂತ ಸೇನೆ ಹಾಗೂ ಎನ್ ಡಿಆರ್ ಎಫ್ ತಂಡಗಳು ಜನತರ ರಕ್ಷಣೆಯಲ್ಲಿ ಕಾರ್ಯಪ್ರವೃತ್ತವಾಗಿವೆ.
