Asianet Suvarna News Asianet Suvarna News
breaking news image

ನಿನ್ನೆಯ ಹೊರತು ನಾಳೆಯ ಮರೆತು, ಇಂದಷ್ಟೇ ನೋಡಿಕೊಂಡು ಹೋಗೋನು; ನಟ ರಾಮಕೃಷ್ಣ

ನಟ ರಾಮಕೃಷ್ಣ ಅವರು ನಾಯಕರಾಗಿ ನಟಿಸಿರುವ ಚಿತ್ರಗಳು ಸಾಕಷ್ಟಿವೆ. ಮಾನಸ ಸರೋವರ, ಮರ್ಯಾದೆ ಮಹಲ್, ರಂಗನಾಯಕಿ, ಅಮೃತ ಘಳಿಗೆ, ಸಂಗ್ಯಾ ಬಾಳ್ಯಾ, ಪ್ರಾಯ ಪ್ರಾಯ ಪ್ರಾಯ ಹೀಗೆ ಹಲವು ಚಿತ್ರಗಳಲ್ಲಿ ನಟ ರಾಮಕೃಷ್ಣ ಅವರು ನಾಯಕರಾಗಿ ನಟಿಸಿದ್ದಾರೆ. 

Senior Kannada actor Ramakrishna talks in an Interview about his life and work now srb
Author
First Published May 6, 2024, 4:52 PM IST

ಕನ್ನಡದ ಹಿರಿಯ ನಟ ರಾಮಕೃಷ್ಣ (Ramakrishna)ಅವರ ಸಂದರ್ಶನವೊಂದು ಯೂಟ್ಯೂಬ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಸದ್ಯ ನಟನೆಯಿಂದ ಕೊಂಚ ದೂರ ಅನ್ನುವಂತಿದ್ದು, ತಮ್ಮ ಮೂಲನೆಲೆ, ಅಂದರೆ ಸ್ವಂತ ಊರು ಶಿರಸಿ ಸಮೀಪದ ನೀರ್ನಳ್ಳಿಯಲ್ಲಿ ತೋಟ ನೋಡಿಕೊಳ್ಳುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ತಮ್ಮದೇ ಸ್ವಂತ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ನೀರು, ಗೊಬ್ಬರ ಹಾಕಿ ಬೆಳೆಸಿ ಅದನ್ನು ಇಂದಿಗೂ ಪೋಷಿಸಿಕೊಂಡು ಬರುತ್ತಿದ್ದಾರೆ ನಟ ರಾಮಕೃಷ್ಣ. ಡಾ ರಾಜ್‌ಕುಮಾರ್ ಅಭಿನಯದ 'ಬಬ್ರುವಾಹನ' ಚಿತ್ರದ ಶ್ರೀಕೃಷ್ಣ ಪಾತ್ರವನ್ನು ಯಾರಾದರೂ ಮರೆಯಲು ಸಾಧ್ಯವೇ?

ನಟ ರಾಮಕೃಷ್ಣ ಅವರು ನಾಯಕರಾಗಿ ನಟಿಸಿರುವ ಚಿತ್ರಗಳು ಸಾಕಷ್ಟಿವೆ. ಮಾನಸ ಸರೋವರ, ಮರ್ಯಾದೆ ಮಹಲ್, ರಂಗನಾಯಕಿ, ಅಮೃತ ಘಳಿಗೆ, ಸಂಗ್ಯಾ ಬಾಳ್ಯಾ, ಪ್ರಾಯ ಪ್ರಾಯ ಪ್ರಾಯ ಹೀಗೆ ಹಲವು ಚಿತ್ರಗಳಲ್ಲಿ ನಟ ರಾಮಕೃಷ್ಣ ಅವರು ನಾಯಕರಾಗಿ ನಟಿಸಿದ್ದಾರೆ. ಇನ್ನು, ಡಾ ರಾಜ್‌ಕುಮಾರ್, ಡಾ ವಿಷ್ಣುವರ್ಧನ್, ಅಂಬರೀಷ್, ಅನಂತ್‌ನಾಗ್, ಶಂಕರ್‌ ನಾಗ್ ಹೀಗೆ ಅವರ ಸಮಕಾಲೀನ ನಟರೊಂದಿಗೆ ತೆರೆ ಹಂಚಿಕೊಂಡು ಮುಖ್ಯವಾದ ಹಾಗೂ ಪೋಷಕ ಪಾತ್ರಗಳಲ್ಲಿ ಕೂಡ ನಟ ರಾಮಕೃಷ್ಣ ಕಾಣಿಸಿಕೊಂಡಿದ್ದಾರೆ. 

