ಯೆಲ್ಲೋ ಗ್ಯಾಂಗ್ಸ್ ಕುತೂಹಲ ಭರಿತ ಟ್ರೈಲರ್ ರಿಲೀಸ್ ಆಗಿದ್ದು ಚಿತ್ರದ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ.
ಕೆಲವು ಸಿನೆಮಾಗಳೇ ಹಾಗೆ, ಸದ್ದೇ ಇಲ್ಲದೇ ಶೂಟಿಂಗ್ ಮುಗಿಸಿ, ತದನಂತರ ರಿಲೀಸ್ ಆಗುವ ಟೀಸರ್, ಟ್ರೈಲರ್ ಗಳಿಂದ ಕ್ಯೂರಿಯಾಸಿಟಿಯನ್ನ ಹುಟ್ಟಿಸುತ್ತವೆ. ಅಂಥಾ ಸಿನೆಮಾಗಳ ಪಟ್ಟಿಗೆ ಸೇರಿ ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಹುಟ್ಟಿಸುತ್ತಿರುವ ಚಿತ್ರಗಳ ಸಾಲಿನಲ್ಲಿ ರವೀಂದ್ರ ಪರಮೇಶ್ವರಪ್ಪ ನಿರ್ದೇಶನದ ಯೆಲ್ಲೋ ಗ್ಯಾಂಗ್ಸ್ ಕೂಡಾ ಸೇರಿಕೊಂಡಿದೆ. ಇದೀಗ ಈ ಚಿತ್ರದ ರೋಚಕ ಟ್ರೈಲರ್ ಲಾಂಚ್ ಆಗಿದೆ.
ಈಗಾಗಲೇ ರಿಲೀಸ್ ಆಗಿದ್ದ ರೋಚಕತೆಯ ಟೀಸರ್ ನಿಂದ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದ ಚಿತ್ರ ಯೆಲ್ಲೋ ಗ್ಯಾಂಗ್ಸ್. ಈಗ ಕುತೂಹಲ ಭರಿತ ಟ್ರೈಲರ್ ರಿಲೀಸ್ ಆಗಿ ಚಿತ್ರದ ಮೇಲಿನ ನಿರೀಕ್ಷೆಗಳನ್ನು ದುಪ್ಪಾಟ್ಟಾಗಿಸಿದೆ. ಟೀಸರ್ ನೋಡಿ ಥ್ರಿಲ್ ಆಗಿದ್ದ ಸಿನಿಪ್ರಿಯರು, ಚಿತ್ರದ ಆತ್ಮದಂತಿರುವ ಟ್ರೈಲರ್ ಗಾಗಿ ಎದುರು ನೋಡಿದ್ದರು. ಈಗ ರಿಲೀಸ್ ಆಗಿರುವ ಟ್ರೈಲರ್ ಆ ಕುತೂಹಲಕ್ಕೆ, ಕಾಯುವಿಕೆಗೆ ಸಾರ್ಥಕತೆ ನೀಡಿದಂತಿದೆ.
ಹೌದು, ವಿಭಿನ್ನ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಗೊಂಡಿರೋ ಈ ಟ್ರೈಲರ್ ನಲ್ಲಿ ಹಲವು ಇಂಟ್ರಸ್ಟಿಂಗ್ ವಿಚಾರಗಳ ಎಳೆ ತೋರಿಸಿ ಪ್ರೇಕ್ಷರನ್ನ ಮತ್ತೆಲ್ಲೂ ಸಾಗದಂತೆ ಹಿಡಿದಿಟ್ಟಿದ್ದಾರೆ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ. ಈ ಟ್ರೈಲರ್ ನಲ್ಲಿ ಹಣ, ದಂಧೆ, ಕೊಲೆ, ಪೊಲೀಸ್, ಚೇಸಿಂಗ್, ಡ್ರಗ್ ಮಾಫಿಯಾ ಹೀಗೆ ರೋಮಾಂಚನ ಹುಟ್ಟಿಸುವ ಡೈಲಾಗ್, ಭಯ ಹುಟ್ಟಿಸುವ ರಕ್ತದೋಕುಳಿಯಲ್ಲಿ ಪ್ರೇಕ್ಷರನ್ನ ಥ್ರಿಲ್ ಆಗಿಸುತ್ತದೆ. ಟ್ರೈಲರ್ ನೋಡಿದವರೆಲ್ಲರೂ ಮೆಚ್ಚಿಕೊಂಡಿದ್ದು, ವೀವರ್‌ಗಳ ಸಂಖ್ಯೆಯೂ ಏರಿಕೆಯಾಗುತ್ತಲೇ ಇದೆ. ಚಿತ್ರದ ರಿಲೀಸ್ ದಿನಾಂಕವನ್ನೂ ಚಿತ್ರತಂಡ ಬಹಿರಂಗಪಡಿಸಿದ್ದು, ನವೆಂಬರ್ 11 ರಂದು ರಾಜ್ಯಾದ್ಯಂತ ಯೆಲ್ಲೂ ಗ್ಯಾಂಗ್ಸ್ ಪ್ರೇಕ್ಷಕರನ್ನ ತುದಿಸೀಟಿಗೆ ತಂದು ಕೂರಿಸಲು ಸಜ್ಜಾಗಿದೆ.
