ಖ್ಯಾತ ನಿರೂಪಕಿ ಚೈತ್ರಾ ವಾಸುದೇವ್ ಮತ್ತು ಜಗದೀಪ್ ಇತ್ತೀಚೆಗೆ ವಿವಾಹವಾದರು. ಸದ್ಯಕ್ಕೆ ಹನಿಮೂನ್ ಪ್ಲ್ಯಾನ್ ಇಲ್ಲವೆಂದು ಅವರು ತಿಳಿಸಿದ್ದಾರೆ. ಜಗದೀಪ್ ಕನ್ಸ್ಟ್ರಕ್ಷನ್ ಕೆಲಸಗಳಲ್ಲಿ ಹಾಗೂ ಚೈತ್ರಾ ಈವೆಂಟ್ ಮ್ಯಾನೇಜ್‌ಮೆಂಟ್ ಮತ್ತು ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲಸ ಮಾಡಲು ಆಸಕ್ತಿ ಇರುವವರಿಗೆ ಸಹಾಯ ಮಾಡುವ ಸಂಸ್ಥೆ ತೆರೆಯುವ ಆಲೋಚನೆಯಿದೆ ಎಂದು ಚೈತ್ರಾ ಹೇಳಿದ್ದಾರೆ. ಚೈತ್ರಾ ಈ ಹಿಂದೆ ಸತ್ಯಾ ನಾಯ್ಡು ಅವರನ್ನು ವಿವಾಹವಾಗಿ ವಿಚ್ಛೇದನ ಪಡೆದಿದ್ದರು.

ಕನ್ನಡದ ಖ್ಯಾತ ನಿರೂಪಕಿ, ಸೋಷಿಯಲ್ ಮೀಡಿಯಾ ಸ್ಟಾರ್ ಹಾಗೂ ಉದ್ಯಮಿ ಆಗಿ ತುರುಗಿಸಿಕೊಂಡಿರುವ ಚೈತ್ರಾ ವಾಸುದೇವ್ ಮತ್ತು ಜಗದೀಪ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿಕ್ಕಾಪಟ್ಟೆ ಅದ್ಧೂರಿಯಾಗಿ ಮದುವೆ ಮಾಡಿಕೊಂಡ ನಿರೂಪಕಿ ಸದ್ಯ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಕಾರಣ ಬ್ರೇಕ್ ತೆಗೆದುಕೊಂಡು ಟ್ರಿಪ್ ಪ್ಲ್ಯಾನ್ ಮಾಡಲಿದ್ದಾರಂತೆ. ಮದುವೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನವಜೋಡಿ ಟ್ರಿಪ್‌ ಬಗ್ಗೆ ಚರ್ಚೆ ಮಾಡಿದ್ದಾರೆ.

ಮದುವೆ ನಂತರ ಎಲ್ಲಿಗೆ ಟ್ರಿಪ್ ಪ್ಲ್ಯಾನ್ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ 'ಹನಿಮೂನ್‌ಗೆ ಯಾವುದೇ ಪ್ಲ್ಯಾನ್ ಮಾಡಿಲ್ಲ' ಎಂದು ಚೈತ್ರಾ ವಾಸುದೇವನ್ ಹೇಳುತ್ತಾರೆ. 'ಸದ್ಯಕ್ಕೆ ಮದುವೆ ಪ್ಲ್ಯಾನಿಂಗ್ ಮಾಡಿ ಮದುವೆ ಕೆಲಸಗಳು ಮುಗಿಸಿಕೊಂಡು ರೆಸ್ಟ್‌ ತೆಗೆದುಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದೀನಿ. ಅದಾದ ಮೇಲೆ ಆರಾಮ್ ಆಗಿ ಪ್ಲ್ಯಾನ್ ಮಾಡುತ್ತೀವಿ' ಎಂದು ಜಗದೀಸ್ ಸ್ಪಷ್ಟನೆ ನೀಡುತ್ತಾರೆ. ಪ್ಯಾರಿಸ್‌ನಲ್ಲಿ ಮಂಡಿಯೂರಿ ಚೈತ್ರಾ ವಾಸುದೇವನ್‌ಗೆ ಜಗದೀಪ್ ಪ್ರಪ್ರೋಸ್ ಮಾಡಿದ್ದರು. ಇದೇ ಪ್ರಪೋಸಲ್‌ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅನೌನ್ಸ್ ಮಾಡಿದ್ದರು. ಮದುವೆ ಆದ್ಮೇಲೆ ಹನಿಮೂನ್‌ಗೆ ಪ್ಯಾರಿಸ್‌ ಬುಕ್‌ ಮಾಡಿಕೊಳ್ಳುತ್ತಾರೆ ಆದರೆ ಇವರಿಬ್ಬರು ಪ್ರಪೋಸಲ್‌ಗೆ ಪ್ಯಾರಿಸ್‌ ಹೋಗಿರುವುದು ಬಿಗ್ ಬಾಸ್. ಹೀಗಾಗಿ ಹನಿಮೂನ್‌ಗೆ ಏನ್ ಪ್ಲ್ಯಾನ್ ಎಂದು ಕೇಳಿದ್ದಕ್ಕೆ 'ಮತ್ತೆ ಬೇರೆ ಎಲ್ಲಾದರೂ ಪ್ಲ್ಯಾನ್ ಮಾಡ್ತಿವಿ' ಎಂದು ಜಗದೀಪ್ ಹೇಳಿದ್ದಾರೆ.

