ನವೆಂಬರ್ 11ಕ್ಕೆ ರವೀಂದ್ರ ಪರಮೇಶ್ವರಪ್ಪ ನಿರ್ದೇಶನದ ಯೆಲ್ಲೋ ಗ್ಯಾಂಗ್ಸ್ ಬಿಡುಗಡೆಗೆ ಸಜ್ಜಾಗಿದೆ.

ಕೊರೊನಾದಿಂದ ಕಂಗೆಟ್ಟಿದ್ದ ಚಿತ್ರರಂಗಕ್ಕೆ ಸಾಲು ಸಾಲು ಸಿನೆಮಾಗಳ ಬಿಡುಗಡೆ ಹಾಗು ಯಶಸ್ಸು ಹೊಸ ಹುಮ್ಮಸ್ಸನ್ನ ಮರಳಿ ಕೊಟ್ಟಂತಿದೆ. ಇತ್ತೀಚೆಗೆ ವಿಭಿನ್ನ ಕಥಾ ಹಂದರದ ಚಿತ್ರಗಳು ಒಂದರ ಹಿಂದೊಂದರಂತೆ ಬಂದು ಹೊಸದೊಂದು ಟ್ರೆಂಡ್ ಸೆಟ್ ಮಾಡುತ್ತಿರೋದು ಗೊತ್ತಿರೋ ವಿಚಾರ. ಹೀಗಿರುವಾಗ ಇದೇ ನವೆಂಬರ್ 11ಕ್ಕೆ ರವೀಂದ್ರ ಪರಮೇಶ್ವರಪ್ಪ ನಿರ್ದೇಶನದ ಯೆಲ್ಲೋ ಗ್ಯಾಂಗ್ಸ್ ಬಿಡುಗಡೆಗೆ ಸಜ್ಜಾಗಿದೆ.

ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿಕೊಂಡಿರುವ ರವೀಂದ್ರ ಪರಮೇಶ್ವರಪ್ಪ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮತ್ತಿದ್ದಾರೆ. ಮನರಂಜನೆಯೊಂದಿಗೆ ಪ್ರೇಕ್ಷರನ್ನ ತುದಿ ಸೀಟಿಗೆ ತಂದು ಕೂರಿಸುವ, ಕ್ಷಣ ಕ್ಷಣ ಕ್ಕೂ ಟ್ವಿಸ್ಟ್ ಕೊಟ್ಟು, ಸಂಬಂಧ ವಿಲ್ಲದವರನ್ನೆಲ್ಲಾ ತನ್ನ ಜಾಲಕ್ಕೆ ಸಿಕ್ಕಿಸಿಕೊಳ್ಳುವ ಕಥಾ ಹಂದರದೊಂದಿಗೆ ಈ ಚಿತ್ರ ಮೂಡಿಬಂದಿದೆ. ಕ್ರೈಂ ಥ್ರಿಲ್ಲರ್ ಜಾನರಿನದ್ದಾದರೂ, ಯಾವ ಚೌಕಟ್ಟಿಗೂ ಸಿಗದಂಥಾ ವಿಶೇಷವಾದ ರೀತಿಯಲ್ಲಿ, ಹಲವಾರು ಹೊಸತನಗಳೊಂದಿಗೆ ಈ ಚಿತ್ರ ರೂಪುಗೊಂಡಿದೆ.

