ಪ್ರಚಾರದ ದೊಡ್ಡ ವ್ಯವಸ್ಥೆಗಳೇ ಇಲ್ಲದ ಕಾಲದಲ್ಲಿ ತಮ್ಮ ಪ್ರತಿಭೆ ಮತ್ತು ಜನರ ಪ್ರೀತಿಯಿಂದಲೇ ಚಿತ್ರಮಂದಿರಗಳನ್ನು ತುಂಬಿಸಿದ್ದ ಡಾ. ರಾಜ್ಕುಮಾರ್ ಅವರ ಜನಪ್ರಿಯತೆ ಎಂತಹದ್ದು ಎಂಬುದಕ್ಕೆ ಅವರ ಸಿನಿಮಾಗಳ ಮರುಬಿಡುಗಡೆಯ ಕ್ರೇಜ್ ಕೂಡ ಸಾಕ್ಷಿಯಾಗಿದೆ. 50 ವರ್ಷಗಳ ಹಿಂದಿನ ಚಿತ್ರಗಳಿಗೂ ಇಂದಿಗೂ ಪ್ರೇಕ್ಷಕರಿಂದ ಬೇಡಿಕೆ ಇದೆ.
ಸೋಷಿಯಲ್ ಮೀಡಿಯಾಗಲೇ ಇರಲಿಲ್ಲ, ಆದರೂ ಅಣ್ನಾವ್ರ ಸಿನಿಮಾಗಳ ಕ್ರೇಜ್ ಬೆಟ್ಟದಷ್ಟಿತ್ತು!
ಇಂದಿನ ಕಾಲದಲ್ಲಿ ಒಂದು ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಅದರ ಪ್ರಚಾರಕ್ಕಾಗಿ ಸೋಷಿಯಲ್ ಮೀಡಿಯಾಗಳಲ್ಲಿ ನೂರಾರು ಪೋಸ್ಟ್ಗಳು, ಟ್ರೇಲರ್ಗಳು, ಸಂದರ್ಶನಗಳು, ಸುದ್ದಿಗೋಷ್ಠಿಗಳು ನಡೆಯುತ್ತವೆ. ಸಿನಿಮಾ ಹೇಗಿದೆ ಎಂಬುದನ್ನು ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳ ಮೂಲಕವೇ ತಿಳಿದುಕೊಳ್ಳುತ್ತಾರೆ. ಆದರೆ, ಕನ್ನಡ ಚಿತ್ರರಂಗದ ಸುವರ್ಣಯುಗದಲ್ಲಿ ಇಂತಹ ಯಾವುದೇ ಸೌಲಭ್ಯಗಳು ಇರಲಿಲ್ಲ. ಆದರೂ ಸಿನಿಮಾಗಳು ಚಿತ್ರಮಂದಿರಗಳಲ್ಲಿ ನೂರಾರು ದಿನಗಳ ಕಾಲ ಪ್ರದರ್ಶನ ಕಾಣುತ್ತಿದ್ದವು. ಅದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಕನ್ನಡದ ವರನಟ ಡಾ. ರಾಜ್ಕುಮಾರ್ (Dr Rajkumar) ಅವರ ಸಿನಿಮಾಗಳು!
ಕಡುಬಡತನದ ಕುಟುಂಬದಲ್ಲಿ ಮುತ್ತುರಾಜ್ ಆಗಿ ಜನಿಸಿ, ತಮ್ಮ ಅದ್ಭುತ ಅಭಿನಯ ಪ್ರತಿಭೆಯಿಂದ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದವರು ಡಾ. ರಾಜ್ಕುಮಾರ್ (Dr Rajkumar). ಕೇವಲ ನಟನಾಗಿ ಗುರುತಿಸಿಕೊಳ್ಳದೆ, ಕನ್ನಡಿಗರ ಪಾಲಿನ ಪ್ರೀತಿಯ ಅಣ್ಣಾವ್ರಾಗಿ ಬೆಳೆದ ಅವರ ಸಿನಿಮಾ ಪಯಣವೇ ಒಂದು ರೋಚಕ ಇತಿಹಾಸ. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅಣ್ಣಾವ್ರ ಅನೇಕ ಚಿತ್ರಗಳು ಬಿಡುಗಡೆಯಾದ ಸಂದರ್ಭದಲ್ಲಿ ದಾಖಲೆ ನಿರ್ಮಿಸಿದ್ದವು. ಅಷ್ಟೇ ಅಲ್ಲ, ಹಲವು ವರ್ಷಗಳ ನಂತರ ಮರುಬಿಡುಗಡೆಯಾದಾಗಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ.