ರವೀಂದ್ರ ಪರಮೇಶ್ವರಪ್ಪ ನಿರ್ದೇಶನದ 'ಯೆಲ್ಲೋ ಗ್ಯಾಂಗ್ಸ್' ಬಿಡುಗಡೆಗೆ ಫಿಕ್ಸ್ ಆಯ್ತು ಡೇಟ್
ಯೆಲ್ಲೋ ಗ್ಯಾಂಗ್ಸ್ ನ ತುಣುಕಗಳನ್ನ ನೋಡಿದ್ರೆ, ಎಲ್ಲೂ ಅಸಹಜವೆನಿಸದೇ, ದೃಶ್ಯಗಳು ನೈಜವಾಗಿ ಮೂಡಿಬಂದಂತಿವೆ. ಕಾಳಧನ, ಡ್ರಗ್ ಮಾಫಿಯಾ ಹೀಗೆ ರೋಚಕತೆ ಯಲ್ಲೇ ಮಿಂದೇಳಿಸುವ ಯೆಲ್ಲೂ ಗ್ಯಾಂಗ್ಸ್ ನಲ್ಲಿ ದೇವ್ ದೇವಯ್ಯ, ಬಲ ರಾಜ್ವಾಡಿ, ಅರ್ಚನಾ ಕೊಟ್ಟಿಗೆ, ಪ್ರದೀಪ್ ಪೂಜಾರಿ, ಅರುಣ್, ಸತ್ಯ, ನಾಟ್ಯರಂಗ, ವಿಠಲ್ ಪರೀಟ, ಸತ್ಯ ಉಮ್ಮತ್ತಾಲ್, ಮಲ್ಲಿಖಾರ್ಜುನ್ ಮುಂತಾದವರ ತಾರಾಗಣವಿದೆ.
'ಯೆಲ್ಲೋ ಗ್ಯಾಂಗ್' ಟೀಸರ್ ನೋಡಿ ಮರುಳಾಗಿ; ಭಟ್ಟರ ಹುಡುಗರ ಸಿನಿಮಾ!
ಸುಜ್ಞಾನ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ರೋಹಿತ್ ಸೋವರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದ್ದು,ರವೀಂದ್ರ ಪರಮೇಶ್ವರಪ್ಪ ಮತ್ತು ಪ್ರವೀಣ್ ಕುಮಾರ್ ಜಿ ಸಂಭಾಷಣೆ ಬರೆದಿದ್ದಾರೆ. ,ವಿಭಿನ್ನ ಸ್ಟುಡಿಯೋಸ್, ಕೀ ಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಂಸ್ಥೆಗಳು ಜೊತೆಗೂಡಿ ಯೆಲ್ಲೋ ಗ್ಯಾಂಗ್ಸ್ ಅನ್ನು ನಿರ್ಮಾಣ ಮಾಡಿದ್ದು, ಮನೋಜ್ ಪಿ, ಜಿ.ಎಂ.ಆರ್ ಕುಮಾರ್(ಕೆವಿಜಿ), ಪ್ರವೀಣ್ ಡಿ.ಎಸ್ ಮತ್ತು ಜೆ.ಎನ್.ವಿ ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರಕ್ಕೆ ಹಣ ಹೂಡಿದ್ದಾರೆ. ಲೋಕೇಶ್ ಹಿತ್ತಲಕೊಪ್ಪ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದು, ಸದ್ಯ ಟ್ರೈಲರ್ ಮೂಲಕ ಹುಟ್ಟಿಸಿರುವ ಕುತೂಹಲಕ್ಕೆ ಉತ್ತರಿಸಲು ಇದೇ ನವೆಂಬರ್ ಹನ್ನೊಂದನೇ ತಾರೀಕು ಥಿಯೇಟರ್ ಗೆ ಎಂಟ್ರಿ ಕೊಡಲು ತಯಾರಾಗಿದೆ.

