ನಟ ಧನ್ವೀರ್ ಮತ್ತು ರೇಷ್ಮಾ ಅಭಿನಯದ 'ವಾಮನ' ಸಿನಿಮಾ ಬಿಡುಗಡೆಯಾಗಿದ್ದು, ದರ್ಶನ್ ಚಿತ್ರತಂಡದೊಂದಿಗೆ ವಿಶೇಷ ಪ್ರದರ್ಶನದಲ್ಲಿ ವೀಕ್ಷಿಸಿದ್ದಾರೆ. ಸಿನಿಮಾ ತಾಯಿ ಸೆಂಟಿಮೆಂಟ್ ಮತ್ತು ಫೈಟ್ ದೃಶ್ಯಗಳಿಂದ ಕೂಡಿದ್ದು, ಧನ್ವೀರ್ ನಟನೆ ಅದ್ಭುತವಾಗಿದೆ ಎಂದು ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಬೆಂಬಲ ನೀಡುವಂತೆ ಅವರು ಜನರಲ್ಲಿ ವಿನಂತಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಬಗ್ಗೆಯೂ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಧನ್ವೀರ್ ಮತ್ತು ರೇಷ್ಮಾ ನಟನೆಯ ವಾಮನ ಸಿನಿಮಾ ರಿಲೀಸ್‌ ಆಗಿದೆ. ನಟ ದರ್ಶನ್ ಸಿನಿಮಾ ನೋಡಬೇಕು ಎಂದು ಚಿತ್ರತಂಡ ಸ್ಪೆಷಲ್ ಶೋ ಆಲೋಜಿಸಿತ್ತು. ಈ ವೇಳೆ ನಟ ದರ್ಶನ್ ವಾಮನ ಸಿನಿಮಾ ಹೇಗಿದೆ ಎಂದು ಹಾಗೂ ಯಾಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಿಲ್ಲ ಎಂದು ಹಂಚಿಕೊಂಡಿದ್ದಾರೆ. 

'ಧನ್ವೀರ್ ನಟನೆಯ ನಾಲ್ಕನೇ ಸಿನಿಮಾ ಇದು. ನೀವು ನಾನು ನೋಡಿದಂತೆ ಟ್ರೈಲರ್‌ನಲ್ಲಿ ತುಂಬಾ ಮಾಸ್ ಇರಬಹುದು ಅನಿಸುತ್ತದೆ ಆದರೆ ಇಲ್ಲಿ ತುಂಬಾ ಒಳ್ಳೆ ತಾಯಿ ಸೆಂಟಿಮೆಂಟ್ ತೋರಿಸಿದ್ದಾರೆ. ತಾಯಿ ಎಷ್ಟು ಮುಖ್ಯ ತಂದೆ ಏನ್ ಮಾಡುತ್ತಾರೆ ಅನ್ನೋ ಎಲಿಮೆಂಟ್‌ನ ಚೆನ್ನಾಗಿ ಬಳಸಿಕೊಂಡಿದ್ದಾರೆ. ಫಸ್ಟ್‌ ಹಾಫ್ ಸಿನಿಮಾ ನೋಡಿದಾಗ ಎಲ್ಲೋ ಏನೋ ನೋಡುತ್ತಿದ್ದೀವಿ ಅನಿಸಲು ಶುರುವಾಗಿತ್ತು ಆದರೆ ಅದು ಮುಗಿದ ಮೇಲೆ ಮತ್ತೊಂದು ರೀತಿಯಲ್ಲಿ ಚೆನ್ನಾಗಿದೆ. ಅದನ್ನು ನಾನು ರಿವೀಲ್ ಮಾಡಬಾರದು. ಸಿನಿಮಾದಲ್ಲಿ ಫೈಟ್ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ಇರುವ ಮುದ್ದು ರಾಕ್ಷಸಿ ಹಾಡನ್ನು ನೋಡಿದ್ದೀನಿ ಅದು ಕೂಡ ಚೆನ್ನಾಗಿದೆ ಸೂಪರ್ ಹಿಟ್ ಆಗುತ್ತದೆ ಎಂದು ನಿರ್ದೇಶಕರಿಗೆ ಹೇಳಿದ್ದೆ' ಎಂದು ಸಿನಿಮಾ ನೋಡಿದ ನಂತರ ದರ್ಶನ್ ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ.

ಪೊಲೀಸ್‌ ವಸ್ತ್ರ ಧರಿಸಿದ ಸೋನು ಶ್ರೀನಿವಾಸ್ ಗೌಡ; ಟ್ರೋಲ್ ಮಾಡಿರೋರನ್ನ ರುಬ್ಬಿ ಬಿಡ್ತಾಳೆ ಎಂದ ನೆಟ್ಟಗರು!

