Asianet Suvarna News Asianet Suvarna News

KGFನ ರಾಕಿಬಾಯ್ ಪಾತ್ರ ಆ್ಯಕ್ಷನ್ ಹೀರೋ ಯಶ್‌ಗೇಕೆ ಅನಿವಾರ್ಯವಾಯಿತು?

ಕೆಜಿಎಫ್ ಚಿತ್ರದಿಂದ ಕನ್ನಡ ಚಿತ್ರರಂಗದ ಕೀರ್ತಿ ಇಡೀ ಭಾರತದ ಉದ್ದಗಲದಲ್ಲಿಯೂ ಪಸರಿಸುವಂತಾಗಿದ್ದು ಮಾತ್ರವಲ್ಲ, ಬಾಲಿವುಡ್‌ನ ಮೂರು ಖಾನ್‌ಗಳಿಗೂ ಸ್ಪರ್ಧಿ ನೀಡಬಲ್ಲ ಯಶ್‌ನಂಥ ಒಬ್ಬ ಕನ್ನಡದ ಕಲಾವಿದನನ್ನು ಭಾರತೀಯ ಚಿತ್ರರಂಗ ಬೆರಗುಗಣ್ಣಿನಿಂದ ನೋಡುವಂತಾಗಿದ್ದು ಸುಳ್ಳಲ್ಲ. ಇಂಥ ನಟ India Today Conclaveನಲ್ಲಿ ಮಾತನಾಡಿದ್ದು ಹೀಗೆ. 

Yash defends his gangster role in blockbuster move KGF
Author
First Published Nov 6, 2022, 5:23 PM IST

India Today Conclave 2022 ನಲ್ಲಿ ಸ್ಯಾಂಡಲ್‌ವುಡ್ ನಟ ಯಶ್ ಪಾಲ್ಗೊಂಡಿದ್ದು. ತಮ್ಮ ಕೆಜಿಎಫ್ 1 ಹಾಗೂ 2ರ ಸುಮಾರು ಎಂಟು ವರ್ಷಗಳ ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. ಈ ನಡುವೆ ಯಶ್ ರಾಕಿಭಾಯ್ ಆಗಿ ಬದಲಾಗಿದ್ದು ಹೇಗೆ, ಈ ಸಿನಿಮಾ ತಮ್ಮ ಜೀವನದ ಮೇಲೆ ಯಾವ ರೀತಿಯ ಪ್ರಭಾವ ಬೀರಿದೆ ಎಂಬುದನ್ನು ಮನಬಿಚ್ಚಿ ಮಾತನಾಡಿದ್ದಾರೆ. 

ಕಳೆದ ಎಂಟು ವರ್ಷಗಳಿಂದ ಯಶ್ ಕೆಜಿಎಫ್ ಗುಂಗಿನಲ್ಲಿಯೇ ಜೀವಿಸುತ್ತಿದ್ದಾರೆ. ತಮ್ಮ ಸ್ಟೈಲ್‌ನಿಂದ ಹಿಡಿದು, ಹಲವು ವಿಷಯಗಳಲ್ಲಿ ಚಿತ್ರ ಬಿಡುಗಡೆಯಾಗಿ, ಆರು ತಿಂಗಳಾದರೂ ಇನ್ನೂ ಯಾವುದೇ ಬದಲಾವಣೆ ಆದಂತೆ ಕಾಣಿಸುತ್ತಿಲ್ಲ. ಆ ಕಾರಣದಿಂದ ರಾತ್ರಿ ಮಲಗುವಾಗ ನೀವು ಯಶ್ ಆಗ ಮಲಗುತ್ತೀರೋ, ರಾಕಿಭಾಯ್ ಆಗಿಯೋ ಎಂದು ಇಂಡಿಯಾ ಟುಡೇ ಕಾಂಕ್ಲೇವ್‌ನಲ್ಲಿ ಕೇಳಿದ ಪ್ರಶ್ನಿಗೆ ಯಶ್ ಉತ್ತರಿಸಿದ್ದಾರೆ.  ಕೆಜಿಎಫ್‌ನ ರಾಕಿಭಾಯ್‌ನ ಹಲವು ಗುಣಗಳು ನೈಜ ಯಶ್‌ಗೂ ಹೋಲಿಕೆಯಾಗುವಂತಿವೆ. ಹಾಗಂಥ ನಾನು ಗ್ಯಾಂಗ್‌ಸ್ಟರ್ ಆಗಲು ಸಾಧ್ಯವಿಲ್ಲ, ಎಂದಿದ್ದಾರೆ ರಾಕಿಂಗ್ ಸ್ಟಾರ್. 

