ಟಾಕ್ಸಿಕ್ ಟೀಸರ್‌ಗೆ ವಿಭಿನ್ನ ಪ್ರತಿಕ್ರಿಯೆ ಬಂದಿದೆ. ಆದರೆ, ನೋಡಿದವರು ಮತ್ತೆ ಮತ್ತೆ ನೋಡಿದ್ದಂತೂ ಸತ್ಯ. ಅವರೆಲ್ಲರೂ ಸೇರಿ ನೋಡದವರು ನೋಡುವಂತೆ ಮಾಡಿದ್ದೂ ಅಷ್ಟೇ ಸತ್ಯ.. ಟಾಕ್ಸಿಕ್ ಟೀಸರ್ ನಟ ಯಶ್ ಅಭಿನಯದ ಮಿಕ್ಕ ಸಿನಿಮಾಗಳಿಗಿಂತ ತುಂಬಾ ಭಿನ್ನವಾಗಿದೆ ಎಂಬುದೂ ಸತ್ಯ. ಏನ್ ಹೇಳ್ತಿದಾರೆ ಪಬ್ಲಿಕ್?
ಯಶ್ ‘ಟಾಕ್ಸಿಕ್’ ಟೀಸರ್ ಬಗ್ಗೆ ಪಬ್ಲಿಕ್ ಒಪಿನಿಯನ್
ನಿನ್ನೆ, 08 ಜನವರಿ 2026ರ ಯಶ್ (Rocking Star Yash) ಹುಟ್ಟಿಹಬ್ಬದಂದು ಅವರ ನಟನೆಯಲ್ಲಿ ಮುಂಬರುವ 'ಟಾಕ್ಸಿಕ್' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ (Toxic Teaser) ನೋಡಿದವರೆಲ್ಲಾ 'ಬೆಂಕಿ'.. ಬೆಂಕಿ ಎನ್ನುತ್ತಿದ್ದಾರೆ. ಏನಿದು ಬೆಂಕಿ.. ಯಾಕೆ ಅದು ಬೆಂಕಿ..? ಇಲ್ಲಿದೆ ಸಾರ್ವಜನಿಕರು ಸೊಷಿಯಲ್ ಮೀಡಿಯಾಗಳಲ್ಲಿ ಹಾಕುತ್ತಿರುವ ಕಾಮೆಂಟ್‌ಗಳ ಬಗ್ಗೆ ವರದಿ.. ಮುಂದೆ ಓದಿ..
'ಕೆಜಿಎಫ್' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿಸಿದ್ದ ನಟ ಯಶ್ (Yash) ಅವರು 'ಕೆಜಿಎಫ್-2' ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಗೊತ್ತೇ ಇದೆ. ಆ ಬಳಿಕ ಅವರು ಆಯ್ಕೆ ಮಾಡಿಕೊಂಡಿದ್ದು ಪ್ಯಾನ್ ವರ್ಲ್ಡ್ ಸಿನಿಮಾ ಆಗುವಂಥ ಸಬ್ಜೆಕ್ಟ್ ಹಾಗೂ ಹಾಲಿವುಡ್ ಲೆವಲ್‌ನ ಮೇಕಿಂಗ್ ಎನ್ನಲಾಗಿತ್ತು. ಅದಕ್ಕೆ ಪೂರಕ ಎಂಬಂತೆ ಕಳೆದ ಕೆಲವು ವರ್ಷಗಳಿಂದ ಈ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡೆಯುತ್ತಲೇ ಇತ್ತು. ಕೆಲವು ಪಾತ್ರಧಾರಿಗಳ ಫಸ್ಟ್‌ಲುಕ್ ಬಳಿಕ ನಿನ್ನೆ (08 January) ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ಇಂಟರ್‌ನೆಟ್‌ಗೆ ಬೆಂಕಿ ಬಿತ್ತು!
ಯಶ್ ನಟನೆ, ಗೀತೂ ಮೋಹನ್‌ದಾಸ್ (Geetu Mohandas) ಟೀಸರ್ ರಿಲೀಸ್ ಆಗಿದ್ದೇ ತಡ.. 'ಬೆಂಕಿ'... ಬೆಂಕಿ ಎನ್ನುತ್ತ ಸೋಷಿಯಲ್ ಮೀಡಿಯಾಗಳಲ್ಲಿ ವೀಕ್ಷಕರು ಕಾಮೆಂಟ್ ಹಾಕುವ ಮೂಲಕ ಇಂಟರ್‌ನೆಟ್‌ಗೇ ಬೆಂಕಿ ಬಿದ್ದುಹೋಗಿದೆ. ಈಗಿನ ಟ್ರೆಂಡ್, ಜೆನ್ ಜೀ ಭಾಷೆ ಎನ್ನಬಹುದಾದ ಈ ಬೆಂಕಿ ಎಂಬ ಪದ ಕಾಮೆಂಟ್ ಸೆಕ್ಷನ್‌ನಲ್ಲಿ ಅದೆಷ್ಟು ಬಳಕೆ ಆಗಿದೆ ಎಂದರೆ ಎಣಿಸೋದು ಕಷ್ಟ. ಇನ್ನು ಬೆಂಕಿ ಇಮೋಜಿ ಬಳಕೆಯಂತೂ ಮುಂದಿನ ವರ್ಷವಾದರೂ ನೋಡಿ ಮುಗಿಯೋದು ಡೌಟ್..! ಅಷ್ಟರಮಟ್ಟಿಗೆ ಯಶ್-ಗೀತೂ ಕಾಂಬಿನೇಶನ್‌ನ ಟಾಕ್ಸಿಕ್ ಟೀಸರ್ ಜಗತ್ತಿಗೇ ಬೆಂಕಿ ಇಟ್ಟಿದೆ.