ಅಣ್ಣಾವ್ರ ಹಿಟ್ ಸಿನಿಮಾಗಳಿಗೆ ಇಂದಿಗೂ ಬೇಡಿಕೆ!
ಡಾ. ರಾಜ್ಕುಮಾರ್ ಅಭಿನಯದ ಸಿನಿಮಾಗಳ ಪಟ್ಟಿ ಮಾಡಿದರೆ ಒಂದಕ್ಕಿಂತ ಒಂದು ಅದ್ಭುತ ಚಿತ್ರಗಳು ನೆನಪಾಗುತ್ತವೆ. 'ಸತ್ಯ ಹರಿಶ್ಚಂದ್ರ', 'ಮಂತ್ರಾಲಯ ಮಹಾತ್ಮೆ', 'ಕಸ್ತೂರಿ ನಿವಾಸ', 'ಬಂಗಾರದ ಮನುಷ್ಯ', 'ದಾರಿ ತಪ್ಪಿದ ಮಗ', 'ರಾಜಾ ನನ್ನ ರಾಜಾ', 'ಭಾಗ್ಯವಂತರು', 'ಬಬ್ರುವಾಹನ', 'ನಾನೊಬ್ಬ ಕಳ್ಳ', 'ಗಂಧದ ಗುಡಿ', 'ಎರಡು ಕನಸು' ಸೇರಿದಂತೆ ಹಲವು ಸಿನಿಮಾಗಳು ಇಂದಿಗೂ ಸಿನಿಪ್ರಿಯರ ನೆಚ್ಚಿನ ಚಿತ್ರಗಳಾಗಿವೆ. ಈ ಸಿನಿಮಾಗಳಲ್ಲಿ ಕೆಲವು ಮರುಬಿಡುಗಡೆಯಾದ ಸಂದರ್ಭದಲ್ಲಿಯೂ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆದಿವೆ.
ಅಂದು ಸೋಷಿಯಲ್ ಮೀಡಿಯಾ ಇರಲಿಲ್ಲ, ಆದರೂ ಬಾಯಿಮಾತಿನ ಪ್ರಚಾರವೇ ದೊಡ್ಡ ಶಕ್ತಿ!
ಇಂದಿನಂತೆ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಅಥವಾ ಇತರ ಸಾಮಾಜಿಕ ಜಾಲತಾಣಗಳು ಅಂದು ಇರಲಿಲ್ಲ. ಸಿನಿಮಾ ಸುದ್ದಿಗಳನ್ನು ತಿಳಿದುಕೊಳ್ಳಲು ಪತ್ರಿಕೆಗಳು, ಕೆಲವೊಂದು ಸುದ್ದಿಗೋಷ್ಠಿಗಳು ಮಾತ್ರ ಪ್ರಮುಖ ಮಾಧ್ಯಮಗಳಾಗಿದ್ದವು. ಅದರಲ್ಲೂ ಹಳ್ಳಿಗಳಲ್ಲಿ ಕಟ್ಟೆಯ ಮೇಲೆ ಕುಳಿತು ಜನರು ಮಾತನಾಡಿಕೊಳ್ಳುತ್ತಿದ್ದ ಸಿನಿಮಾ ವಿಚಾರಗಳೇ ಬಹುದೊಡ್ಡ ಪ್ರಚಾರದ ಸಾಧನವಾಗಿದ್ದವು.
ಒಬ್ಬರು ಸಿನಿಮಾ ನೋಡಿ ಮತ್ತೊಬ್ಬರಿಗೆ ಹೇಳುವುದು, ಅವರಿಂದ ಮತ್ತಷ್ಟು ಜನರಿಗೆ ಮಾಹಿತಿ ತಲುಪುವುದು ಹೀಗೆ ಬಾಯಿಮಾತಿನ ಪ್ರಚಾರದಿಂದಲೇ ಅಣ್ಣಾವ್ರ ಅನೇಕ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದ್ದವು. ಕೆಲವು ಚಿತ್ರಗಳು 100, 200 ದಿನಗಳನ್ನು ಪೂರೈಸಿದರೆ, ಇನ್ನೂ ಕೆಲವು ಸಿನಿಮಾಗಳು ವರ್ಷಗಟ್ಟಲೆ ಪ್ರದರ್ಶನ ಕಂಡ ಹೆಗ್ಗಳಿಕೆಗೆ ಪಾತ್ರವಾಗಿದ್ದವು.