'ಧನ್ವೀರ್ ತುಂಬಾ ಬೆಳೆದಿದ್ದಾರೆ...ನಾಲ್ಕನೇ ಸಿನಿಮಾದಲ್ಲಿ ಬೇರೆ ರೀತಿಯಲ್ಲಿ ಕಾಣಿಸಲು ಶುರುವಾಗಿದ್ದಾನೆ. ಫೈಟ್ ಅಂದ್ರೆ ಹೊಡಿ ಬಡೀ ಅಂತೀವಿ ಆದರೆ ಇಲ್ಲಿ ತುಂಬಾ ಚೆನ್ನಾಗಿ ಪೋಟ್ರೇಟ್ ಮಾಡಿದ್ದಾರೆ.6 ಅಡಿ 3 ಇಂಚ್‌ ಇದ್ದಾನೆ ಧನ್ವೀರ್...ನನಗಿಂತ ಒಂದೆರಡು ಇಂಚು ಜಾಸ್ತಿನೆ...ಆದ್ರೂ ಸಿನಿಮಾದಲ್ಲಿ ಕಾಲುಗಳನ್ನು ಸರಿಯಾಗಿ ಬಳಸಿಕೊಂಡಿದ್ದಾರೆ ಉದ್ದ ಇರುವವರಿಗೆ ಅಪರ್ ಬಾಡಿ ತುಂಬಾ ಶಾರ್ಟ್ ಇರುತ್ತೆ ಕಾಲುಗಳು ಉದ್ದ ಇರುತ್ತದೆ ಆದರೆ ಸಿನಿಮಾದಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ. ಇದು ನೀಟ್ ಆಂಡ್ ಕ್ಲೀನ್ ಸಿನಿಮಾ ಒಳ್ಳೆ ಮಾರ್ಲ್ ಹೊಂದಿದೆ. ಕರ್ನಾಟಕದ ಜನತೆ ಬಳಿ ಕೇಳಿಕೊಳ್ಳುವುದು ಒಂದೇ ವಾಮನ ಅಂದ್ರೆ ಏನು ಭಿಕ್ಷೆ ಬೇಡಲು ಬಂದ ಹುಡುಗ ಬಲಿಚಕ್ರವರ್ತಿ ಭಿಕ್ಷೆ ಬೀಡುತ್ತಾನೆ ನಿನಗ ಎಲ್ಲಿಗೆ ಬೇಕಿದ್ರು ಹೆಜ್ಜೆ ಇಟ್ಟಿಕೊಳ್ಳಬಹದು ಎನ್ನುತ್ತಾರೆ. ಆದರೆ ಈ ನಮ್ಮ ವಾಮನ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲಿಡಲು ಹೆಜ್ಜೆ ಕೇಳುತ್ತಿದ್ದಾರೆ ಅಷ್ಟೇ. ಕನ್ನಡದ ಜನತೆ ಆ ಜಾಗ ಕೊಡುತ್ತಾರೆ ಅನ್ನೋ ನಂಬಿಕೆ ಇದೆ' ಎಂದು ದರ್ಶನ್ ಹೇಳಿದ್ದಾರೆ.

ಸೀರಿಯಲ್‌ನಲ್ಲಿ ಗೋಳಾಡೋದು ಇಲ್ಲಿ ಮಜಾ ಮಾಡೋದು; ಭಾವಿಪತ್ನಿ ಜೊತೆ ಶಮಂತ್‌ ಫೋಟೋ ವೈರಲ್

'ನಾನ್ ಮಾಡ್ಲಿ, ಚಿಕ್ಕಣ್ಣ ಮಾಡ್ಲಿ ಅಥವಾ ಧನ್ವೀರ್ ಮಾಡಲಿ...ಇಂಡಸ್ಟ್ರಿಗೆ ಒಳ್ಳೆಯ ಸಿನಿಮಾ ಬಂದ್ರೆ ಸಾಕು. ಅವತ್ತು ಹೇಳಿದ್ದು ಒಂದೇ ಇವತ್ತು ಹೇಳುತ್ತಿರುವುದು ಒಂದೇ ನಾವು ಮಾಡುವುದು ಕನ್ನಡ ಸಿನಿಮಾ ಮಾತ್ರ. ನಾವು ಬೇರೆ ಭಾಷೆಯಲ್ಲಿ ಸಿನಿಮಾ ಮಾಡ್ತಲ್ಲ ಅಥವಾ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿಲ್ಲ. ಸಿನಿಮಾದಲ್ಲಿ ಧನ್ವೀರ್ ಲವ್ ತುಂಬಾ ಚೆನ್ನಾಗಿ ಮಾಡಿದ್ದಾನೆ ಆ ತರ ಲವ್ ನಾವು ಮಾಡಬೇಕಿದೆ. ಮುದ್ದು ರಾಕ್ಷಸಿ ಹಾಡು ತುಂಬಾ ಚೆನ್ನಾಗಿದೆ...ನಿಮಗೆ ಮದ್ವೆ ಆಗಿದ್ಯಾ? ಹಾಗಿದ್ರೆ ಅವರಿಗೆ ಮುದ್ದು ರಾಕ್ಷಸಿ ಅಂತ ಹೇಳಿದೀರಾ? ಮುದ್ದು ರಾಕ್ಷಸಿ ಹೇಳಿದರೆ ಅವರಿಗೆ ಖುಷಿ ಆಗುತ್ತೆ ಅಂತ' ಎಂದು ದರ್ಶನ್ ಹೇಳಿದ್ದಾರೆ' ಎಂದಿದ್ದಾರೆ ದರ್ಶನ್. 

ಬಿಗ್ ಬಾಸ್ ಅಂದ್ರೆನೇ ನಂಗೆ ಕೋಪ ಬರುತ್ತೆ; ex-ಸ್ಪರ್ಧಿ ಅಕ್ಷತಾ ಹೇಳಿಕೆ ವೈರಲ್