ಯಶ್‌ನಂಥ ಆ್ಯಕ್ಷನ್ ಹೀರೋಗೆ (Action Hero) ಕೆಜಿಎಫ್‌ ರಾಕಿಭಾಯಿನಂಥ ಗ್ಯಾಂಗಸ್ಟರ್‌ ಪಾತ್ರದಲ್ಲಿ ಅಭಿನಯಿಸುವ ಅನಿವಾರ್ಯತೆ ಇತ್ತಾ, ಎಂದು ನಿರೂಪಕರು ಕೇಳಿದ ಪ್ರಶ್ನೆಗೆ, ರಾತ್ರಿಯ ಕತ್ತಲಿನ ಕಾರಣಕ್ಕೆ ಹಗಲಿನ ಸೌಂದರ್ಯ ಎದ್ದು ಕಾಣುವುದು. ಹಗಲಿನಿಂದಲೇ ರಾತ್ರಿಯ ನಿಗೂಢತೆ ಕುತೂಹಲ ಹುಟ್ಟಿಸುತ್ತೆ. ಒಬ್ಬ ನಟನಾಗಿ ಎಲ್ಲ ರೀತಿಯ ಪಾತ್ರಗಳಲ್ಲಿಯೂ ಅಭಿನಯಿಸುವಂಥ ಅನಿವಾರ್ಯತೆ ಇರುತ್ತದೆ. ಅಮಿತಾಭ್ ಬಚ್ಚನ್‌ ಅವರಂಥ ನಟರಿಗೂ ಇಂಥದ್ದೆ ಪ್ರಶ್ನೆ ಎದುರಾಗಿರುತ್ತೆ. ನೋಡುವ ಜನರಿಗೆ ಒಬ್ಬ ನಟನ ಅಭಿನಯದ ಬಗ್ಗೆ ಅರಿವಿರುತ್ತದೆ. ಜೀವನದಲ್ಲಿ ಒಳ್ಳೆಯದನ್ನು ಹೇಳುವ ಜೊತೆಗೆ, ಕೆಲವು ಸಂದರ್ಭಗಳಲ್ಲಿ ಕೆಲ ಋನಾತ್ಮಕ ವಿಷಯಗಳು ಒಳ್ಳೆಯದಲ್ಲ ಎಂದು ಹೇಳುವ ಅಗತ್ಯವಿರುತ್ತದೆ. ರಾಮಾಯಣದ ರಾವಣನಂಥ ಪಾತ್ರಗಳಲ್ಲಿಯೂ ದುರ್ವರ್ತನೆ ಜೊತೆ, ಕೆಲವು ಒಳ್ಳೆಯ ಗುಣಗಳನ್ನೂ ಕಾಣಬಹುದು. ಆದ್ದರಿಂದ, ಕೆಜಿಎಫ್‌ನಲ್ಲಿ ನಟಿಸಿದ ಪಾತ್ರಗಳು ಜೀವನವನ್ನು (LIfe) ಹೇಗೆ ಎಂದು ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗುತ್ತದೆ. ಕೆಲವು ನಿಬಂಧನೆಗಳನ್ನು ಹಾಕ್ಕೊಂಡು, ಅದು ಕ್ರಾಸ್ ಆಗದಂತೆ ನೋಡಿಕೊಳ್ಳುವ ಹೊಣೆ ನಮ್ಮಂಥ ಕಲಾವಿದರಲ್ಲಿರುತ್ತದೆ. ಒಟ್ಟಾರೆ ಒಳ್ಳೆಯದನ್ನೇ ಹೇಳಲು ಎಲ್ಲರೂ ಬಯಸುತ್ತಾರೆ. ಆದರೆ, ರಾಕಿಬಾಯ್‌ನಂಥ ಪಾತ್ರಗಳಲ್ಲಿಯೂ ಒಳ್ಳೇಯದನ್ನು ಹೇಳುವ ಉದ್ದೇಶವಿತ್ತು, ಎಂದು ಯಶ್ ಹೇಳಿದ್ದಾರೆ. 