ಮರಣಕ್ಕೂ ಸ್ವಲ್ಪ ಕಾಲದ ಮೊದಲು ಮಾಲಾಶ್ರೀಗೆ ನಟ ಪುನೀತ್ ರಾಜ್ಕುಮಾರ್ ಹೇಳಿದ್ದೇನು?
ಇಂದು ಯೂಟ್ಯೂಬ್ ಮೂಲಕ ಹೊರಬರುತ್ತಿವೆ ಅಂದಿನ ಅಪರೂಪದ ಘಟನೆಗಳು!
ಅಂದಿನ ಕಾಲದಲ್ಲಿ ಸಿನಿಮಾ ತಾರೆಯರ ವೈಯಕ್ತಿಕ ಬದುಕು ಮತ್ತು ಚಿತ್ರೀಕರಣದ ಹಿಂದಿನ ಘಟನೆಗಳು ಇಂದಿನಂತೆ ಜನರಿಗೆ ಸುಲಭವಾಗಿ ತಲುಪುತ್ತಿರಲಿಲ್ಲ. ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟರ ಸಿನಿಮಾಗಳ ಬಗ್ಗೆ ಮಾತ್ರವಲ್ಲದೆ, ಅವರ ಜೀವನದ ಆಸಕ್ತಿದಾಯಕ ಸಂಗತಿಗಳನ್ನು ತಿಳಿದುಕೊಳ್ಳುವ ಕುತೂಹಲವಿದ್ದರೂ ಮಾಹಿತಿಯ ಮೂಲಗಳು ಸೀಮಿತವಾಗಿದ್ದವು.
ಆದರೆ ಈಗ ಕಾಲ ಬದಲಾಗಿದೆ. ಅಂದು ನಡೆದ ಹಲವು ಅಪರೂಪದ ಘಟನೆಗಳು, ಅನುಭವಗಳು ಮತ್ತು ನೆನಪುಗಳನ್ನು ತಿಳಿದಿರುವವರು ಯೂಟ್ಯೂಬ್ ಸಂದರ್ಶನಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಅಣ್ಣಾವ್ರ ಬದುಕಿನ ಅನೇಕ ಆಸಕ್ತಿದಾಯಕ ಸಂಗತಿಗಳು ಇಂದಿನ ಪೀಳಿಗೆಯ ಅಭಿಮಾನಿಗಳಿಗೂ ಪರಿಚಯವಾಗುತ್ತಿವೆ.
'ದೊಡ್ಮನೆ' ಅಂದ್ರೆ ಬಿಗ್ ಬಾಸ್ ಮನೆ ಅಲ್ಲ, ಡಾ.ರಾಜ್ಕುಮಾರ್ ಮನೆ; ಆ ಹೆಸರು ಬಂದಿರೋದ್ರ ಹಿಂದೆ ಇದೆ ಈ ಕಥೆ!
ಒಟ್ಟಿನಲ್ಲಿ, ಪ್ರಚಾರದ ದೊಡ್ಡ ವ್ಯವಸ್ಥೆಗಳೇ ಇಲ್ಲದ ಕಾಲದಲ್ಲಿ ತಮ್ಮ ಪ್ರತಿಭೆ ಮತ್ತು ಜನರ ಪ್ರೀತಿಯಿಂದಲೇ ಚಿತ್ರಮಂದಿರಗಳನ್ನು ತುಂಬಿಸಿದ್ದ ಡಾ. ರಾಜ್ಕುಮಾರ್ ಅವರ ಜನಪ್ರಿಯತೆ ಎಂತಹದ್ದು ಎಂಬುದಕ್ಕೆ ಅವರ ಸಿನಿಮಾಗಳ ಮರುಬಿಡುಗಡೆಯ ಕ್ರೇಜ್ ಕೂಡ ಸಾಕ್ಷಿಯಾಗಿದೆ. 50 ವರ್ಷಗಳ ಹಿಂದಿನ ಚಿತ್ರಗಳಿಗೂ ಇಂದಿಗೂ ಪ್ರೇಕ್ಷಕರಿಂದ ಬೇಡಿಕೆ ಇರುವುದು ಅಣ್ಣಾವ್ರ ಕಲಾತ್ಮಕ ಸಾಧನೆಯ ಮಹತ್ವವನ್ನು ಸಾರುತ್ತದೆ.


