ಸ್ನೇಹ, ಸಂಬಂಧಗಳ ಬಗ್ಗೆ ಪೂಜಾ ಹೆಗಡೆ ಪಾಠ, ಅಷ್ಟೊಂದು ಅನುಭವ ಇದ್ಯಾ ಅಂತಿದಾರೆ ನೆಟ್ಟಿಗರು!

ವಿರುದ್ಧ ಲಿಂಗದವರೊಂದಿಗೆ ಕೂಡ ನಾವು ಬರೀ ಸ್ನೇಹ ಇಟ್ಟುಕೊಳ್ಳಬಹುದು, ಅದಕ್ಕಿಂತ ಹೆಚ್ಚು ಇನ್ನೇನೋ ಇರಲೇಬೇಕು ಅಂತೇನಿಲ್ಲ. ಮಹಿಳೆ ಮತ್ತು ಪುರುಷ ಕೇವಲ ಸ್ನೇಹಿತರಾಗಿರುವುದು ಸಾಧ್ಯ. ಸ್ನೇಹಿತರೆಲ್ಲ ಪ್ರೇಮಿಗಳಾಗಬೇಕು ಎಂಬ ಯಾವುದೇ ನಿಯಮವಿಲ್ಲ..

Actress Pooja Hegde talks about relationship and friendship in an interview srb

ನಟಿ ಪೂಜಾ ಹೆಗಡೆ (Pooja Hegde) ರಿಲೇಶನ್‌ಶಿಪ್‌ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಪೂಜಾ ಹೆಗಡೆ, 'ನೀವು ಯಾರ ಜತೆಗಾದರೂ ನಿಜವಾಗಿಯೂ ಒಳ್ಳೆಯ ಸಂಬಂಧದಲ್ಲಿ ಇದ್ದರೆ, ನಿಮ್ಮಿಬ್ಬರಲ್ಲಿ ಸೀಕ್ರೆಟ್‌ಗಳು, ಅಪನಂಬಿಕೆಗಳು ಕಡಿಮೆ ಇರುತ್ತವೆ. ನೀವು ಒಳ್ಳೆಯ ಸ್ನೇಹಿತರ ಜತೆ ಎಲ್ಲವನ್ನೂ ಹಂಚಿಕೊಳ್ಳುತ್ತೀರಿ. ನಿಮ್ಮ ಮತ್ತು ಅವರ ನಡುವೆ ಯಾವುದೇ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಅಗತ್ಯ ಇರುವುದಿಲ್ಲ' ಎಂದಿದ್ದಾರೆ. ಅವರು ಯಾಕೆ ಹೀಗೆ ಅಂದಿದ್ದಾರೆ ಎಂದರೆ ಅದಕ್ಕೂ ಮೊದಲು ಸಂದರ್ಶಕರು ಆ ಉತ್ತರ ಬರುವಂಥ ಪ್ರಶ್ನೆ ಕೇಳಿದ್ದಾರೆ. 

ಅದಿರಲಿ, ಮುಂದುವರಿದು ಮಾತನಾಡಿರುವ ಪೂಜಾ ಹೆಗಡೆ, ಸಂದರ್ಶಕರು ಮಧ್ಯೆ ಮಾತನಾಡಿದ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ್ದಾರೆ. ಸಂದರ್ಶಕರು 'ಈ ಕಾಲದಲ್ಲಿ ನಾವು ವಿರುದ್ಧ ಲಿಂಗದ ಯಾರೊಂದಿಗಾದರೂ ಮಾತನಾಡಿದರೆ ಅದೊಂದು ಸಮಸ್ಯೆಯಾಗುತ್ತದೆ. ಮಾತನಾಡದಿದ್ದರೂ ಅದೊಂದು ಸಮಸ್ಯೆಯಾಗುತ್ತದೆ ಅಲ್ಲವೇ?' ಎಂದು ಪೂಜಾ ಅವರನ್ನೇ ಕೇಳಿದ್ದಾರೆ. ಅದಕ್ಕೆ ಪೂಜಾ 'ನೀವು ಹೇಳಿದ್ದು ಹೌದು, ಆದರೆ ಅದು ಹಾಗೆ ಆಗಬೇಕಿಲ್ಲ. ಏಕೆಂದರೆ, ನಮ್ಮ ಸ್ನೇಹ ಲಿಂಗ ತಾರತಮ್ಯವನ್ನು ಮೀರಿ ಬೆಳೆಯಬೇಕು. 

