ಒಡಿಶಾದ ಎನ್ಐಟಿ ಸಂಶೋಧಕರು ಹಲಸಿನ ಸಾರವನ್ನು ಬಳಸಿ ಕುಡಿಯುವ ನೀರಿನಿಂದ ಅಪಾಯಕಾರಿ ಫ್ಲೋರೈಡ್ ತೆಗೆದುಹಾಕುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವಿಧಾನವು ಕೇವಲ 10 ನಿಮಿಷಗಳಲ್ಲಿ ಶೇ 90ರಷ್ಟು ಫ್ಲೋರೈಡ್ ಅನ್ನು ನಿವಾರಿಸುತ್ತದೆ. .
ನವದೆಹಲಿ: ಒಡಿಶಾದ ರೂರ್ಕೆಲಾದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (ಎನ್ಐಟಿ National Institute of Technology, Rourkela, Odisha) ಸಂಶೋಧಕರು ಹಲಸಿನ ಸಾರವನ್ನು (Jackfruit) ಬಳಸಿ, ಕುಡಿಯುವ ನೀರಿನಿಂದ ಅಪಾಯಕಾರಿ ಹೆಚ್ಚುವರಿ ಫ್ಲೋರೈಡ್ (Fluoride) ತೆಗೆದು ಹಾಕುವ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಅದಕ್ಕೆ ಪೇಟೆಂಟ್ ಪಡೆದುಕೊಂಡಿದ್ದಾರೆ.
ಸುಮಾರು 10 ನಿಮಿಷಗಳಲ್ಲಿ ಶೇ 90 ಕ್ಕಿಂತ ಹೆಚ್ಚು ಫ್ಲೋರೈಡ್
ಹಲಸಿನ ಹಣ್ಣಿನ ಸಾರದಿಂದ ಆಕ್ಟಿವೇಟೆಡ್ ಕಾರ್ಬನ್ (Activated Carbon) ತಯಾರಿಸಿ, ಅದಕ್ಕೆ ಜಿರ್ಕೋನಿಯಮ್ (Zirconium) ಸೇರಿಸುವ ಮೂಲಕ ಅದರ ಫ್ಲೋರೈಡ್ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಪರೀಕ್ಷೆಯ ಸಂದರ್ಭದಲ್ಲಿ ಈ ವಸ್ತು ಸುಮಾರು 10 ನಿಮಿಷಗಳಲ್ಲಿ ಶೇ 90 ಕ್ಕಿಂತ ಹೆಚ್ಚು ಫ್ಲೋರೈಡ್ ಅನ್ನು ತೆಗೆದುಹಾಕಿದೆ.
ಕೈಗೆಟುಕುವ ದರದಲ್ಲಿ ಶುದ್ಧ ನೀರು
ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಿಗೆ ಅತ್ಯಂತ ಕೈಗೆಟುಕುವ ದರದಲ್ಲಿ ಶುದ್ಧ ನೀರನ್ನು (Drinking Water) ಒದಗಿಸಲು ಸಹಕಾರಿಯಾಗಿದೆ. ಕೃಷಿ ತ್ಯಾಜ್ಯ ಎಂದು ಎಸೆಯಲಾಗುವ ಹಲಸಿನ ಸಾರ ಬಳಸಿಕೊಳ್ಳುವುದರಿಂದ, ಇದು ಪರಿಸರ ಮಾಲಿನ್ಯವನ್ನು ತಡೆಯುವ ಜೊತೆಗೆ ನೀರಿನ ಶುದ್ಧೀಕರಣಕ್ಕೆ ನೆರವಾಗಲಿದೆ ಎನ್ನುವುದು ಸಂಶೋಧಕರ ಅಭಿಪ್ರಾಯ.
ಇದನ್ನೂ ಓದಿ: ಕಾಡಲ್ಲಿ ಅಡಗುವುದಿಲ್ಲ, ವಿಷಕಾರಿ ಹಾವುಗಳ ಗಾಢ ಬಣ್ಣಗಳ ರಹಸ್ಯ ಬಯಲು! ಪ್ರಕೃತಿಯ 'ವಾರ್ನಿಂಗ್ ಸಿಗ್ನಲ್' ನಿಯಮವೇ ಬೇರೆ!
ಇದನ್ನೂ ಓದಿ: 2100ರ ವೇಳೆಗೆ ಭೂಮಿಯ ಮೇಲೆ ಮಾನವಕುಲ ವಿನಾಶ ಖಂಡಿತ: ಪರಮಾಣು ಯುದ್ಧ, AI ದುರ್ಬಳಕೆ ಕುರಿತು ಲ್ಯಾನ್ಸೆಟ್ ಎಚ್ಚರಿಕೆ

