ಸಿನಿಮಾ ಬಿಡುಗಡೆಗೆ ಇನ್ನು 02 ದಿನಗಳು ಮಾತ್ರ ಬಾಕಿ. ಕರ್ನಾಟಕದಲ್ಲಿ 2 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ. ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ ಮಟ್ಟದಲ್ಲಿ ಟಿಕೆಟ್ ಮಾರಾಟವಾಗಿದೆ. ಇನ್ನು ಮಹಾರಾಷ್ಟ್ರದಿಂದ ಬ್ಲಾಕ್ ಮಾಡಲಾದ ಸೀಟುಗಳ ಮೊತ್ತ 2 ಕೋಟಿ ರೂಪಾಯಿಗೂ ಅಧಿಕವಾಗಿದೆ.
Rocking Star Yash-Toxic Movie Countdown 02-New Record in Toxic Advanced Booking and just 2 days left for Release. ಬಿಡುಗಡೆಗೂ ಮೊದಲೇ ಅಡ್ವಾನ್ಸ್ ಬುಕಿಂಗ್‌ನಲ್ಲಿ ದಾಖಲೆ ಬರೆದ ಯಶ್ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಇನ್ನು 2 ದಿನವಷ್ಟೇ ಬಾಕಿ!
ಪ್ಯಾನ್ ಇಂಡಿಯಾ ನಟ, ಕನ್ನಡಿಗ, ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಇನ್ನು ಕೇವಲ 02 ದಿನಗಳಷ್ಟೇ ಬಾಕಿ ಇದೆ. ಕರ್ನಾಟಕದಲ್ಲಿ ವರಮಹಾಲಕ್ಷ್ಮೀ ಹಬ್ಬದ ದಿನವೇ, ಅಂದರೆ 21 ಆಗಸ್ಟ್ 2026ರಂದು ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಿತ್ತು. ಆದರೆ ಸ್ವಲ್ಪ ಹೊತ್ತಿನಲ್ಲೇ ಎಲ್ಲಾ ಟಿಕೆಟ್ ಸೋಲ್ಡ್ ಔಟ್ ಆಗಿ ದಾಖಲೆ ಬರೆದಿದೆ. ಇದೀಗ ಎಲ್ಲಾ ಕಡೆ ಫಸ್ಟ್ ಶೋ ಟಿಕೆಟ್ ಕಂಪ್ಲೀಟ್ ಆಗಿ ಸೋಲ್ಡ್ ಔಟ್ ಆಗಿದ್ದು, ಆಗಸ್ಟ್ 26ರ 'ಈದ್ ಮಿಲಾದ್' ದಿನ ಟಾಕ್ಸಿಕ್ ಸಿನಿಮಾದ ಮೊಟ್ಟಮೊದಲ ಶೋ ಹಲವು ಕಡೆಗಳಲ್ಲಿ ಬೆಳಗ್ಗೆ 6 ಗಂಟೆಗೇ ಶುರುವಾಗಲಿದೆ ಎನ್ನಲಾಗಿದೆ. ಕಂಪ್ಲೀಟ್ ಮಾಹಿತಿಗಾಗಿ ಈ ಸ್ಟೋರಿ ನೋಡಿ..
ಯಶ್ ನಾಯಕತ್ವದ ಟಾಕ್ಸಿಕ್ ಸಿನಿಮಾ ಸಖತ್ ಕುತೂಹಲ ಕೆರಳಿಸುತ್ತಿದೆ. ಆಗಸ್ಟ್ 26ರಂದು ಟಾಕ್ಸಿಕ್ ಸಿನಿಮಾ ದೇಶ-ವಿದೇಶಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆ, ಹಾಲಿವುಡ್‌ನಲ್ಲೂ ಟ್ರೇಲರ್ ಬಿಡುಗಡೆಯಾಗಿದೆ. ಟಾಕ್ಸಿಕ್ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಬಿಡುಗಡೆಗೂ ಮೊದಲೇ ಯಶ್ ಟಾಕ್ಸಿಕ್ ಸಿನಿಮಾ ದಾಖಲೆ ಬರೆದಿದೆ. 2.6 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ. ಅಡ್ವಾನ್ಸ್ ಬುಕಿಂಗ್ ಮೂಲಕ ಈ ಚಿತ್ರವು ಈಗಾಗಲೇ ಭರ್ಜರಿ ಆದಾಯ ಗಳಿಸಿದೆ.
ಮೊದಲ ಸ್ಥಾನದಲ್ಲಿ ಕರ್ನಾಟಕ!
ಸ್ಯಾಕ್‌ನಿಲ್ಕ್ ವರದಿ ಪ್ರಕಾರ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಮುಂಗಡ ಬುಕಿಂಗ್ ಮೂಲಕ 19.44 ಕೋಟಿ ರೂಪಾಯಿ ಗಳಿಸಿದೆ. ಕರ್ನಾಟಕವೇ ಮುಂಗಡ ಬುಕಿಂಗ್‌ನಲ್ಲಿ ಈ ಪೈಕಿ ಮೊದಲ ಸ್ಥಾನದಲ್ಲಿದೆ. ಕನ್ನಡ ವರ್ಷನ್ ಮುಂಗಡ ಬುಕಿಂಗ್ ಮೂಲಕ 7.22 ಕೋಟಿ ರೂಪಾಯಿ ಗಳಿಸಿದೆ ಟಾಕ್ಸಿಕ್.ಇನ್ನು ಹಿಂದಿಯಲ್ಲಿ 3.86 ಕೋಟಿ ರೂಪಾಯಿ ಗಳಿಸಿದೆ. ತಮಿಳು, ತೆಲುಗು, ಮಲೆಯಾಳಂ ಸೇರಿದಂತೆ ಇತರ ಭಾಷೆಗಳಿಂದಲೂ ಸಾಕಷ್ಟು ಕೋಟಿ ರೂಪಾಯಿ ಗಳಿಸಿದೆ. ಒಟ್ಟು 2.6 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ. ಯಶ್ ಟಾಕ್ಸಿಕ್ ನೋಡಲು ಕನ್ನಡಿಗರು ತುದಿಗಾಲಲ್ಲಿ ನಿಂತಿದ್ದಾರೆ. ಗ್ಲೋಬಲ್ ಸಿನಿಮಾ ಮೂಲಕ ದಾಖಲೆ ಬರೆಯಲು ಸಜ್ಜಾಗಿರುವ ಯಶ್ ಈಗಾಗಲೇ ಹೊಸ ಹೊಸ ದಾಖಲೆ ಬರೆಯುತ್ತಿದ್ದಾರೆ.