ಕಾಂತಾರವೂ ನಮ್ಮ ನಿನಿಮಾವೇ: ಯಶ್

'Violence Violence Violence, I don't like, I avoid it, But, violence likes me,'  ಎಂಬ ಕೆಜಿಎಫ್‌ನಂಥ ಐಕಾನಿಕ್ ಡೈಲಾಗ್‌ನಲ್ಲಿ ವೇದಿಕೆ ಮೇಲೆಯೇ ಹೇಳಿದ್ದಾರೆ ಯಶ್. ಅಲ್ಲದೇ ಹಿಂದಿಯಲ್ಲೊಂದು ಡೈಲಾಗ್ ಹೇಳಿ, ಅಭಿಮಾನಗಳ ಮೆಚ್ಚುಗೆಗೆ ಪಾತ್ರರಾದರು. ಸ್ಟೈಲಿಶ್ ಡೈಲಾಗ್ಸ್ ಯಶ್ ಅವರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವಂತೆ ಯಶ್ ಮಾಡಿದರು. 

ಭಾರತೀಯ ಚಿತ್ರರಂಗ ಹಾಗೂ ಕನ್ನಡ ಸಿನಿಮಾಗಳು ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿಯೇ ಮೆಚ್ಚುಗೆಗೆ ಪಾತ್ರರಾಗುತ್ತಿರುದಕ್ಕೆ ಏನು ಕಾರಣಗಳು ಎಂಬ ಬಗ್ಗೆ ಯಶ್, ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಇನ್ನು ಮುಂದೆ ಕನ್ನಡ ನಟರು ಎಂದು ರೆಕಗ್ನೈಸ್ ಆಗೋ ಬದಲು ಎಲ್ಲ ನಟರೂ ಭಾರತೀಯ ನಟರು ಹಾಗೂ ಭಾರತೀಯ ಚಿತ್ರರಂಗ ಎಂದು ಗುರುತಿಸಿ ಕೊಳ್ಳುವ ಕಾಲ ಬಂದಿದೆ. ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಅಮಿತಾಭ್ ಬಚ್ಚನ್, ರಜನೀಕಾಂತ್, ಶಂಕರ್ ನಾಗ್ ಸೇರಿ ಭಾರತೀಯ ಚಿತ್ರರಂಗದ ಅನೇಕ ಹಿರಿಯ ನಟರು ತಮ್ಮ ರೋಲ್ ಮಾಡೆಲ್ಸ್. ಬಾಲಿವುಡ್‌ಗೆ ಯಶ್ ಅನಿವಾರ್ಯವಿದೆಯಾ ಎಂಬ ಬಗ್ಗೆ ಮಾತನಾಡಿದ ರಾಕಿಂಗ್ ಸ್ಟಾರ್, ಎಲ್ಲ ನಟರನ್ನೂ ಒಂದೇ ರೀತಿ ನೋಡುವಂತಾಗಬೇಕು ಎಂದು ಬಯಸಿದ್ದಾರೆ. 

ಬಾಲಿವುಡ್ ಬಗ್ಗೆ ಯಶ್ ಹೇಳಿದ್ದಿಷ್ಟು

ಅಲ್ಲದೇ ಬಸ್ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ತಮ್ಮ ತಂದೆ ಹಾಗೂ ಕನ್ನಡ ಚಿತ್ರರಂಗದಲ್ಲಿ ತಾವು ಬೆಳೆದ ಬಂದ ಪರಿ ಸೇರಿ, ಕೆಜಿಎಫ್‌ನಲ್ಲಿ ಸುಮಾರು ಎಂಟು ವರ್ಷಗಳ ಕಾಲ ಭಾಗಿಯಾದ ತಮ್ಮ ಸಿನಿ ಪಯಣದ ಬಗ್ಗೆಯೂ ಯಶ್ ಮನಬಿಚ್ಚಿ ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ನಿರೂಪಕರು ಕನ್ನಡ ಚಿತ್ರರಂಗ, ಅದರಲ್ಲಿಯೂ ಕಾಂತಾರದ ಬಗ್ಗೆ ಕೇಳಿದ ಪ್ರಶ್ನೆಗೆ ಎಲ್ಲ ಕನ್ನಡದ ಸಿನಿಮಾಗಳು ನಮ್ಮ ಸಿನಿಮಾವೇ ಎಂದು ಹೇಳುವ ಮೂಲಕ ಕನ್ನಡ ಚಿತ್ರರಂಗದ ಬಗ್ಗೆ ಎಲ್ಲರಿಗೂ ಮತ್ತಷ್ಟು ಹೆಮ್ಮೆ ಮೂಡುವಂತೆ ಮಾತನಾಡಿದ್ದಾರೆ.  

Follow Us:
Download App:
  • android
  • ios