ಪರಮ್-ಧನಂಜಯ್ 'ಕೋಟಿ'ಯಲ್ಲಿ ದಿನೂ ಸಾವ್ಕಾರ್; ತೆರೆ ಮೇಲೆ ರಮೇಶ್ ಇಂದಿರಾ ಘರ್ಜನೆ!

ವಿರುದ್ಧ ಲಿಂಗದವರೊಂದಿಗೆ ಕೂಡ ನಾವು ಬರೀ ಸ್ನೇಹ ಇಟ್ಟುಕೊಳ್ಳಬಹುದು, ಅದಕ್ಕಿಂತ ಹೆಚ್ಚು ಇನ್ನೇನೋ ಇರಲೇಬೇಕು ಅಂತೇನಿಲ್ಲ. ಮಹಿಳೆ ಮತ್ತು ಪುರುಷ ಕೇವಲ ಸ್ನೇಹಿತರಾಗಿರುವುದು ಸಾಧ್ಯ. ಸ್ನೇಹಿತರೆಲ್ಲ ಪ್ರೇಮಿಗಳಾಗಬೇಕು ಎಂಬ ಯಾವುದೇ ನಿಯಮವಿಲ್ಲ. ಹಾಗಿದ್ದಾಗ ಸ್ನೇಹವನ್ನು ಸ್ನೇಹ ಹಾಗೂ ಪ್ರೇಮವನ್ನು ಪ್ರೇಮವೆಂದು ನೋಡುವ ಪ್ರಯತ್ನ ನಮ್ಮ ನಾಗರೀಕ ಸಮಾಜದಲ್ಲಿ ಆಗಬೇಕು. ಅಂದರೆ, ಸದ್ಯ ಇರುವ ಮೆಂಟಾಲಿಟಿ ಬದಲಾಗಬೇಕು' ಎಂದಿದ್ದಾರೆ ನಟಿ ಪೂಜಾ ಹೆಗಡೆ. 

ನಿನ್ನೆಯ ಹೊರತು ನಾಳೆಯ ಮರೆತು, ಇಂದಷ್ಟೇ ನೋಡಿಕೊಂಡು ಹೋಗೋನು; ನಟ ರಾಮಕೃಷ್ಣ

ಅಂದಹಾಗೆ, ನಟಿ ಪೂಜಾ ಹೆಗಡೆ ವಿರುಪಾಕ್ಷ ನಿರ್ದೇಶನ, ನಟ ನಾಗ ಚೈತನ್ಯ ನಟನೆಯ ಮುಂಬರುವ ಚಿತ್ರಕ್ಕೆ ನಾಯಕಿಯಾಗಿ ನಟಿಸಲಿದ್ದಾರೆ.  2014ರಲ್ಲಿ ನಾಗ ಚೈತನ್ಯ ಹಾಗು ಪೂಜಾ ಹೆಗಡೆ ಜೋಡಿ 'ಒಕ ಲೈಲಾ ಕೋಸಮ್ (Oka Laila Kosam)'ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗದಿದ್ದರೂ ನಾಗಚೈತನ್ಯ-ಪೂಜಾ ಹೆಗಡೆ ಜೋಡಿ ಕೆಮೆಸ್ಟ್ರಿ ತುಂಬಾ ಚೆನ್ನಾಗಿದೆ ಎಂಬ ಮಾತು ಕೇಳಿ ಬಂದಿತ್ತು.

ಮೊಬೈಲ್‌ ಬಳಸುತ್ತಿರುವುದು ನಾವು, ಅದೇ ನಮ್ಮನ್ನು ಬಳಸುತ್ತಿಲ್ಲವಲ್ಲ; ಸಮಂತಾ ಲಾಜಿಕ್‌ಗೆ ಏನಂತೀರಾ?

ಆದರೆ, ಆ ಬಳಿಕ ಈ ಜೋಡಿ ಯಾವುದೇ ಚಿತ್ರದಲ್ಲಿ ಒಟ್ಟಾಗಿ ನಟಿಸಲಿಲ್ಲ. ಹೀಗಾಗಿ ಈ ಜೋಡಿಯ ಅಭಿಮಾನಿಗಳಿಗೆ ತುಂಬಾ ನಿರಾಸೆಯಾಗಿತ್ತು. ಈಗ ಮತ್ತೆ ಆ ಚಾನ್ಸ್ ಮರುಕಳಿಸಲಿದೆ.  ಸದ್ಯ ನಟ ಪೂಜಾ ಹೆಗಡೆ ಅವರು ತೆಲುಗು ಮತ್ತು ಬಾಲಿವುಡ್ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. 

Latest Videos
Follow Us:
Download App:
  • android
  • ios