‘ಶ್ರೀಮಂತಿಕೆ, ವರ್ಚಸ್ಸು ಇರುವ ಝೈದ್‌ ಖಾನ್‌ರಿಂದ ಆ್ಯಕ್ಟಿಂಗ್‌ ತೆಗೆಸೋ ಬಗ್ಗೆ ಭಯ ಇತ್ತು. ಆದರೆ ಈತನದು ಚಪ್ಪಲಿ ದೂರ ಇಟ್ಟು ಹತ್ತಿರ ಕೂರುವ ಸರಳತೆ. ಹೀಗಾಗಿ ನಟನೆ ತೆಗೆಸೋದು ಕಷ್ಟಆಗಲಿಲ್ಲ’ ಎಂದು ಖ್ಯಾತ ನಿರ್ದೇಶಕ ಜಯತೀರ್ಥ ಹೇಳಿದ್ದಾರೆ. ಜಯತೀರ್ಥ ನಿರ್ದೇಶನದ, ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಪುತ್ರ ಝೈದ್‌ ಖಾನ್‌ ನಟನೆಯ ‘ಬನಾರಸ್‌’ ಚಿತ್ರದ ‘ಮಾಯಗಂಗೆ’ ಹಾಡು ಬಿಡುಗಡೆ ಕಾರ್ಯಕ್ರಮ ಈ ಮಾತಿಗೆ ವೇದಿಕೆಯಾಯ್ತು.

‘ಶ್ರೀಮಂತಿಕೆ, ವರ್ಚಸ್ಸು ಇರುವ ಝೈದ್‌ ಖಾನ್‌ರಿಂದ ಆ್ಯಕ್ಟಿಂಗ್‌ ತೆಗೆಸೋ ಬಗ್ಗೆ ಭಯ ಇತ್ತು. ಆದರೆ ಈತನದು ಚಪ್ಪಲಿ ದೂರ ಇಟ್ಟು ಹತ್ತಿರ ಕೂರುವ ಸರಳತೆ. ಹೀಗಾಗಿ ನಟನೆ ತೆಗೆಸೋದು ಕಷ್ಟಆಗಲಿಲ್ಲ’ ಎಂದು ಖ್ಯಾತ ನಿರ್ದೇಶಕ ಜಯತೀರ್ಥ ಹೇಳಿದ್ದಾರೆ. ಜಯತೀರ್ಥ ನಿರ್ದೇಶನದ, ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಪುತ್ರ ಝೈದ್‌ ಖಾನ್‌ ನಟನೆಯ ‘ಬನಾರಸ್‌’ ಚಿತ್ರದ ‘ಮಾಯಗಂಗೆ’ ಹಾಡು ಬಿಡುಗಡೆ ಕಾರ್ಯಕ್ರಮ ಈ ಮಾತಿಗೆ ವೇದಿಕೆಯಾಯ್ತು.

‘ಝೈದ್‌ನನ್ನು ಇಲ್ಲಿ ಹೊಡೆದಾಟ, ಬಡಿದಾಟದ ಹೀರೋ ಆಗಿ ತೋರಿಸಲಿಲ್ಲ. ನೀನು ಮನಸ್ಸುಗಳನ್ನು ಜೋಡಿಸಿ ಬಾ, ಒಡೆದು ಹೊಡೆದು ಬರಬೇಡ ಅಂತ ಆತನಲ್ಲಿ ಹೇಳಿದ್ದೆ. ಆತನ ಸಿನಿಮಾ ಪ್ರೀತಿ ನೋಡಿದರೆ ಖಂಡಿತಾ ಉತ್ತಮ ಕಲಾವಿದ ಆಗ್ತಾನೆ. ಕಾಶಿಯ 84 ಘಾಟ್‌ಗಳಲ್ಲಿ ಈ ಸಿನಿಮಾ ಚಿತ್ರೀಕರಿಸಿದ್ದೇವೆ. ಹೀಗೆ ಕಾಶಿ ತೋರಿಸಿದ ಮೊದಲ ದಕ್ಷಿಣ ಭಾರತೀಯ ಚಿತ್ರ ನಮ್ಮದು. ಇದಕ್ಕೆ ಅಲ್ಲಿನ ಸರ್ಕಾರ ನಮಗೆ ಸಬ್ಸಿಡಿ ಹಣವನ್ನೂ ನೀಡಿದೆ. ಕಾಶಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಹೆಣ ಸುಡುತ್ತಿದ್ದಾಗಲೇ ಪ್ರೇಮಗೀತೆ ಚಿತ್ರೀಕರಿಸಿದ್ದು ಮರೆಯಲಾರದ ಅನುಭವ. ಇಡೀ ಚಿತ್ರ ಪೊಯೆಟಿಕ್‌ ಆಗಿದೆ’ ಎಂದು ಅವರು ಹೇಳಿದರು.