ಚೈತ್ರಾ ವಾಸುದೇವನ್ ಗಂಡನ ಕಾಲು ತೊಳೆದ ನಾದಿನಿ ಚಂದನಾ; ಅತ್ತೆ-ಮಾವ ಮಾಡೋ ಕಾಲ ಮುಗೀತು ಎಂದ ನೆಟ್ಟಿಗರು!

ಮದುವೆ ನಂತರ ನಿಮ್ಮ ಪ್ಲ್ಯಾನ್‌ಗಳು ಏನು ಎಂದು ಕೇಳಿದಾಗ 'ಜಗದೀಸ್‌ ಕಂಸ್ಟ್ರಕ್ಷನ್‌ನಲ್ಲಿ ಇರುವ ಕಾರಣ ಸದ್ಯ ಕೈಯಲ್ಲಿ ಇರುವ ಕೆಲವು ಪ್ರಾಜೆಕ್ಟ್‌ಗಳನ್ನು ಮುಗಿಸುತ್ತಾರೆ. ನಾನು ಈವೇಂಟ್ ಮ್ಯಾನೆಜ್‌ಮೆಂಟ್ ಮಾಡುತ್ತಿದ್ದೀನಿ ಈಗಾಲೆ ಸಾಲು ಸಾಲು ಕಾರ್ಯಕ್ರಮಗಳು ನಡೆಯುತ್ತಿದೆ. ಶೋ ಕೂಡ ಇರುವುದರಿಂದ ಅದನ್ನು ಮುಂದುವರೆಸಿಕೊಂಡು ಹೋಗುತ್ತೀನಿ. ನಮ್ಮಂತೆ ಕೆಲಸ ಮಾಡಬೇಕು ಎಂದು ಆಸೆ ಪಡುತ್ತಿರುವವರಿಗೆ ಸಹಾಯ ಆಗಬೇಕು ಎಂದು ಒಂದು ಸಂಸ್ಥೆ ಆರಂಭಿಸಬೇಕು ಅಂದುಕೊಂಡಿದ್ದೀನಿ' ಎಂದು ಚೈತ್ರಾ ಉತ್ತರಿಸಿದ್ದಾರೆ.

ಸ್ನೇಹಿತೆ ಲವ್‌ ಪ್ರಪೋಸಲ್‌ ಮುಂದಿಡಲು ಹೋಗಿ ಸೋನಲ್‌ ಲವಲ್ಲಿ ಬಿದ್ದ ಕಥೆ ಲೀಕ್; ತರುಣ್‌ ಸುಧೀರ್ ಲಕ್ಕಿ ಎಂದ ನೆಟ್ಟಿಗರು

ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಅಜ್ಜಿ ಆಸೆ ಪಟ್ಟರು ಎಂದು ಚೈತ್ರಾ ವಾಸುದೇವನ್ ಸತ್ಯಾ ನಾಯ್ಡು ಎಂಬುವವರನ್ನು ಮದುವೆ ಮಾಡಿಕೊಂಡರು. 5 ವರ್ಷದ ಸಂಸಾರದ ನಂತರ ಡಿವೋರ್ಸ್ ಪಡೆಯಲು ಮುಂದಾಗಿದ್ದು ನಿಜಕ್ಕೂ ಆಶ್ಚರ್ಯ. ವೈಯಕ್ತಿಕ ಕಾರಣಗಳನ್ನು ಕೊಟ್ಟು ಚೈತ್ರಾ ವಾಸುದೇವನ್ ಡಿವೋರ್ಸ್ ರಿವೀಲ್ ಮಾಡಿದ್ದರು. ಇದಾದ ನಂತರ ಜಗದೀಪ್ ಪರಿಚಯವಾಗಿದ್ದು ಮದುವೆ ಸೆಟ್ ಆಗಿದ್ದು. ಅಲ್ಲದೆ ಮಾಜಿ ಗಂಡ ಸತ್ಯ ನಾಯ್ಡು ಕೂಡ ಇದೇ ದಿನಾಂಕದಂದು ಮದುವೆಯಾಗಿದ್ದಾಳೆ. 

ಕೊಡಗಿನ ತೋಟದ ಮನೆಯಲ್ಲಿ ಭೂತಕೋಲ ಆರಾಧನೆ ಮಾಡಿಸಿದ ಜೈ ಜಗದೀಶ್ ಪುತ್ರಿಯರು; ಫೋಟೋ ವೈರಲ್