ಸಹಜವಾಗಿಯೇ ಈ ಟಾಕ್ಸಿಕ್ ಟೀಸರ್‌ಗೆ ವಿಭಿನ್ನ ಪ್ರತಿಕ್ರಿಯೆ ಬಂದಿದೆ. ಆದರೆ, ನೋಡಿದವರು ಮತ್ತೆ ಮತ್ತೆ ನೋಡಿದ್ದಂತೂ ಸತ್ಯ. ಅವರೆಲ್ಲರೂ ಸೇರಿ ನೋಡದವರು ನೋಡುವಂತೆ ಮಾಡಿದ್ದು ಕೂಡ ಅಷ್ಟೇ ಸತ್ಯ.. ಟಾಕ್ಸಿಕ್ ಟೀಸರ್ ಇಲ್ಲಿಯವರೆಗೆ ನಟ ಯಶ್ ಅಭಿನಯದ ಸಿನಿಮಾಗಳಿಗಿಂತ ತುಂಬಾ ಭಿನ್ನವಾಗಿದೆ ಎಂಬುದಂತೂ ಸತ್ಯ. ನೋಡಿದವರ ಮೆಂಟಾಲಿಟಿ ಮೇಲೆ ಅವರವರು ವಿಭಿನ್ನ ಕಾಮೆಂಟ್ ಮಾಡಿದ್ದಾರೆ. ಅದು ಅವರವರ ಇಷ್ಟ, ಅವರವರ ಅನಿಸಿಕೆ.. ಕಾರಣ, ಜಗತ್ತಿನಲ್ಲಿ ಒಬ್ಬೊಬ್ಬರೂ ಒಂದೊಂದು ತರ..
ಡಿಬೆಟ್, ಒಪಿನಿಯನ್ ಸೃಷ್ಟಿ
ಒಟ್ಟಿನಲ್ಲಿ ಹೇಳಬೇಕು ಎಂದರೆ, ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಟೀಸರ್ ಜಗತ್ತಿನ ತುಂಬಾ ಡಿಬೆಟ್, ಒಪಿನಿಯನ್ ಸೃಷ್ಟಿಮಾಡಿರುವುದಂತೂ ಸತ್ಯ. ಅಷ್ಟಕ್ಕೂ ಇಂದು ಸಿನಿಮಾ ಎನ್ನುವುದು ಮನರಂಜನಾತ್ಮಕ ಉದ್ಯಮ.. ಇಲ್ಲಿ ಯಶಸ್ಸೇ ಮಾನದಂಡ.. ಇಂದಿನ ಜಮಾನಾದಲ್ಲಿ ಸಿನಿಮಾಗಳು ವ್ಯವಹಾರ (Business) ಮಾಡುವುದೇ ಮುಖ್ಯ. ಇಂದು ಸಿನಿಮಾ ಎನ್ನುವುದು ಜಾಗತಿಕ ಉದ್ಯಮವಾಗಿದೆ. ಹೀಗಿದ್ದಾಗ, ಸಿನಿಮಾ ಹೆಚ್ಚು ಸದ್ದು ಮಾಡಬೇಕು, ಸುದ್ದಿ ಮಾಡಬೇಕು. ಆಗಲೆ ಅದು ಹೆಚ್ಚಿನ ವ್ಯಾಪಾರ-ವಹಿವಾಟಿ ಮಾಡಲು ಸಾಧ್ಯ ಎನ್ನುವುದು ಇಂದಿನ ಟ್ರೆಂಡ್.. ಈ ದಾರಿಯಲ್ಲಿ ಟಾಕ್ಸಿಕ್ ಟೀಸರ್ ಸರಿಯಾದ ಹೆಜ್ಜೆ ಇಟ್ಟಿದೆ.. ಮುಂದೆ ಸಿನಿಮಾ ಬರಲಿದೆ.. ಬಹಳಷ್ಟು ನಿರೀಕ್ಷೆ ಸೃಷ್ಟಿಯಾಗಿದೆ.. ಮುಂದೇನು ಎಂಬುದು ಕಾದು ನೋಡಬೇಕಾದ ಸಂಗತಿ.. ಕಾದು ನೋಡಿ..


