ಹಡಗಿನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಸಿದರೆ ಅದು ಹೇಗೆ ಮುಳುಗುವುದೋ ಹಾಗೆಯೇ ಭೂಮಿ ಮೇಲಿನ ಮಿತಿ ಮೀರಿದ ಜನಸಂಖ್ಯೆಯಿಂದಾಗಿ ಭೂಮಿಯ ಮೇಲೆ ಅತೀವ ಒತ್ತಡ ಉಂಟಾಗಿದೆಯಂತೆ. ಹಾಗಿದ್ದರೆ ಭೂಮಿಯ ಸಾಮರ್ಥ್ಯ ಎಷ್ಟು ಈ ಬಗ್ಗೆ ಒಂದು ಸ್ಟೋರಿ ಇಲ್ಲಿದೆ.
ಪರಿಸರ ಮಿತಿ ಮೀರಿದ ಮಾನವ ಕುಲ
ಎಲ್ಲದಕ್ಕೂ ಎಲ್ಲರಿಗೂ ಒಂದು ಲಿಮಿಟ್ ಅಂತ ಇರುತ್ತೆ. ವಿಮಾನದಲ್ಲಿ ಪಯಣಿಸಬೇಕಾದರೆ ಇಷ್ಟೇ ಜನ ಇರಬೇಕು ಎಂಬ ಲಿಮಿಟ್ ಇರುತ್ತೆ. ಹಾಗೆಯೇ ಬೋಟು ಹಡಗುಗಳಲ್ಲೂ ಅಷ್ಟೇ ಸಾಮರ್ಥ್ಯ ಮೀರಿದರೆ ಅನಾಹುತ ಪಕ್ಕಾ. ಅದೇ ರೀತಿ ಕಾಡುಗಳಲ್ಲಿರುವ ಕಾಡುಪ್ರಾಣಿಗಳ ಸಂಖ್ಯೆಯೂ ನಿಯಂತ್ರಣದಲ್ಲಿರುತ್ತದೆ. ಅವುಗಳಲ್ಲಿ ಸ್ವಲ್ಪ ಏರುಪೇರುಗಳಾದರೂ ಏನಾದರೊಂದು ಪರಿಸರ ವೈಪರೀತ್ಯವಾಗುತ್ತದೆ. ಹಾಗೆಯೇ ಭೂಮಿ ಮೇಲಿರುವ ಮನುಷ್ಯನ ಜನಸಂಖ್ಯೆಗೂ ಒಂದು ಲಿಮಿಟ್ ಬೇಕು ಎನ್ನುತ್ತದೆ ಒಂದು ಹೊಸ ಅಧ್ಯಯನ. ಹೌದು ಕಾಡಿನಲ್ಲಿರುವ ಪ್ರಾಣಿಗಳ ಸಂಖ್ಯೆಯಲ್ಲಿ ಮಿತಿ ಮೀರಿದರೆ ಅಥವಾ ಏರುಪೇರಾದರೆ ಹೇಗೋ ಹಾಗೆಯೇ ಭೂಮಿ ಮೇಲಿನ ಜನಸಂಖ್ಯೆ ಮಿತಿ ಮೀರಿದರೆ ಭೂಮಿಗೂ ಒತ್ತಡ ಉಂಟಾಗುತ್ತದೆ ಎಂಬುದು ಹೊಸ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಹಾಗಿದ್ದರೆ ಭೂಮಿಯ ಸಾಮರ್ಥ್ಯಕ್ಕೆ ತಕ್ಕಂತೆ ಲೆಕ್ಕಾಚಾರ ಹಾಕೋದಾದರೆ ನಮ್ಮ ಅಂದರೆ ಮನುಷ್ಯರ ಜನಸಂಖ್ಯೆ ಎಷ್ಟಿರಬೇಕು. ಹಾಗೂ ಈಗ ಎಷ್ಟಿದೆ ಈ ಬಗ್ಗೆ ಒಂದು ಸ್ಟೋರಿ ಇಲ್ಲಿದೆ.
ಹಡಗಿನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಸಿದರೆ ಅದು ಹೇಗೆ ಮುಳುಗುವುದೋ ಹಾಗೆಯೇ ಭೂಮಿ ಮೇಲಿನ ಮಿತಿ ಮೀರಿದ ಜನಸಂಖ್ಯೆಯಿಂದಾಗಿ ಭೂಮಿಯ ಮೇಲೆ ಅತೀವ ಒತ್ತಡ ಉಂಟಾಗಿದೆಯಂತೆ. ಇತ್ತೀಚಿನ ಅಧ್ಯಯನವೊಂದು ಭೂಮಿಯ ಜನಸಂಖ್ಯೆಯು ಈಗ ಸುಮಾರು 8.3 ಶತಕೋಟಿಯಾಗಿದ್ದು, ಇದು ಗ್ರಹದ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತಿದೆ ಎಂದು ವರದಿ ಮಾಡಿದೆ. ಭೂಮಿ ಮೇಲಿರುವ ಮನುಷ್ಯರು ಇಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಇಲ್ಲಿರುವ ಜನರ ಬಳಕೆಗೆ ತಕ್ಕಂತೆ ಪ್ರಕೃತಿಯೇ ಉತ್ಪಾದಿಸುವುದಕ್ಕೂ ಮೊದಲೇ ಅವುಗಳನ್ನು ಖಾಲಿ ಮಾಡಿ ಬಿಡುತ್ತಿದ್ದಾರೆ. ವಿಜ್ಞಾನಿಗಳು ಹೇಳುವಂತೆ ನಾವು ಭೂಮಿಯು ಚೇತರಿಸಿಕೊಳ್ಳುವುದಕ್ಕಿಂತ ಶೇಕಡಾ 70 ರಿಂದ 80 ಪ್ರತಿಶತ ವೇಗವಾಗಿ ಅದರ ಸಂಪನ್ಮೂಲಗಳನ್ನು ಬಳಸುತ್ತಿದ್ದೇವೆ. ಇದರರ್ಥ ನಮ್ಮ ಪ್ರಸ್ತುತ ಜೀವನ ವಿಧಾನವನ್ನು ಬೆಂಬಲಿಸಲು ನಮಗೆ ಹೆಚ್ಚುವರಿಯಾಗಿ ಸುಮಾರು 1.7 ರಿಂದ 1.8 ಭೂಮಿಯ ಅಗತ್ಯವಿದೆ.
2070ರ ವೇಳೆಗೆ 12 ಶತಕೋಟಿ ತಲುಪಲಿದೆಯೇ ಜನಸಂಖ್ಯೆ?
ಈ ಬಗ್ಗೆ ಎನ್ವಿರಾನ್ಮೆಂಟಲ್ ರಿಸರ್ಚ್ ಲೆಟರ್ಸ್‌ನಲ್ಲಿ ಸಂಶೋಧನ ವರದಿ ಪ್ರಕಟವಾಗಿದ್ದು, ಇದರ ನೇತೃತ್ವವನ್ನು ಫ್ಲಿಂಡರ್ಸ್ ವಿಶ್ವವಿದ್ಯಾಲಯದ ಕೋರಿ ಬ್ರಾಡ್‌ಶಾ ವಹಿಸಿದ್ದರು. ಇದು 200 ವರ್ಷಗಳ ಜನಸಂಖ್ಯಾ ಮಾಹಿತಿಯನ್ನು ಬಳಸಿ ಅಧ್ಯಯನ ಮಾಡಿದ್ದು, ಈ ಹಿಂದೆ, ಮಾನವ ಜನಸಂಖ್ಯೆ ಮತ್ತು ಸಂಪನ್ಮೂಲ ಬಳಕೆ ಸಮತೋಲನದಲ್ಲಿತ್ತು. ಆದರೆ 1950 ರ ದಶಕದ ನಂತರ, ವೇಗದ ಜನಸಂಖ್ಯಾ ಬೆಳವಣಿಗೆ, ಕೈಗಾರಿಕೀಕರಣ ಮತ್ತು ಹೆಚ್ಚಿನ ಬಳಕೆಯಿಂದಾಗಿ ಜನಸಂಖ್ಯೆ ಹಾಗೂ ಭೂಮಿಯ ಮೇಲಿ ಸಂಪನ್ಮೂಲದ ಸಮತೋಲನದಲ್ಲಿ ಏರುಪೇರಾಗಿದೆ. ಭೂಮಿಯ ಸಾಮರ್ಥ್ಯ 2.5 ಕೋಟಿ ಜನರ ಇರುವಿಕೆಗೆ ಆಗಿದೆ. ಆದರೆ ಭೂಮಿಯಲ್ಲಿರು ಮಾನವ ಜನಸಂಖ್ಯೆ ಪ್ರಸ್ತುತ 8.3 ಶತಕೋಟಿ. ಅಂದರೆ ಭೂಮಿಯ ಸಾಮರ್ಥ್ಯಕ್ಕಿಂತ ಸುಮಾರು 4 ಪಟ್ಟು ಹೆಚ್ಚಾಗಿದೆ ಮಾನವ ಜನಸಂಖ್ಯೆ.
ಅಲ್ಲದೇ 2060 ರ ದಶಕದ ಅಂತ್ಯ ಅಥವಾ 2070 ರ ದಶಕದ ವೇಳೆಗೆ ಜಾಗತಿಕ ಜನಸಂಖ್ಯೆಯು ಸುಮಾರು 11.7 ರಿಂದ 12.4 ಶತಕೋಟಿ ತಲುಪಬಹುದು ಎಂದು ಅಧ್ಯಯನವು ಸೂಚಿಸಿದೆ. ಆದರೆ ಯಾವುದೇ ದೊಡ್ಡ ಬದಲಾವಣೆಗಳಿಲ್ಲದೆ ಭೂಮಿಯು ಈ ಮಟ್ಟದಲ್ಲಿ ಜನರ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ. ಜನರು ಹೆಚ್ಚಿನ ಸಂಪನ್ಮೂಲಗಳನ್ನು ಬಳಸುವುದರಿಂದ ಭೂಮಿಯಲ್ಲಿ ಹವಾಮಾನ ಬದಲಾವಣೆ, ವನ್ಯಜೀವಿಗಳ ನಷ್ಟ, ಅರಣ್ಯನಾಶ ಮತ್ತು ಸಂಪನ್ಮೂಲಗಳ ಕೊರತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಇದನ್ನೂ ಓದಿ: ಪೊಲೀಸ್ ಮಗಳ ಹೆಗಲೇರಿದ ತಂದೆ: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಈ ಅಪ್ಪ-ಮಗಳ ಸಂಭ್ರಮಕ್ಕೆ ನೆಟ್ಟಿಗರು ಫಿದಾ!
ಜಾಗತಿಕ ಜನಸಂಖ್ಯೆ ಒಂದೇ ಸಮಸ್ಯೆಯಲ್ಲ, ಶ್ರೀಮಂತ ರಾಷ್ಟ್ರಗಳ ಜನರು ಹೆಚ್ಚಿನ ಸಂಪನ್ಮೂಲಗಳನ್ನು ಬಳಸುತ್ತಾರೆ, ಇದು ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ ಎಂದು ಅಧ್ಯಯನ ಹೇಳಿದೆ. ಇದು ಸುಸ್ಥಿರ ಜೀವನ, ಉತ್ತಮ ಶಿಕ್ಷಣ ಮತ್ತು ಕುಟುಂಬ ಯೋಜನೆಯ ಅಗತ್ಯವನ್ನು ಒತ್ತಿ ಹೇಳುತ್ತದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಜಾಗತಿಕವಾಗಿ ಒಟ್ಟಾಗಿ ಕೆಲಸ ಮಾಡುವುದು ಭವಿಷ್ಯದ ಪೀಳಿಗೆಗೆ ಗ್ರಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ.


