ಮಹಾಮಳೆಗೆ ತತ್ತರಿಸಿದ ಕೇರಳ! ರಕ್ಷಣಾ ಕಾರ್ಯಾಚರಣೆಗೆ ಇಸ್ರೋ ಸಹಾಯ! ಐದು ಉಪಗ್ರಹಗಳ ಮೂಲಕ ಮಾಹಿತಿ ರವಾನೆ! ವಾಸ್ತವಿಕ ಸ್ಥಿತಿಗತಿಗಳ ಚಿತ್ರ ಕಳುಹಿಸುತ್ತಿರುವ ಉಪಗ್ರಹಗಳು  

ಚೆನ್ನೈ(ಆ.19): ಪ್ರವಾಹಪೀಡಿತ ಕೇರಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಇಸ್ರೊದ ಐದು ಉಪಗ್ರಹಗಳು ಪ್ರಮುಖ ಪಾತ್ರ ವಹಿಸುತ್ತಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರವಾಹ ಸ್ಥಿತಿಗತಿಯ ನಿಗಾವಹಿಸುವ ಮತ್ತು ಪರಿಹಾರ ಕಾರ್ಯಾಚರಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ಉಪಗ್ರಹಗಳು ನೆರವಾಗುತ್ತಿವೆ. ಒಶನ್‌ಸ್ಯಾಟ್‌-2, ರಿಸೋರ್ಸ್‌ ಸ್ಯಾಟ್‌-2, ಕಾರ್ಟೊ ಸ್ಯಾಟ್‌-2, ಕಾರ್ಟೊ ಸ್ಯಾಟ್‌-2ಎ, ಇನ್‌ ಸ್ಯಾಟ್‌ 3 ಡಿಆರ್‌ ಉಪಗ್ರಹಗಳು ಸೂಕ್ತ ಸಮಯದಲ್ಲಿ ವಾಸ್ತವಿಕ ಸ್ಥಿತಿಗತಿಗಳ ಚಿತ್ರಗಳನ್ನು ತೆಗೆದು ಕಳಿಸುತ್ತಿವೆ.

ಈ ಚಿತ್ರ ಸಹಿತ ಮಾಹಿತಿಗಳನ್ನು ಆಧರಿಸಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಲಾಗುತ್ತಿದೆ 
ಈ ಉಪಗ್ರಹಗಳು ನೀಡುವ ಡೇಟಾ ಆಧರಿಸಿ ಪ್ರವಾಹಕ್ಕೆ ಸಂಬಂಧಿಸಿದ ಮುನ್ನೆಚ್ಚರಿಕೆ , ಮಳೆಯ ಬಳಿಕ ಮುಳುಗಡೆಯಾಗಬಹುದಾದ ಪ್ರದೇಶಗಳು ಮತ್ತು ಹವಾಮಾನದ ವಿವರಗಳನ್ನು ಪ್ರಕಟಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಉಪಗ್ರಹಗಳು ನೀಡುವ ಡೇಟಾ ಹೈದರಾಬಾದ್‌ನಲ್ಲಿರುವ ನ್ಯಾಷನಲ್‌ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌ನ ಡಿಸಿಷನ್‌ ಸಪೋರ್ಟ್‌ ಸೆಂಟರ್‌ನಲ್ಲಿ ಸಂಗ್ರಹಗೊಂಡಿರುತ್ತದೆ. ಅದನ್ನು ನಿಯಮಿತವಾಗಿ ಇಸ್ರೊ ಕೇಂದ್ರದಲ್ಲಿ ಪ್ರಸಾರ ಮಾಡಲಾಗುತ್ತಿದೆ.