ಸಿನಿಮಾ ಬಿಡುಗಡೆಗೆ ಇನ್ನು 02 ದಿನಗಳು ಮಾತ್ರ ಬಾಕಿ. ಕರ್ನಾಟಕದಲ್ಲಿ 2 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ. ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ ಮಟ್ಟದಲ್ಲಿ ಟಿಕೆಟ್ ಮಾರಾಟವಾಗಿದೆ. ಇನ್ನು ಮಹಾರಾಷ್ಟ್ರದಿಂದ ಬ್ಲಾಕ್ ಮಾಡಲಾದ ಸೀಟುಗಳ ಮೊತ್ತ 2 ಕೋಟಿ ರೂಪಾಯಿಗೂ ಅಧಿಕವಾಗಿದೆ. ದೆಹಲಿಯಲ್ಲಿ 1.50 ಕೋಟಿ ರೂಪಾಯಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ. ವಿದೇಶದ ಒಟ್ಟೂ ಆದಾಯದ ಲೆಕ್ಕ ಇನ್ನಷ್ಟೇ ಬರಬೇಕಿದೆ. ಇದು ಕೂಡ ದಾಖಲೆ ಮಟ್ಟದಲ್ಲಿದೆ ಎನ್ನಲಾಗುತ್ತಿದೆ.
ಟಾಕ್ಸಿಕ್ ಕುತೂಹಲ, 'ಎ' ಪ್ರಮಾಣಪತ್ರ
ಟಾಕ್ಸಿಕ್ ಟೀಮ್ ಮುಹೂರ್ತದಿಂದಲೇ 'ಇದು ವಯಸ್ಕರಿಗಾಗಿ' ಮಾಡಲಾಗಿರುವ ಸಿನಿಮಾ ಎಂದು ಸ್ಪಷ್ಟವಾಗಿ ಹೇಳಿಕೊಂಡಿದೆ. ಇತ್ತೀಚೆಗೆ ಈ ಚಿತ್ರದ ನಾಯಕ ನಟ ಯಶ್ ಕೂಡ 'ಮಕ್ಕಳು ಸಿನಿಮಾ ನೋಡಬೇಡಿ, ಇದು ವಯಸ್ಕರಿಗಾಗಿ ಮಾಡಿದ ಸಿನಿಮಾ' ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಚಲನಚಿತ್ರ ಮಂಡಳಿ ಟಾಕ್ಸಿಕ್ ಸಿನಿಮಾಗೆ 'ಎ' ಸರ್ಟಿಫಿಕೇಟ್ ನೀಡಿದೆ. ಇಂಗ್ಲೆಂಡ್‌ನಲ್ಲಿ BBFC ಟಾಕ್ಸಿಕ್ ಸಿನಿಮಾಗೆ 18 ರೇಟಿಂಗ್ ನೀಡಿದೆ. ಬ್ರಿಟಿಷ್ ಸಿನಿಮಾ ನಿಯಮಗಳಿಗೆ ಅನಗುಣವಾಗಿ ಈ ರೇಟಿಂಗ್ ನೀಡಲಾಗಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾದಲ್ಲಿ ಭಾರತದ ದೊಡ್ಡ ತಾರಾಬಳಗವಿಗೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಹೀಗೆ ನಟಿಯರ ಬಳಗವಿದೆ, ಜೊತೆಗೆ, ವಿವೇಕ್ ಒಬೆರಾಯ್, ಸುದೇವ್ ನಾಯರ್ ಸೇರಿದಂತೆ ಹಲವು ನಟನಟಿಯರು ನಟಿಸಿದ್ದಾರೆ. ಜೊತೆಗೆ, ಹಾಲಿವುಡ್ ನಟನಟಿಯರೂ ಚಿತ್ರದ ತಾತಾಬಳಗ ಸೇರಿಕೊಂಡಿದ್ದಾರೆ. ಇನ್ನೇನು 02 ದಿನದ ಬಳಿಕ ಇಡೀ ಜಗತ್ತು ತೆರೆಯ ಮೇಲೆ ಟಾಕ್ಸಿಕ್ ಸಿನಿಮಾದ ಆರ್ಭಟ ನೋಡಬಹುದು. ನಾಳೆ ಟಾಕ್ಸಿಕ್ ಕೌಂಟ್‌ಡೌನ್ ಸ್ಟೋರಿ ನಂಬರ್-01. ಕಾಯುತ್ತಿರಿ.. ಪ್ರತಿದಿನದ ಅಪ್‌ಡೇಟ್‌ಗಾಗಿ 'ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್' ನೋಡ್ತಾ ಇರಿ..