Gandhada gudi ಟ್ರೈಲರ್ ನೋಡಿ ಮೆಚ್ಚಿದ ಸುದೀಪ್-ಯಶ್; ಸೆಲೆಬ್ರಿಟಿಗಳ ಟ್ವೀಟ್ ಸುರಿಮಳೆ

ಯೆಲ್ಲೋ ಗ್ಯಾಂಗ್ಸ್ ಎಂಬ ಶೀರ್ಷಿಕೆ ಕೇಳಿದರೇನೇ ಕುತೂಹಲ ಮೂಡತ್ತೆ. ನಿರ್ದೇಶಕರೇ ತೆರೆದಿಡುತ್ತಾ ಬಂದಿರುವ ಒಂದಷ್ಟು ಅಂಶಗಳಲ್ಲಿ ಇದೊಂದು ಚೌಕಟ್ಟು ಮೀರಿದ, ಹೊಸಾ ಪ್ರಯೋಗಗಳನ್ನು ಹೊಂದಿರುವ ಅಪರೂಪದ ಚಿತ್ರ ಎಂಬುದು ಈಗಾಗಲೇ ಖಾತರಿಯಾಗಿದೆ. ಈ ಹಿಂದೆ ರಿಲೀಸ್ ಆಗಿದ್ದ ಟೀಸರ್ ನಲ್ಲೇ ಹೊಸತನ ಪ್ರತಿಫಲಿಸಿತ್ತು. ಪ್ರತೀ ಹಂತದಲ್ಲಿಯೂ ಥ್ರಿಲ್ಲಿಂಗ್ ಆಂಶಗಳನ್ನು ಒಳಗೊಂಡಿರುವ ಈ ಕಥಾನಕ ಒಂದು ಡ್ರಗ್ ಡೀಲ್ ಸುತ್ತಾ ತೆರೆದುಕೊಂಡು, ಕಾಳಧನ ಕೇಂದ್ರಿತವಾಗಿ ಚಲಿಸುವ ಅಪರೂಪದ ಚಿತ್ರವೆಂಬ ಸುಳಿವನ್ನ ಚಿತ್ರತಂಡ ನೀಡಿತ್ತು. ರವೀಂದ್ರ ಪರಮೇಶ್ವರಪ್ಪ ಮತ್ತು ಪ್ರವೀಣ್ ಕುಮಾರ್ ಜಿ ಈ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದಾರೆ. ಆ ಸಂಭಾಷಣೆಯಲ್ಲಿಯೂ ಕೂಡಾ ವಿಶೇಷತೆಗಳಿರಲಿವೆಯಂತೆ.

Gandhada Gudi ಎರಡು ಹಾಡುಗಳಿದೆ, ಅಪ್ಪು ಜೊತೆ ಇದೆಲ್ಲಾ ಕನಸು ಅನಿಸುತ್ತದೆ: ನಿರ್ದೇಶಕ ಅಮೋಘವರ್ಷ

ಇನ್ನುಳಿದಂತೆ ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಬಲ ರಾಜ್ವಾಡಿ, ಪ್ರದೀಪ್ ಪೂಜಾರಿ, ಅರುಣ್, ಸತ್ಯ, ನಾಟ್ಯ ರಂಗ ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ರೋಹಿತ್ ಸೋವರ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಹ್ಯಾಂಡ್ ಹೆಲ್ಡ್ ತಂತ್ರಜ್ಞಾನದಲ್ಲಿ, ಸಾಕಷ್ಟು ಸವಾಲುಗಳನ್ನೆದುರಿಸಿ ಯೆಲ್ಲೋ ಗ್ಯಾಂಗ್ಸ್ ಅನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ವಿಭಿನ್ನ ಸ್ಟುಡಿಯೋಸ್, ಕೀ ಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಂಸ್ಥೆಗಳು ಜೊತೆಗೂಡಿ ಯೆಲ್ಲೋ ಗ್ಯಾಂಗ್ಸ್ ಅನ್ನು ನಿರ್ಮಾಣ ಮಾಡಿದ್ದು, ಮನೋಜ್ ಪಿ, ಜಿ.ಎಂ.ಆರ್ ಕುಮಾರ್(ಕೆವಿಜಿ), ಪ್ರವೀಣ್ ಡಿ.ಎಸ್ ಮತ್ತು ಜೆ.ಎನ್.ವಿ ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರಕ್ಕೆ ಹಣ ಹೂಡಿದ್ದಾರೆ. ಲೋಕೇಶ್ ಹಿತ್ತಲಕೊಪ್ಪ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಪ್ಪಟ ರಾ ಫೀಲ್ ನಲ್ಲಿರೋ ಅಪರೂಪದ ಯೆಲ್ಲೋ ಗ್ಯಾಂಗ್ ಇದೇ ನವೆಂಬರ್ 11ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.