ಮೊಬೈಲ್‌ ಬಳಸುತ್ತಿರುವುದು ನಾವು, ಅದೇ ನಮ್ಮನ್ನು ಬಳಸುತ್ತಿಲ್ಲವಲ್ಲ; ಸಮಂತಾ ಲಾಜಿಕ್‌ಗೆ ಏನಂತೀರಾ?

ಇಂದು ಕೆಲವು ಸಿನಿಮಾಗಳು ಹಾಗೂ ಸೀರಿಯಲ್‌ಗಳಲ್ಲಿ ನಟ ರಾಮಕೃಷ್ಣ ಅವರು ನಟಿಸುತ್ತಿದ್ದರೂ ಅವುಗಳ ಸಂಖ್ಯೆ ಬಹಳಷ್ಟು ಕಡಿಮೆ ಎಂದೇ ಹೇಳಬಹುದು. ಅದಕ್ಕೆ ಕಾರಣವೇನಿರಬಹುದು ಎಂದು ಹಲವರು ಯೋಚಿಸುತ್ತಿರಬಹುದು. ಇನ್ನೂ ಕೆಲವರು ಅವಕಾಶಗಳ ಕೊರತೆ, ಅವರನ್ನು ಯಾರೂ ಕರೆಯುತ್ತಿಲ್ಲ ಎಂದುಕೊಳ್ಳಬಹುದು. ಆದರೆ, ಅದೆಲ್ಲವೂ ಅರ್ಧ ಸತ್ಯವಷ್ಟೇ ಎಂದಿದ್ದಾರೆ ನಟ ರಾಮಕೃಷ್ಣ. ಕಾರಣ, ಅವರು ಯಾಕೆ ಹೆಚ್ಚು ನಟಿಸುತ್ತಿಲ್ಲ, ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿಲ್ಲ ಎಂಬ ಬಗ್ಗೆ ಸ್ವತಃ ಅವರೇ ಹೇಳಿದ್ದಾರೆ. 

ಕೆಜಿಎಫ್‌ಗೂ ಮೊದಲೇ ಕನ್ನಡ ಸಿನಿಮಾ ಪ್ರೀತಿ ಮೆರೆದಿದ್ದ ಯಶ್, ಪರಭಾಷಿಕರ ಅವಹೇಳನಕ್ಕೆ ಕೌಂಟರ್ ಹೇಗಿತ್ತು ನೋಡಿ!

'ನಾನೀಗ ಬೆಂಗಳೂರಿನಲ್ಲಿ ಇಲ್ಲ, ನಮ್ಮೂರು ಶಿರಸಿಯ ನನ್ನ ಹಳ್ಳಿಯಾದ ನೀರ್ನಳ್ಳಿಯಲ್ಲಿ ಇದ್ದೇನೆ. ಇಲ್ಲಿ ನನ್ನದೇ ತೋಟದ ಕೆಲಸವನ್ನು ಮಾಡಿಕೊಂಡು, ಅದರ ಯೋಗಕ್ಷೇಮ ನೋಡಿಕೊಂಡು ಹಾಯಾಗಿದ್ದೇನೆ. ನಾನು ಶೂಟಿಂಗ್‌ ಹೋದರೆ ಅಲ್ಲಿ ಈ ರೀತಿಯ ವಾತಾವರಣ ಇರುವುದಿಲ್ಲ. ಜತೆಗೆ, ನಾನು ಶೂಟಿಂಗ್, ಆಕ್ಟಿಂಗ್, ಡಬ್ಬಿಂಗ್ ಹೀಗೆ ಬಣ್ಣದ ಬದುಕನ್ನು ಈಗಾಗಲೇ ಸಾಕಷ್ಟು ನೋಡಿದ್ದೇನೆ. ನನಗೆ ಈಗ ಅದರಲ್ಲಿ ಮತ್ತೆ ಮತ್ತೆ ಹುಡುಕಿಕೊಂಡು ಹೋಗಿ ತೊಡಗಿಸಿಕೊಳ್ಳುವ ಯಾವುದೇ ಆಸಕ್ತಿ ಇಲ್ಲ. ಜತೆಗೆ, ಇಲ್ಲಿನ ತೋಟ ನೋಡಿಕೊಳ್ಳುವ ಜವಾಬ್ದಾರಿಯೂ ಇದೆ. 

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಯನತಾರಾ, ಬಹುಮುಖ ಪ್ರತಿಭೆ ಎನಿಸಿಕೊಂಡ ಲೇಡಿ ಸೂಪರ್‌ ಸ್ಟಾರ್!

ಈ ಎಲ್ಲ ಕಾರಣಗಳಿಂದ ನನಗೆ ಈಗಲೂ ಆಫರ್‌ಗಳನ್ನು ಬರುತ್ತಿದ್ದರೂ ನಾನು ಒಪ್ಪಿಕೊಂಡು ನಟಿಸುತ್ತಿಲ್ಲ. ಆದರೂ ಹೊಸಬರ ಕೆಲವೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇನೆ. ಜತೆಗೆ, ನಟ ಸುನಿಲ್ ರಾವ್, ಗಣೇಶ್, ಸುದೀಪ್ ಹೀಗೆ ಕೆಲವು ಈಗಿನ ಪೀಳಿಗೆಯ ನಟ ರೊಂದಿಗೆ ನಟಿಸಿದ್ದೇನೆ. ಆದರೆ, ಮೊದಲಿನಂತೆ ಅದೇ ಕೆಲಸ ಮಾಡಲು ಆಗುತ್ತಿಲ್ಲ, ಜತೆಗೆ ನನಗೂ ಆ ಬಗ್ಗೆ ಅಷ್ಟೊಂದು ಆಸಕ್ತಿಯಿಲ್ಲ. 

ಕೋವಿಡ್ ವ್ಯಾಕ್ಸಿನ್ ಅಡ್ಡ ಪರಿಣಾಮ, ಶ್ರೇಯಸ್ ತಲ್ಪಾಡೆ ಕಾರ್ಡಿಯಾಕ್ ಅರೆಸ್ಟ್‌ ಹಿಂದಿದ್ಯಾ ಲಸಿಕೆ ಎಫೆಕ್ಟ್?

ನಾನು ಸರಳ, ಸೀದಾ ಸಾದಾ ಮನುಷ್ಯ. ನಿನ್ನೆಯ ಹೊರತು ನಾಳೆಯ ಮರೆತು, ಇಂದಷ್ಟೇ ನೋಡಿಕೊಂಡು ಹೋಗೋನು.. ಹೀಗಾಗಿ ನನಗೆ ಅದೇ ಮಾಡಬೇಕು, ಇದೇ ಮಾಡಬೇಕು ಎಂಬ ಯಾವುದೇ ಪ್ಲಾನ್ ಇಲ್ಲ. ಊಟ ತಿಂಡಿಯ ವಿಷಯದಲ್ಲೂ ಅಷ್ಟೇ, ಏನಾದರೊಂದು ಹಿತಮಿತವಾಗಿ ತಿಂದರೆ ಆಯಿತು' ಎಂದಿದ್ದಾರೆ 'ಮಾನಸ ಸರೋವರ' ಖ್ಯಾತಿಯ ಹಿರಿಯ ನಟರಾದ ರಾಮಕೃಷ್ಣ.

Latest Videos
Follow Us:
Download App:
  • android
  • ios