ನಾಟಕ, ಧಾರಾವಾಹಿಗಳಲ್ಲಿ ನಟಿಸುವಾಗ ಯಶ್ ಅವರ ಹೆಸರು ಇದ್ದಿದ್ದು ನವೀನ್ ಅಂತಲೇ ಅಗಿತ್ತು. ಆದರೆ, ಯಾವಾಗ 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ನಟಿಸಿದರೋ ಆಗ ಅವರ ಹೆಸರನ್ನು 'ಯಶ್' ಎಂದು ಬದಲಾಯಿಸಲಾಯಿತು. ಈ ಸಂಗತಿ ಹೆಚ್ಚಿನ ಎಲ್ಲರಿಗೂ ಗೊತ್ತಿದೆ. ಆದರೆ, ಈಗ ನೋಡಿದರೆ ಯಶ್ ಅಮ್ಮ ಹೊಸ ರಹಸ್ಯ ಹೇಳಿದ್ದಾರೆ!..

ಯಶ್ ಮೂಲ ಹೆಸರಿನ ಸೀಕ್ರೆಟ್!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಯಾಂಡಲ್‌ವುಡ್ ನಟ, ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ (Yash) ಅವರೀಗ ಇಡೀ ಜಗತ್ತಿಗೆ 'ಯಶ್' ಎಂದೇ ಪರಿಚಿತರು. ಆದರೆ ಅವರ ಮೂಲ ಹೆಸರು, ಸ್ಕೂಲ್-ಕಾಲೇಜಿನ ಹೆಸರು (ಮೂಲ ಹೆಸರು) ನವೀನ್ ಕುಮಾರ್ ಗೌಡ (Naveen Kumar Gowda) ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು. ಅದನ್ನೇ ಯಶ್ ಸಿನಿಮಾರಂಗಕ್ಕೆ ಬಂದಮೇಲೆ ಅವರನ್ನು ಲವ್ ಮಾಡಿ ಮದುವೆಯಾಗಿರುವ ರಾಧಿಕಾ ಪಂಡಿತ್ (Radhika Pandit) ಕೂಡ ಹೇಳಿದ್ದರು. (ಯಶ್ ಅವರು ಈಗ ಕಾನೂನಾತ್ಮಕವಾಗಿಯೂ ತಮ್ಮ ಹೆಸರನ್ನು 'ಯಶ್' ಎಂದೇ ಬದಲಾಯಿಸಿಕೊಂಡಿದ್ದಾರೆ ಎಂದು ರಾಧಿಕಾ ಒಮ್ಮೆ ಸ್ಪಷ್ಟಪಡಿಸಿದ್ದಾರೆ.)

ಆದರೆ ಸ್ವತಃ ಯಶ್ ಅವರನ್ನು ಹೆತ್ತಿರುವ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಯಶ್ ಅವರ ಮೊಟ್ಟಮೊದಲ ಹೆಸರು ನವೀನ್ ಕುಮಾರ್ ಅಲ್ಲ, ಜನವರಿಯಲ್ಲಿ ಅವರು ಹುಟ್ಟಿರುವುದರಿಂದ (ಹೊಸ ವರ್ಷ, ನವೀನ ವರ್ಷ) ಅವರನ್ನು ‘ನವೀನ’ ಅಂತ ಕರೆಯುತ್ತಿದ್ದೆವು. ಅದೇ ಸ್ಕೂಲು-ಕಾಲೇಜ್ ಸೇರಿದಂತೆ ಎಲ್ಲಾ ದಾಖಲೆಯಲ್ಲಿ ಬಂದಿತ್ತು. ಆದರೆ, ಅವರಿಗೆ ಹುಟ್ಟಿದಾಗ ನಮ್ಮ ತಾಯಿಯ ಮನೆಯಲ್ಲಿ, ಕುಟುಂಬದವರು ಪ್ರೀತಿಯಿಂದ ನಾವೆಲ್ಲಾ ಇಟ್ಟ ಹೆಸರು ಯಶವಂತ್ ಎಂಬ ಸೀಕ್ರೆಟ್‌ ಬಿಚ್ಚಿಟ್ಟಿದ್ದಾರೆ.

