ಬಿಡುಗಡೆಯಾದ ಕೆಲವೇ ಕ್ಷಣದಲ್ಲಿ ಲಕ್ಷಾಂತರ ವೀಕ್ಷಣೆ.ಈ ಹಾಡಿನಲ್ಲಿ ಯಶ್ ಜೊತೆ ಮಕ್ಕಳು, ಗಣಿ, ಸುತ್ತಿಗೆಯಲ್ಲಿ ದುಷ್ಟರ ರುಂಡ ಚೆಂಡಾಡುವ ರಾಕಿ ಬಾಯ್ ಹಿನ್ನೆಲೆ ಇದೆ.
ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ, ವಿಜಯ ಕಿರಗಂದೂರು ನಿರ್ಮಾಣದ ‘ಕೆಜಿಎಫ್ ಚಾಪ್ಟರ್ 2’ ಪ್ಯಾನ್ ಇಂಡಿಯಾ ಚಿತ್ರದ ಮೊದಲ ಹಾಡು ‘ತೂಫಾನ್’ ಲಹರಿ ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವೀಕ್ಷಣೆ ದಾಖಲಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದೆ. ರವಿ ಬಸ್ರೂರು ಅವರ ಸಂಗೀತ ಸಂಯೋಜನೆಯಲ್ಲಿ ಅಬ್ಬರದ ಸಂಗೀತವಿರುವ ‘ತೂಫಾನ್ ತೂಫಾನ್ ಮುನ್ನುಗ್ಗೊ ಸಿಡಿಲ ಕಿಡಿ ಇವನೇ..’ ಎಂಬ ಸಾಲಿನ ಹಾಡಿನಲ್ಲಿ ಯಶ್ ಅವರ ವಿಭಿನ್ನ ಲುಕ್‌ಗಳಿಗೆ ಜನ ಫಿದಾ ಆಗಿದ್ದಾರೆ.
2018ರಲ್ಲಿ ಬಂದ ಕೆಜಿಎಫ್‌ನ ‘ಧೀರ ಧೀರ’ ಹಾಡಿನ ಛಾಯೆಯನ್ನು ಉಳಿಸಿಕೊಂಡಿರುವ ಈ ಹಾಡಿನಲ್ಲಿ ಯಶ್ ಜೊತೆ ಮಕ್ಕಳು, ಗಣಿ, ಸುತ್ತಿಗೆಯಲ್ಲಿ ದುಷ್ಟರ ರುಂಡ ಚೆಂಡಾಡುವ ರಾಕಿ ಬಾಯ್ ಹಿನ್ನೆಲೆ ಇದೆ.
‘ಅವನು ಕತ್ತಿ ಬೀಸಿದ ರಭಸಕ್ಕೆ ಒಂದು ಗಾಳಿ ಹುಟ್ಕೊತು ಸಾರ್, ಆ ಗಾಳಿ ಪ್ರತಿಯೊಬ್ಬನಿಗೂ ಉಸಿರು ಕೊಟ್ಬಿಡ್ತು’ ಎಂಬ ಡೈಲಾಗ್‌ನ ಮೂಲಕ ಟೇಕಾಫ್ ಆಗೋ ಹಾಡು ‘ತೂಫಾನ್ ತೂಫಾನ್ ತೊಡೆ ತಟ್ಟಿನಿಂತವರಿಗೆ ಗಟ್ಟಿಗನೇ, ತೂಫಾನ್ ತೂಫಾನ್ ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೇ.. ’ ಎಂಬ ಪವರ್‌ಫುಲ್ ಸಾಲಿನ ಮೂಲಕ ಗಮನಸೆಳೆಯುತ್ತದೆ.
![]()
ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಹಾಡಿನಲ್ಲಿ ಯಶ್ ಆ್ಯಂಗ್ರಿ ಯಂಗ್ ಮ್ಯಾನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಕಿ ಭಾಯ್ ಅಬ್ಬರವನ್ನು ಪರಿಚಯಿಸುವಂತೆ ಹಾಡಿನ ಹಿನ್ನೆಲೆ ಇದೆ. ಇದರಲ್ಲಿ ಚಿತ್ರದ ಖಡಕ್ ಡೈಲಾಗ್‌ಗಳೂ ಬಂದು ಹಾಡನ್ನು ಇನ್ನಷ್ಟುಪವರ್‌ಫುಲ್ ಆಗಿಸಿವೆ.
ಈ ಹಾಡನ್ನು ರವಿ ಬಸ್ರೂರು ಅವರೇ ಬರೆದಿದ್ದು, ಕನ್ನಡದಲ್ಲಿ ಸಂತೋಷ್ ವೆಂಕಿ, ವರ್ಷಾ ಆಚಾರ್ಯ, ಮೋಹನ್ ಕೃಷ್ಣ, ಸಚಿನ್ ಬಸ್ರೂರು, ರವಿ ಬಸ್ರೂರು, ಪುನೀತ್ ರುದ್ರಾಂಗ್, ಮಹೇಶ್ ದಿನಕರ್ ದನಿಯಲ್ಲಿ ಹಾಡು ಮೂಡಿಬಂದಿದೆ. ಗಿರಿಧರ್ ಕಾಮತ್, ರಕ್ಷಾ ಕಾಮತ್ ಮಕ್ಕಳ ದನಿಯಲ್ಲಿ ಬರುವ ಸಾಲನ್ನು ಹಾಡಿದ್ದಾರೆ. ಐದು ಭಾಷೆಗಳಲ್ಲಿ ಹೊರಬಂದಿರುವ ಹಾಡನ್ನು 26 ಮಂದಿ ಗಾಯಕರು ಹಾಡಿರೋದು ವಿಶೇಷ.
