- Home
- Entertainment
- Sandalwood
- ಚೈತ್ರಾ ವಾಸುದೇವನ್ ಗಂಡನ ಕಾಲು ತೊಳೆದ ನಾದಿನಿ ಚಂದನಾ; ಅತ್ತೆ-ಮಾವ ಮಾಡೋ ಕಾಲ ಮುಗೀತು ಎಂದ ನೆಟ್ಟಿಗರು!
ಚೈತ್ರಾ ವಾಸುದೇವನ್ ಗಂಡನ ಕಾಲು ತೊಳೆದ ನಾದಿನಿ ಚಂದನಾ; ಅತ್ತೆ-ಮಾವ ಮಾಡೋ ಕಾಲ ಮುಗೀತು ಎಂದ ನೆಟ್ಟಿಗರು!
ಮದುವೆಯಲ್ಲಿ ಅತ್ತೆ ಮಾವ ಕಾಲು ತೊಳೆಯುವ ಕಾಲ ಮುಗಿಯಿತ್ತು...ಈಗ ತಂಗಿಯಂದಿರುವ ಮಾಡುತ್ತಾರೆ. ನೋಡಿ ಚೈತ್ರಾ ವಾಸುದೇವನ್ ಮದುವೆಯಲ್ಲಿ ಏನ್ ಆಯ್ತು?

ಕನ್ನಡದ ಖ್ಯಾತ ನಿರೂಪಕಿ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಚೈತ್ರಾ ವಾಸುದೇವ್ ಮತ್ತು ಉದ್ಯಮಿ ಜಗದೀಸ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಎರಡನೇ ಮದುವೆ ಮಾಡಿಕೊಂಡರೂ ಕೂಡ ಚೈತ್ರಾ ಯಾರಿಗೂ ಕಡಿಮೆ ಇಲ್ಲದಂತೆ ಮಾಡಿಕೊಂಡಿದ್ದಾರೆ. ಮದುವೆಯಲ್ಲಿ ಸಿನಿಮಾ ತಾರೆಯರು, ಸ್ನೇಹಿತರು ಮತ್ತು ಕುಟುಂಬಸ್ಥರು ಭಾಗಿಯಾಗಿದ್ದರು.
ಮದುವೆ ಸಮಯದಲ್ಲಿ ಹುಡುಗ ಕಾಶಿಯಾತ್ರೆ ಹೋಗುವ ಸಮಯದಲ್ಲಿ ಅತ್ತೆ-ಮಾವ ನಿಲ್ಲಿಸಿ ಪಾದ ತೊಳೆದು ಕರೆದುಕೊಂಡು ಬರುತ್ತಾರೆ. ಆದರೆ ಇಲ್ಲಿ ಅತ್ತೆ ಮಾವ ಬದಲು ನಾಧಿನಿ ತೊಳೆದಿದ್ದಾರೆ.
ಚೈತ್ರಾ ವಾಸುದೇವನ್ ಸಹೋದರಿ ಚಂದನಾ ಪಾದ ತೊಳೆಯುವಾಗ ಜಗದೀಶ್ ನಾಚಿಕೊಂಡಿದ್ದಾರೆ. ಅಯ್ಯೋ ಬೇಡ ಬೇಡ ಅಂತ ನಾಚಿಕೊಳ್ಳುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ.
ಅತ್ತೆ ಮಾವ ಕಾಲು ತೊಳೆದು ಪೂಜೆ ಮಾಡುವ ಕಾಲು ಈ ಮುಗಿದಿದೆ. ಈಗ ಕೆಲವರು ಬೇಡವೇ ಬೇಡ ಎನ್ನುತ್ತಾರೆ ಇನ್ನೂ ಕೆಲವರಿಗೆ ಈ ರೀತಿ ನಾದಿನಿ ಬಾಮೈದಾ ಪೂಜೆ ಮಾಡುತ್ತಾರೆ. ಇದೆಲ್ಲಾ ಟ್ರೆಂಡ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಚೈತ್ರಾ ವಾಸುದೇವ್ ಮತ್ತು ಸಹೋದರಿ ಚಂದನಾ ಒಟ್ಟಿಗೆ ಈವೇಂಡ್ ಮ್ಯಾನೆಜ್ಮೆಂಟ್ ಹೊಂದಿದ್ದಾರೆ. ಹೀಗಾಗಿ ಚೈತ್ರಾ ಮದುವೆಯ ಬಹುತೇಕ ಕಾರ್ಯಕ್ರಮಗಳನ್ನು ಸಹೋದರಿ ಮ್ಯಾನೇಜ್ ಮಾಡುತ್ತಿದ್ದರು.