ಯಶ್ ಅವರ ನಿಜ ಹೆಸರು ನವೀನ್ ಕುಮಾರ್ ಅಲ್ಲ!

ಇತ್ತೀಚೆಗೆ ('ಲೋ ನವೀನ' ಸಿನಿಮಾ ವೇಳೆ) ಯಶ್ ಅವರ ತಾಯಿ ಪುಷ್ಪಾ ಅವರು ಯಶ್ ಅವರ ನಿಜ ಹೆಸರು ನವೀನ್ ಕುಮಾರ್ ಅಲ್ಲ, ಅವರನ್ನು ನಾವು ಪ್ರೀತಿಯಿಂದ ಯಶವಂತ್ ಅಂತ ಕರೆಯುತ್ತಿದ್ದೆವು. ಆದರೆ, ಜನವರಿಯಲ್ಲಿ ಹುಟ್ಟಿದ್ದಾನೆ ಎಂಬ ಕಾರಣಕ್ಕೆ ಆಮೇಲೆ ನವೀನ್ ಅಂತ ಇಟ್ಟಿದ್ದೇವೆ. ಆದರೆ, ಸಿನಿಮಾಕ್ಕೆ ಬಂದ ಮೇಲೆ ಮತ್ತೆ ಆತನ ಮೊದಲ ಹೆಸರು ಯಶವಂತ್ ಎಂಬುದೇ ಯಶ್ ಆಗಿ ಮತ್ತೆ ಬಂತು' ಎಂದು ಹೇಳಿದ್ದಾರೆ. ಈ ಮೂಲಕ, ಇಷ್ಟು ದಿನವೂ ಇಡೀ ಜಗತ್ತಿಗೆ ಗೊತ್ತಿಲ್ಲದ ಯಶ್ ನಿಜವಾದ ಹೆಸರು, ಅಂದರೆ ಹುಟ್ಟಿದಾಗ ಇಟ್ಟ ಹೆಸರು 'ಯಶವಂತ್' ಅಥವಾ 'ಯಶ್‌ವಂತ್' ಎಂಬುದು ಗೊತ್ತಿರಲಿಲ್ಲ. ಅದೀಗ ಯಶ್ ಅಮ್ಮ ಪುಷ್ಪಾ ಅವರ ಮೂಲಕ ಜಗಜ್ಜಾಹೀರಾಗಿದೆ.

ಹೌದು, ಯಶ್ ನಾಟಕ, ಧಾರಾವಾಹಿಗಳಲ್ಲಿ ನಟಿಸುವಾಗ ಅವರ ಹೆಸರು ಇದ್ದಿದ್ದು ನವೀನ್ ಅಂತಲೇ ಅಗಿತ್ತು. ಆದರೆ, ಯಾವಾಗ 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ನಟಿಸಿದರೋ ಆಗ ಅವರ ಹೆಸರನ್ನು 'ಯಶ್' ಎಂದು ಬದಲಾಯಿಸಲಾಯಿತು. ಈ ಸಂಗತಿ ಹೆಚ್ಚಿನ ಎಲ್ಲರಿಗೂ ಗೊತ್ತಿದೆ. ಆದರೆ, ಈಗ ಇರುವ ಹೆಸರು ಯಶ್ ಈ ಸೂಪರ್ ಸ್ಟಾರ್ ನಟನ ಮೊಟ್ಟಮೊದಲ ಹೆಸರಿನ ಶಾರ್ಟ್ ರೂಪ ಎಂಬುದು ಸತ್ಯ ಸಂಗತಿ. ಅದೆಷ್ಟೋ ಜನರಿಗೆ ಗೊತ್ತಿಲ್ಲದ ಈ ಸತ್ಯ ಇಂದು ವೈರಲ್ ಆಗುತ್ತಿದೆ.

'ಟಾಕ್ಸಿಕ್' ಹಾಗೂ 'ರಾಮಾಯಣ' ಬಿಡುಗಡೆ!