KGF 2 ತೂಫಾನ್ ಹಾಡು ರಿಲೀಸ್, ಹೇಗಿದೆ ರಾಖಿ ಲುಕ್?
ಏ.14ರಂದು ಕೆಜಿಎಫ್ 2 ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಮಾಚ್‌ರ್ 27ರಂದು ಟ್ರೇಲರ್ ರಿಲೀಸ್ ಆಗಲಿದೆ. ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿನಾಯಕಿಯಾಗಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
![]()
ಜರಡಿ ಹಿಡಿದೆ ಒಬ್ರು ನಿಲ್ಲೋಲ್ಲ ಇಂತ ಧೈರ್ಯ ಇಲ್ಲದೆ ಇರೋ ಜನ ಇಟ್ಕೊಂಡು ಇವ್ನೇನು ಮಾಡ್ತಾನೆ ಎನ್ನುವ ಡೈಲಾಗ್ ಮೊದಲು ಕೇಳಿ ಬರುತ್ತದೆ. ಮತ್ತೊಂದು ಧ್ವನಿಯಲ್ಲಿ 'ಹೌದು ಸರ್ ನಮಗೆ ಧೈರ್ಯ ಇರ್ಲಿಲ್ಲ ಶಕ್ತಿ ಇರ್ಲಿಲ್ಲ ನಂಬಿಕೆ ಇರ್ಲಿಲ್ಲ. ಸಾವು ನನ್ನು ತುಲಿದು ಹಾಕ್ತಿತ್ತು ಅಲ್ಲೊಬ್ಬ ಅಡ್ಡ ಇದ್ದ ಅಂತ ಮಾರಿ ಮುಂದೆ ಕತ್ತಿ ಬೀಸಿದ್ನಲ್ಲಾ ಅವತ್ತು ತುಂಬಾ ವರ್ಷ ಆದ್ಮೇಲೆ ಸಾವಿಗೆ ನಾವು ಕುಣಿದಾಡಿದ್ವಿ. ಅವತ್ತು ಕತ್ತಿ ಬೀಸಿದ ರಭಸಕ್ಕೆ ಒಂದು ಗಾಳಿ ಹುಟ್ಕೊಳ್ತು ಸರ್ ಆ ಗಾಳಿ ನರ ಇಲ್ದೆಇರೋ ಪ್ರತಿಯೊಬ್ಬರಿಗೂ ಉಸಿರು ಕಟ್ಬಿಡ್ತು. ನಿಮಗೆ ಒಂದು ಸಲಹೆ ಕೊಡ್ತೀನಿ ನೀವು ಮಾತ್ರ ಅವನಿಗೆ ಅಡ್ಡ ನಿಲ್ಲೋಕೆ ಹೋಗ್ಬೇಡಿ ಸರ್' ಎಂಬ ದೊಡ್ಡ ಡೈಲಾಗ್ ಬಂದ ನಂತರ ತೂಫಾನ್ ಹಾಡು ಶುರುವಾಗುತ್ತದೆ.
KGF Chapter 2 ಟ್ರೇಲರ್ ನೋಡಿ ಸೆನ್ಸಾರ್ ಬೋರ್ಡ್ ಹೇಳಿದ್ದೇನು ಗೊತ್ತಾ?
Thu kya Mein kya hath ja ತೂಫಾನ್ ಎಂದು ಹಾಡು ಶುರುವಾಗುತ್ತದೆ. ಕೈಯಲ್ಲಿ ದೊಡ್ಡ ಸುತ್ತಿಗೆ ಹಿಡಿದುಕೊಂಡು ಯಶ್ ಕಾಣಿಸಿಕೊಂಡಿದ್ದಾರೆ. ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೇ ತೂಫಾನ್ ಮುನ್ನುಗುವ ಸಿಡಿ ಕಿಡಿ ಕಿಚ್ಚಿವನೇ ತೂಫಾನ್ ತೂಫಾನ್ ಎಂಬ ಹಾಡು ಕೇಳಬಹುದು. ಯಾವ ಹಾಲಿವುಡ್ ಸಿನಿಮಾಗೂ ಕಡಿಮೆ ಇಲ್ಲ ನಮ್ಮ ಯಶ್ ಮತ್ತು ಪ್ರಶಾಂತ್ ನೀಲಿ ಕೆಜಿಎಫ್ ಚಾಪ್ಟರ್ 2 ಎಂದು ಹೇಳಬಹುದು. ಲಿರಿಕಲ್ ಹಾಡೇ ಇಷ್ಟೊಂದು ಸೂಪರ್ ಆಗಿದೆ ಅಂದ್ಮೇಲೆ ಸಿನಿಮಾ ಡಬಲ್ ಹಿಟ್ ಎನ್ನಲಾಗಿದೆ. ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರ್, ರವಿ ಬಸ್ರೂರ್, ಪುನೀತ್ ರುದ್ರನಾಗ್, ವರ್ಷಾ ಆಚಾರ್ಯ ಈ ಹಾಡು ಹಾಡಿದ್ದಾರೆ. ಮಕ್ಕಳ ಧ್ವನಿಯನ್ನು ಗಿರಿಧರ್ ಕಾಮತ್, ರಕ್ಷಾ ಕಾಮತ್, ಸಿಂಚನಾ ಕಾಮತ್, ನಿಶಾಂತ್ ಕಿಣಿ, ಭರತ್ ಭಟ್, ಅನಘಾ ನಾಯಕ್, ಅವನಿ ಭಟ್, ಸ್ವಾತಿ ಕಾಮತ್, ಶಿವಾನಂದ್ ನಾಯಕ್, ಕೀರ್ತನಾ ಬಸ್ರೂರು ನೀಡಿದ್ದಾರೆ.

