ನಾಯಕ, ನಾಯಕಿ ಹಾಗೂ ವಿಲನ್‌ ಎಂಬ ರೆಗ್ಯುಲರ್‌ ಸಿನಿಮಾ ಆಚೆಗೆ ನಿಲ್ಲುವ ಕತೆಯನ್ನು ಆಯ್ಕೆ ಮಾಡಿಕೊಂಡು ಈ ಗ್ಯಾಂಗ್‌ ಮೂಲಕ ಪ್ರಯೋಗಾತ್ಮಕ ಸಿನಿಮಾ ರೂಪಿಸಿದ್ದಾರಂತೆ ನಿರ್ದೇಶಕರು.

"

ಇದೊಂದು ಕ್ರೈಮ್‌ ಥ್ರಿಲ್ಲರ್‌. ಕನ್ನಡದ ಮಟ್ಟಿಗೆ ಇದೊಂದು ಹೊಸ ಬಗೆಯ ಸಿನಿಮಾ. ಇಂಥ ಪ್ರಯೋಗಗಳು ತೀರಾ ಕಡಿಮೆ. ಅದು ‘ಯೆಲ್ಲೋ ಗ್ಯಾಂಗ್ಸ್‌’ ಚಿತ್ರದ ಮೂಲಕ ಆಗಿದೆ ಎಂಬುದು ನಿರ್ದೇಶಕರ ಮಾತು. ಬಲರಾಜ್ವಾಡಿ, ನಾಟ್ಯ ರಂಗ, ದೇವ್‌ ದೇವಯ್ಯ, ಅರ್ಚನಾ ಕೊಟ್ಟಿಗೆ, ಸತ್ಯ ಇಮ್ಮತ್ತಾಲ್‌, ಪ್ರದೀಪ್‌ ಪೂಜಾರಿ, ವಿನೀತ್‌ ಕಟ್ಟಿ, ಮಲ್ಲಿಕಾರ್ಜುನ ದೇವರಮನೆ, ನಂದಗೋಪಾಲ್‌, ರವಿ ಗಜ ಜಿಗಣಿ, ನೀನಾಸಂ ದಯಾನಂದ್‌, ಸತ್ಯ ಬಿ ಜಿ, ವಿಠ್ಠಲ್‌ ಪರೀಟ, ಅರುಣ್‌ ಕುಮಾರ್‌, ಶ್ರೀಹರ್ಷ, ಸಂಚಾರಿ ಮಧು, ಪ್ರವೀಣ್‌ ಕೆ ಬಿ, ಪವನ್‌ಕುಮಾರ್‌ ಕೆ ಚಿತ್ರದಲ್ಲಿ ನಟಿಸುತ್ತಿದ್ದಾರೆ.

'Yellow ಗ್ಯಾಂಗ್ಸ್' ಟೀಸರ್ ರಿಲೀಸ್! 

‘ಈ ಚಿತ್ರದ ಟೀಸರ್‌ ನೋಡಿದರೆ ಹೊಸ ಕ್ರೈಮ್‌ ಕತೆಯನ್ನು ಪ್ರೇಕ್ಷಕರ ಮುಂದೆ ಇಡುತ್ತಿದ್ದಾರೆ ಅನಿಸುತ್ತದೆ. ಇಂಥ ಹೊಸ ಬಗೆಯ ಸಿನಿಮಾಗಳು ಹೆಚ್ಚಾಗಲಿ. ಯೆಲ್ಲೋ ಗ್ಯಾಂಗ್ಸ್‌ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ’ ಎಂದು ನಿರ್ದೇಶಕ ಯೋಗರಾಜ್‌ ಭಟ್‌ ಹಾರೈಸಿದರು. ರೋಹಿತ್‌ ಸೋವರ್‌ ಸಂಗೀತ, ಸುಜ್ಞಾನ್‌ ಕ್ಯಾಮೆರಾ ಚಿತ್ರಕ್ಕಿದೆ. ನಿರ್ದೇಶಕರ ಜತೆ ಸೇರಿ ಪ್ರವೀಣ್‌ ಕುಮಾರ್‌ ಜಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.