ನಿರ್ಮಾಪಕಿ ಶೈಲಜಾ ನಾಗ್‌ ಹಾಡು ಬಿಡುಗಡೆ ಮಾಡಿದರು. ನಾಯಕ ಝೈದ್‌ ಮಾತನಾಡಿ, ‘ಇದು ನನ್ನ ಕನಸಿನ ಪ್ರಾಜೆಕ್ಟ್. ನಾನು ಸಿನಿಮಾ ರಂಗಕ್ಕೆ ಬರೋದು ಮನೆಯವರಿಗೆ ಇಷ್ಟಇರಲಿಲ್ಲ. ಹೀಗಾಗಿ ಅವರ ಬೆಂಬಲವೂ ಇರಲಿಲ್ಲ. ನಿರ್ಮಾಪಕ ತಿಲಕರಾಜ್‌ ಬಲ್ಲಾಳ್‌ ನನ್ನ ಮುಂಬೈನಲ್ಲಿ ನಟನೆ ಕ್ಲಾಸಿಗೆ ಸೇರಿಸಿ ನನ್ನ ಚಿತ್ರಕ್ಕೂ ದುಡ್ಡು ಹಾಕಿದ್ದಾರೆ. ಅವರೇ ನನ್ನ ಗಾಡ್‌ ಫಾದರ್‌’ ಎಂದರು. 

ಜಮೀರ್ ಅಹಮದ್‌ ಪುತ್ರನ ಎರಡನೇ ಚಿತ್ರಕ್ಕೆ Tharun Sudhir ನಿರ್ದೇಶನ!

ನಾಯಕಿ ಸೋನಲ್‌ಗೆ ಆರಂಭದಲ್ಲಿ ಝೈದ್‌ಗೆ ಸಖತ್‌ ಆ್ಯಟಿಟ್ಯೂಡ್‌ ಇದೆ ಅಂತನಿಸಿತಂತೆ. ಆದರೆ ಈಗ ಅವರಷ್ಟು ಕ್ಲೋಸ್‌ ಫ್ರೆಂಡ್‌ ಮತ್ತೊಬ್ಬರಿಲ್ಲವಂತೆ. ನಿರ್ಮಾಪಕ ತಿಲಕರಾಜ್‌ ಬಲ್ಲಾಳ್‌, ಭಾರತೀಯ ಚಿತ್ರರಂಗಕ್ಕೆ ಮತ್ತೊಬ್ಬ ಖಾನ್‌ ಎಂಟ್ರಿಯಾಗಿದೆ ಎಂದು ಸಂಭ್ರಮಿಸಿದರು.

ಈಗಾಗಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಬನಾರಸ್, ಈಗ ಹಾಡಿನ ಮೂಲಕ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಝೈದ್ ಖಾನ್ ಚೊಚ್ಚಲ ಸಿನಿಮಾ ಹೇಗಿರಲಿದೆ, ಮೊದಲ ಸಿನಿಮಾದಲ್ಲಿ ಹೇಗೆ ನಟಿಸಿದ್ದಾರೆ ಎಂದು ಕಾದು ನೋಡಬೇಕು. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ಮತ್ತು ಹಾಡು ಅಭಿಮಾನಿಗಳ ಹೃದಯ ಗೆದ್ದಿದೆ. 

Puneeth Rajkumar ಸಮಾಧಿ ಬಳಿ 'ಬನಾರಸ್' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ಝೈದ್ ಖಾನ್ ಮೊದಲ ಸಿನಿಮಾದ ಮೊದಲ ಹಾಡು ರಿಲೀಸ್ ವೇಳೆ ಗೀತರಚನಕಾರ ನಾಗೇಂದ್ರ ಪ್ರಸಾದ್‌, ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌, ಅಭಿಷೇಕ್‌ ಅಂಬರೀಶ್‌, ವಿನೋದ್‌ ಪ್ರಭಾಕರ್‌, ಲಹರಿ ವೇಲು, ಲಹರಿ ಚಂದ್ರು, ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‌, ಛಾಯಾಗ್ರಾಹಕ ಅದ್ವೈತ್‌ ಹಾಗೂ ಚಿತ್ರತಂಡದವರು ಹಾಜರಿದ್ದರು. ಲಹರಿ ಮ್ಯೂಸಿಕ್‌ ಮತ್ತು ಟಿ ಸೀರಿಸ್‌ ಯೂಟ್ಯೂಬ್‌ನಲ್ಲಿ ‘ಮಾಯಗಂಗೆ’ ಹಾಡು ಕನ್ನಡ ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗಿದೆ.