ಮೇಘನಾ ರಾಜ್ ಹೆರಿಗೆಗೆ ಡಾಕ್ಟರ್ ಡೇಟ್ ಕೊಟ್ಟಿದ್ದು ನವೆಂಬರ್‌ಗೆ. ಆದರೆ ಅಕ್ಟೋಬರ್‌ನಲ್ಲೇ ಆಕೆ ತಾಯಿಯಾಗ್ತಾರೆ ಅನ್ನೋ ಸುದ್ದಿ ಎಲ್ಲೆಡೆ ಹಬ್ಬಿದೆ. ಅದರಲ್ಲೂ ಚಿರಂಜೀವಿ ಬರ್ತ್ ಡೇ ದಿನನೇ ಮೇಘನಾ ಸರ್ಜಾ ಕುಡಿಗೆ ಜನ್ಮ ನೀಡಲಿದ್ದಾರೆ ಅನ್ನೋ ತರದ ಮಾತುಗಳೂ ಕೇಳಿ ಬರುತ್ತಿದೆ. ಹಾಗಾದರೆ ಸತ್ಯ ಏನು, ನವೆಂಬರ್‌ನಲ್ಲಿದ್ದ ಹೆರಿಗೆ ಡೇಟ್ ಅಕ್ಟೋಬರ್‌ಗೆ ಪ್ರಿಪೋನ್ ಆಗಿದ್ದು ಹೇಗೆ? ಹಾಗಿದ್ರೆ ಮೇಘನಾಗೆ ಅಕ್ಟೋಬರ್‌ನಲ್ಲಿ ಹೆರಿಗೆ ಆಗಲ್ವಾ? ಅನ್ನೋ ಪ್ರಶ್ನೆಗಳಿವೆ. ಅದಕ್ಕೆ ಉತ್ತರ ಕೊಡೋ ಪ್ರಯತ್ನ ಇದು. 

"
ಮೇಘನಾ ರಾಜ್ ಸರ್ಜಾ.. ಸದ್ಯಕ್ಕೆ ಎಲ್ಲೆಲ್ಲೂ ಇವರ ಪ್ರೆಗ್ನಿನ್ಸಿಯದೇ ಸುದ್ದಿ. ಬಹುಶಃ ಎಲ್ಲವೂ ಸರಿಯಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲವೋ ಏನೋ. ಜೂನ್ ೭ ೨೦೨೦ ಮೇಘನಾ ಮಾತ್ರವಲ್ಲ, ಸರ್ಜಾ ಕುಟುಂಬ, ಮೇಘನಾ ಕುಟುಂಬ, ಜೊತೆಗೆ ಕೋಟ್ಯಂತರ ಅಭಿಮಾನಿಗಳಿಗೆ ಮಹಾನ್ ದುರ್ದೈವದ ಕ್ಷಣ. ಯುವ ತಾರೆ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಬದುಕಿಗೆ ಗುಡ್ ಬೈ ಹೇಳಿದ ದಿನ. ಆಗ ಆಪ್ತರೆಲ್ಲರಿಗೂ ಆಘಾತ, ಕಾರಣ ಅವರ ಪತ್ನಿ ಮೇಘನಾ, ಚಿರು ಕುಡಿಗಳನ್ನು ಗರ್ಭದಲ್ಲಿ ಹೊತ್ತಿದ್ದರು. ಈ ಆಘಾತ ಆಕೆಯ ಮೇಲೆ ಯಾವ ಪರಿಣಾಮ ಬೀರುತ್ತೋ, ಅದರಿಂದ ಹೊಟ್ಟೆಯಲ್ಲಿರುವ ಕಂದಮ್ಮಗಳ ಮೇಲೆ ಎಂಥಾ ಪರಿಣಾಮ ಆಗಬಹುದು ಅಂತೆಲ್ಲ ಸೂಕ್ಷ್ಮ ಮನಸ್ಸಿನವರು ಕೊರಗಿದ್ದರು. ಜೊತೆಗೆ ಇನ್ನೂ ಕೆಲವರು ಆಕೆಗಿನ್ನೂ ಚಿಕ್ಕ ವಯಸ್ಸು. ಗಂಡನನ್ನು ಕಳೆದುಕೊಂಡಿದ್ದಾಳೆ, ಈಗ ಮಗುವಾದರೆ ಒಬ್ಬಳಿಂದ ಸಂಭಾಳಿಸಲಾಗುತ್ತಾ, ಅದರ ಬದಲು ಆಕೆ ಗಟ್ಟಿ ಮನಸ್ಸು ಮಾಡಿ ಭವಿಷ್ಯದ ಬಗ್ಗೆ ಚಿಂತಿಸಬಾರದೇಕೆ ಅಂತಲೂ ಅಂದುಕೊಂಡರು. ಆದರೆ ಚಿರು ಸಾವಿನಿಂದ ತತ್ತರಿಸಿದ್ದ ಮೇಘನಾ ತನ್ನ ಭವಿಷ್ಯದ ನೆವಕ್ಕಾಗಿ ಪ್ರೇಮದ ಕುಡಿಯನ್ನು ಬಲಿಕೊಡಲು ಸುತಾರಾಂ ಸಿದ್ಧಳಿರಲಿಲ್ಲ. ಏನೇ ಆಗಲಿ, ಚಿರು ಕುಡಿಯನ್ನು ಉಳಿಸಿಯೇ ಉಳಿಸುತ್ತೇನೆ ಅಂದುಕೊಂಡಳು. ಅಲ್ಲಿಯವರೆಗೆ ಮೇಘನಾ ರಾಜ್ ಮಾತ್ರ ಆಗಿದ್ದವಳು ಆಮೇಲಿಂದ ತನ್ನ ಹೆಸರನ್ನೇ ಮೇಘನಾ ರಾಜ್ ಸರ್ಜಾ ಅಂತ ಬದಲಿಸಿಕೊಂಡಳು. 

ಚಿರು ಇಲ್ಲದ ಜೀವನದ ಬಗ್ಗೆ ಮೇಘನಾ ಮೊದಲ ಮಾತು! 

ಗರ್ಭವತಿ ಮಾನಸಿಕವಾಗಿ ಆಘಾತಗೊಂಡರೆ ಪರಿಣಾಮ ಮಗುವಿನ ಮೇಲಾಗುತ್ತೆ. ಹೀಗಾಗಿ ಸನ್ನಿವೇಶ ಹೇಗೇ ಇದ್ದರೂ ಆಕೆ ಮನಸ್ಸನ್ನು ಖುಷಿಯಲ್ಲಿಡಲೇ ಬೇಕು. ಮೇಘನಾ ಕಷ್ಟಪಟ್ಟು ಇಂಥಾದ್ದೊಂದು ಸಂಯಮ ತಂದುಕೊಂಡಳು. ತನ್ನ ಈ ಸ್ಥಿತಿ ಮಗುವಿನ ಮೇಲೆ ಯಾವ ರೀತಿಯ ಪರಿಣಾಮವನ್ನೂ ಬೀರಬಾರದು ಅಂದುಕೊಂಡಳು. ಒಂದು ವೇಳೆ ಹಾಗೇನಾದರೂ ಆದರೆ ಅದರ ಪರಿಣಾಮ ಹೊಟ್ಟೆಯೊಳಗಿರುವ ಕುಡಿಯ ಮೇಲಾಗುತ್ತದೆ ಅಂದುಕೊಂಡು ಮನಸ್ಸು ತಿಳಿಯಾಗಿಯೇ ಇಟ್ಟುಕೊಳ್ಳಲು ನಿರ್ಧರಿಸಿದಳು. ಜೊತೆಗೆ ಚಿರು ತನ್ನ ಜೊತೆಗೇ ಇದ್ದಾನೆ ಅನ್ನುವ ಗಟ್ಟಿ ನಿರ್ಧಾರ ತಾಳಿದಳು. ಏಳು ತಿಂಗಳಲ್ಲಿ ಸೀಮಂತ ಮಾಡಿಸಿಕೊಳ್ಳಲು ಒಲ್ಲೆ ಎಂದರೂ ಒಂಬತ್ತನೆಯ ತಿಂಗಳಲ್ಲಿ ಎಸ್ ಎಂದಳು. ಚಿರುವಿನ ದೊಡ್ಡ ಕಟೌಟ್ ಆಕೆಯ ಮನಸ್ಸಿನೊಳಗಿದ್ದ ಚಿರುವಿನ ಪ್ರತಿರೂಪದ ಹಾಗಿತ್ತು. ಚಿರುವಿನ ರೂಪ ಪ್ರತಿಕ್ಷಣವೂ ತನ್ನ ಜೊತೆಗಿರುವಾಗ ಮೇಘನಾಗೆ ತಾನು ಒಂಟಿ ಅಂತ ಅನಿಸಲೇ ಇಲ್ಲ. ಈ ಕಾರಣಕ್ಕೆ ಆಕೆಗೆ ಸೀಮಂತ, ನಂತರ ಧ್ರುವ ಸರ್ಜಾ ಆಯೋಜಿಸಿದ್ದ ಬೇಬಿ ಶೋವರ್ ಫಂಕ್ಷನ್‌ನಲ್ಲೂ ನಗು ನಗುತ್ತಲೇ ಭಾಗವಹಿಸೋದಕ್ಕೆ ಸಾಧ್ಯವಾಯಿತು. 

ಮೇಘನಾ ರಾಜ್‌ಗೆ ಚಿರಂಜೀವಿ ಸರ್ಜಾ ಹೇಳಿದ ಕೊನೆಯ ಮಾತುಗಳಿವು! 
ಹಾಗೆ ನೋಡಿದರೆ ಮೇಘನಾಗೆ ಹೆರಿಗೆಗೆ ಡಾಕ್ಟರ್ ಡೇಟ್ ಕೊಟ್ಟಿದ್ದು ನವೆಂಬರ್ ಗೆ. ಆದರೆ ಎಷ್ಟೋ ಸಲ ಮಗುವಿನ ಬೆಳವಣಿಗೆ ಚೆನ್ನಾಗಿದ್ದರೆ ಹೆರಿಗೆ ಡೇಟ್ ಪ್ರಿಪೋನ್ ಆಗುತ್ತೆ. ಮೇಘನಾಗೂ ಹೀಗೇ ಆದದ್ದು. ಮಗುವಿನ ಬೆಳವಣಿಗೆಯ ಗ್ರಾಫ್ ನೋಡಿ ಡಾಕ್ಟರ್ ಅಕ್ಟೋಬರ್ ನಲ್ಲೇ ಹೆರಿಗೆಯಾಗುತ್ತೆ ಅಂದರು. 

ದೈವ ನಿಯಮವೋ, ಅಥವಾ ಚಿರುವಿನ ಪ್ರಭಾವವೋ ಚಿರು ಹುಟ್ಟಿದ ತಿಂಗಳಲ್ಲೇ ಚಿರುವಿನ ಕುಡಿಯೂ ಭೂಮಿ ಮೇಲೆ ಬರಲಿದೆ. ನವೆಂಬರ್‌ನಲ್ಲಿ ಆಗಬೇಕಿದ್ದ ಹೆರಿಗೆ ಪವಾಡಸದೃಶವಾಗಿ ಅಕ್ಟೋಬರ್‌ಗೆ ಶಿಫ್ಟ್ ಆಗಿದೆ. ಅಲ್ಲಿಗೆ ಚಿರು ಮತ್ತೆ ಮೇಘನಾ ಮಡಿಲಲ್ಲಿ ಮಗನಾಗಿಯೋ, ಮಗಳಾಗಿಯೋ ಹುಟ್ಟಿ ಬರುತ್ತಾರೆ ಅನ್ನೋ ನಂಬಿಕೆಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. 

ಮೇಘನಾ ರಾಜ್ ಸೀಮಂತ ಸಂಭ್ರಮ: ಇಲ್ಲಿದೆ ವಿಡಿಯೋ