ಅಂದಹಾಗೆ, ನಟ ಯಶ್ ಅವರ ಮುಂಬರುವ ಸಿನಿಮಾಗಳಾದ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳು ಇದೇ ವರ್ಷ ಬಿಡುಗಡೆ ಆಗಲಿವೆ ಎನ್ನಲಾಗುತ್ತಿದೆ. ರಾಮಾಯಣ ಚಿತ್ರವು 'ಟಾಕ್ಸಿಕ್‌'ಗಿಂತಲೂ ಮೊದಲೇ ಚಿತ್ರಮಂದಿರಗಳಿಗೆ ಬರಲಿದೆ ಎಂಬ ಸಂಗತಿ ಈಗಾಗಲೇ ಸುದ್ದಿಯಾಗಿದೆ. ಯಶ್ ನಟನೆ ಮಾತ್ರವಲ್ಲ, ನಿರ್ಮಾಣದಲ್ಲೂ ಪಾಲುದಾರರಾಗಿರುವ 'ರಾಮಾಯಣ' ಚಿತ್ರವು ದೀಪಾವಳಿ ಸಮಯಕ್ಕೆ ತೆರೆಗೆ ಬರಲಿದ್ದು, ಟಾಕ್ಸಿಕ್ ಚಿತ್ರವು ಡಿಸೆಂಬರ್‌ನಲ್ಲಿ ತೆರೆಯ ಮೇಲೆ ದರ್ಶನ ನೀಡಲಿದೆ ಎನ್ನಲಾಗುತ್ತಿದೆ.

ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕವನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಟಾಕ್ಸಿಕ್ ಚಿತ್ರವು ಹಾಲಿವುಡ್ ರೇಂಜ್‌ ಮೇಕಿಂಗ್ ಮೂಲಕ, ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಕೆಜಿಎಫ್ (KGF) ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದ ನಟ ಯಶ್ ಅವರು 'ಟಾಕ್ಸಿಕ್' ಮೂಲಕ 'ಪ್ಯಾನ್ ವರ್ಲ್ಡ್' ಸ್ಟಾರ್ ಆಗಿ ಕನ್ನಡನಾಡನ್ನು ಬೆಳಗಿಸಲಿದ್ದಾರೆ. ಈ ಮೂಲಕ ಕನ್ನಡಿಗರ ಹೆಸರು ವಿಶ್ವಮಟ್ಟದಲ್ಲಿ ರಾರಾಜಿಸಲಿದ್ದು, ಇದು ಟಾಕ್ಸಿಕ್ ಚಿತ್ರದ ಮೂಲಕ ಕನ್ನಡನಾಡಿಗೆ ಸಿಗಲಿರುವ ಮತ್ತೊಮದು 'ಬೋನಸ್' ಎನ್ನಬಹುದು.

ಒಟ್ಟಿನಲ್ಲಿ, ಯಶ್ ಆಗಿರುವ ಯಶ್‌ವಂತ್ ಅವರ ಮುಂಬರುವ ಸಿನಿಮಾಗಳಿಗಾಗಿ ಇಡೀ ಜಗತ್ತು ಕಾಯುತ್ತಿದೆ. ಆ ರೇಂಜ್‌ಗೆ ನಟ ಯಶ್ ಇಂದು ಬೆಳೆದುನಿಂತಿದ್ದಾರೆ. ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕಗಳಿಗಾಗಿ ಇಡೀ ಜಗತ್ತು ಈಗ ಕಾಯುತ್ತಿದೆ. ಎಂದು ಬರಲಿವೆ ಯಶ್ ಸಿನಿಮಾಗಳು? ಸ್ವಲ್ಪ ಕಾಯಬೇಕಷ್ಟೇ, ತೆರೆಯ ಮೇಲಿನ ಅಬ್ಬರಕ್ಕೆ ಇನ್ನೇನು ತುಂಬಾ ಕಾಲ ಕಾಯಬೇಕಿಲ್ಲ ಬಿಡಿ!

View post on Instagram