ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ನಿರಾಸೆಯಾಗಿದೆ. ಸುದೀರ್ಘ ವಿಚಾರಣೆ ಬಳಿಕ ಕೇಜ್ರಿವಾಲ್ ಮಧ್ಯಂತರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ಪ್ರಕಟಿಸವುದಾಗಿ ಹೇಳಿತ್ತು. ಆದರೆ ವಿಚಾರಣೆ ಬಳಿಕ ತೀರ್ಪನ್ನು ಮೇ.09ರಂದು ಪ್ರಕಟಿಸುವುದಾಗಿ ಹೇಳಿದೆ. 

ನವದೆಹಲಿ(ಮೇ.07) ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೋರಾಟ ಕುತೂಹಲ ಹಾಗೇ ಉಳಿದುಕೊಂಡಿದೆ. ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತೀರ್ಪು ಮೇ.09ಕ್ಕೆ ಮುಂದೂಡಿದೆ. ಸಮಯದ ಅಭಾವದಿಂದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. 

ನ್ಯಾ ಸಂಜೀವ್ ಖನ್ನಾ ಪೀಠದಲ್ಲಿ ಕೇಜ್ರಿವಾಲ್ ಮಧ್ಯಮಂತ್ರ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಮುಖ್ಯಮಂತ್ರಿ ಅಥವಾ ಸಾಮಾನ್ಯ ವ್ಯಕ್ತಿ ಕಾನೂನಿನಡಿ ಎಲ್ಲರೂ ಒಂದೆ ಎಂದು ಇಡಿ ಪರ ವಕೀಲರು ವಾದ ಮಂಡಿಸಿದ್ದಾರೆ. ಜಾಮೀನು ನೀಡಲು ಇಡೀ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಕೇಜ್ರಿವಾಲ್‌ಗೆ 9 ಹಾರಿ ಸಮನ್ಸ್ ನೀಡಲಾಗಿದೆ. ಆದರೆ ಒಂದೇ ಒಂದು ಸಮನ್ಸ್‌ಗೆ ಕೇಜ್ರಿವಾಲ್ ಉತ್ತರಿಸಿಲ್ಲ. ಚುನಾವಣಾ ಪ್ರಚಾರಕ್ಕೆಂದು ಮಧ್ಯಂತರ ಜಾಮೀನು ನೀಡುವುದು ಸರಿಯಲ್ಲ. ಕಾನೂನಿನ ಮುಂದೆ ಜನಸಾಮಾನ್ಯ ಅಥವಾ ಮುಖ್ಯಮಂತ್ರಿ ಇಬ್ಬರೂ ಒಂದೇ ಎಂದು ಇಡಿ ಸುಪ್ರೀಂ ಕೋರ್ಟ್‌ಗೆ ಹೇಳಿದೆ. 

ಅರವಿಂದ್ ಕೇಜ್ರಿವಾಲ್‌ಗೆ ಶಾಕ್, ಮೇ.20ರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದ ದೆಹಲಿ ಕೋರ್ಟ್!

ಕೇಜ್ರಿವಾಲ್ ಮಧ್ಯಮಂತರ ಜಾಮೀನಿಗೆ ಒಲವು ತೋರಿದ್ದ ಸುಪ್ರೀಂ ಕೋರ್ಟ್, ಇಡೀ ಅಕ್ಷೇಪಣೆ ಸಲ್ಲಿಸಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡವಂತೆ ಮನವಿ ಮಾಡಿತ್ತು. ಹೀಗಾಗಿ ಜಾಮೀನು ಕುರುತಿ ಯಾವುದೇ ಸೂಚನೆ ನೀಡಿದ ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿತು.

ಮೇ 3ರಂದು ಆಪ್ ಮುಖ್ಯಸ್ಥ ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ‘ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡುವುದರ ಬಗ್ಗೆ ಪರಿಗಣಿಸಬಹುದು ಎಂದಿತ್ತು. ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ಕೇಜ್ರಿವಾಲ್ ಹಾಗೂ ಆಪ್ ನಾಯಕರಲ್ಲಿ ಹೊಸ ಹುರುಪು ತುಂಬಿತ್ತು.

ವಿಚಾರಣೆ ಶೀಘ್ರವೇ ಮುಕ್ತಾಯಗೊಳ್ಳುವ ಸಾಧ್ಯತೆಯಿಲ್ಲದಿದ್ದರೆ ಮಧ್ಯಂತರ ಜಾಮೀನನ್ನು ಪರಿಗಣಿಸಬಹುದು’ ಎಂದು ಹೇಳಿ ತನ್ನ ತೀರ್ಪನ್ನು ಮಂಗಳವಾರಕ್ಕೆ ಮುಂದೂಡಿಕೆ ಮಾಡಿತ್ತು. ಇಂದು ವಿಟಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇದೀಗ ಪ್ರಕರಣವನ್ನು ಮೇ.09ಕ್ಕೆ ಮುಂದೂಡಿದೆ.

ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ, ಖಲಿಸ್ತಾನ ಲಿಂಕ್‌ ಕುರಿತಾಗಿ ಎನ್‌ಐಎ ತನಿಖೆಗೆ ಶಿಫಾರಸು

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಮಾರ್ಚ್ 21ರಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಜಾಮೀನಿಗಾಗಿ ನಡೆಸಿದ ಹಲವು ಕಸರತ್ತುಗಳು ವಿಫಲಗೊಂಡಿತ್ತು.

ಇತ್ತ ದೆಹಲಿ ರೋಸ್ ಅವನ್ಯೂ ಕೋರ್ಟ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ಅವಧಿಯನ್ನು ಮೇ.20ರ ವರೆಗೆ ವಿಸ್ತರಿಸಿದೆ.