- Home
- Entertainment
- Sandalwood
- ಕೊಡಗಿನ ತೋಟದ ಮನೆಯಲ್ಲಿ ಭೂತಕೋಲ ಆರಾಧನೆ ಮಾಡಿಸಿದ ಜೈ ಜಗದೀಶ್ ಪುತ್ರಿಯರು; ಫೋಟೋ ವೈರಲ್
ಕೊಡಗಿನ ತೋಟದ ಮನೆಯಲ್ಲಿ ಭೂತಕೋಲ ಆರಾಧನೆ ಮಾಡಿಸಿದ ಜೈ ಜಗದೀಶ್ ಪುತ್ರಿಯರು; ಫೋಟೋ ವೈರಲ್
ಕೊಡಗಿನಲ್ಲಿ ಭೂತಕೋಲ ಆಯೋಜಿಸಿದ ಅವಳಿ ಸಹೋದರಿಯರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ಕನ್ನಡ ಚಿತ್ರರಂಗ ಹಿರಿಯ ನಟ ಜೈ ಜಗದೀಶ್ ಮತ್ತು ಪತ್ನಿ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಮೂವರು ಪುತ್ರಿಯರಾದ ವೈಭವಿ, ವೈನಿಧಿ ಹಾಗೂ ವೈಸಿರಿ ತಮ್ಮ ಹುಟ್ಟೂರಿನಲ್ಲಿ ಭೂತ ಕೋಲ ಆರಾಧನೆ ಮಾಡಿದ್ದಾರೆ.
'ಈ ವರ್ಷ ಭೂತ ಕೋಲ ಆರಾಧನೆ ಆರೋಜಿಸುತ್ತಿರುವುದಕ್ಕೆ ಪುಣ್ಯ ಮಾಡಿದ್ದೀವಿ. ನಾವು ಎಷ್ಟು ದೂರ ಬಂದಿದ್ದೀವಿ ಅಲ್ವಾ? ನಮ್ಮ ಮನೆಯಲ್ಲಿ ಇಷ್ಟೋಂದು ಶಕ್ತಿ ಇರುವ ದೈವಗಳು ಇರುವುದಕ್ಕೆ ಪುಣ್ಯ ಮಾಡಿದ್ದೀವಿ' ಎಂದು ವೈನಿಧಿ ಬರೆದುಕೊಂಡಿದ್ದಾರೆ.
'ನಾವು ಅವರು ಕುಟುಂಬದವರು ಅಂದರೆ ತಪ್ಪಾಗದು. ನಿಮ್ಮ ರಕ್ಷಣೆ, ಪ್ರೀತಿ ಮತ್ತು ಮಾರ್ಗದರ್ಶನವನ್ನು ನನ್ನ ಕುಟುಂಬದ ಪ್ರತಿಯೊಬ್ಬರು ಅನುಭವಿಸಿದ್ದಾರೆ. ಇಂತಹ ಅದ್ಭುತವಾಗ ಸಂಸ್ಕೃತಿಯನ್ನು ಎದುರಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ'
'ಈ ಕ್ಷಣದಲ್ಲಿ ಅಜ್ಜಿ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೀನಿ. ನೀವು ಎಲ್ಲಿದ್ದರೂ ಅಲ್ಲಿಂದ ನಮ್ಮನ್ನು ನೋಡುತ್ತಿದ್ದೀರಿ ಅಂದುಕೊಂಡಿದ್ದೀನಿ. ನೀವು ಕೂಡ ನಮಗೆ ಆಶೀರ್ವಾದ ನೀಡಬೇಕು'ಎಂದು ಬರೆದುಕೊಂಡಿದ್ದಾರೆ.
'ನಮ್ಮ ತೋಟದಲ್ಲಿ ನಿಜಕ್ಕೂ ದೈವ ಶಕ್ತಿಯನ್ನು ನೋಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಈ ಪೂಜೆ ನಡೆಸಲು ದೇವರು ಆ ಶಕ್ತಿ ಕೊಟ್ಟಿರುವುದಕ್ಕೆ ಪುಣ್ಯ ಮಾಡಿದ್ದೀವಿ' ಅಂದಿದ್ದಾರೆ ವೈಭವಿ ಜಗದೀಶ್.
ಜೈ ಜಗದೀಶ್ ಪುತ್ರಿಯರು ಪುಟ್ಟ ಮಕ್ಕಳಿದ್ದಾಗ ಸಿನಿಮಾ ಮಾಡಿದ್ದರು. ಅದಾದ ಮೇಲೆ ಯಾನ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಿದ್ದರೂ ಕೂಡ ಸೋಷಿಯಲ್ ಮೀಡಿಯಾ ಮೂಲಕ ಸುದ್ದಿಯಲ್ಲಿದ್ದಾರೆ.