ಸೋನು ಶ್ರೀನಿವಾಸ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುವ ವ್ಯಕ್ತಿ. ಪ್ರಮೋಷನ್ ಮೂಲಕ ಹಣ ಸಂಪಾದಿಸಿ ಬೆಂಗಳೂರಿನಲ್ಲಿ ಸೈಟ್, ಅಪಾರ್ಟ್ಮೆಂಟ್ ಹಾಗೂ ಊರಿನಲ್ಲಿ ಮನೆ ಕಟ್ಟಿದ್ದಾರೆ. ಇತ್ತೀಚೆಗೆ ಪೊಲೀಸ್ ವಸ್ತ್ರದಲ್ಲಿ ಕಾಣಿಸಿಕೊಂಡಿದ್ದು, ವೆಬ್ ಸೀರೀಸ್ ಒಂದರಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸುವುದು ಸೋನು ಅವರ ಆಸೆಯಾಗಿದೆ. ಬಿಗ್ ಬಾಸ್ ಓಟಿಟಿಯಲ್ಲಿ ಸ್ಪರ್ಧಿಸಿ ಸಾಕಷ್ಟು ಬದಲಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್, ವ್ಲಾಗ್ ಹಾಗೂ ಪ್ರಮೋಷನ್ ಮಾಡ್ಕೊಂಡು ಹೆಸರು ಮಾಡಿರುವ ಸೋನು ಶ್ರೀನಿವಾಸ್ ಗೌಡ ಅತಿ ಹೆಚ್ಚು ಟ್ರೋಲ್ ಆದ ವ್ಯಕ್ತಿ. ಕುಂತ್ರು ನಿಂತ್ರು ಸೋನು ಗೌಡ ಕಾಲೆಳೆಯುವ ಜನರಿಗೆ ಉತ್ತರವೇ ಆಕೆ ಬೆಳೆಯುತ್ತಿರುವ ರೀತಿ. ಅಲ್ಪಸ್ವಲ್ಪ ಪ್ರಮೋಷನ್ ಮಾಡ್ಕೊಂಡು ಹಣ ಸಂಪಾದನೆ ಮಾಡುತ್ತಿರುವ ಸೋನು ಬೆಂಗಳೂರಿನಲ್ಲಿ ಎರಡು ಸೈಟ್, ಒಂದು ಅಪಾರ್ಟ್ಮೆಂಟ್ ಹಾಗೂ ಊರಿನಲ್ಲಿ ಮನೆ ಕಟ್ಟಿಸಿದ್ದಾರೆ. ಖಂಡಿತ ಇದಕ್ಕೆ ಫ್ಯಾಮಿಲಿ ಸಪೋರ್ಟ್ ಇದೆ ಆದರೆ ಸೋನು ಕೊಡುಗೆ ಹೆಚ್ಚಿದೆ ಎನ್ನಬಹುದು. ಇಷ್ಟೆಲ್ಲಾ ಸಂಪಾದನೆ ಮಾಡುತ್ತಿರುವ ಸೋನು ಬದಲಾದ ಲುಕ್ ಮತ್ತೆ ವೈರಲ್ ಆಗುತ್ತಿದೆ. 

ಸೋನು ಶ್ರೀನಿವಾಸ್ ಗೌಡ ಪೊಲೀಸ್‌ ವಸ್ತ್ರ ಧರಿಸಿ ಫೋಸ್ ಕೊಟ್ಟಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ. ಪೊಲೀಸ್ ವಸ್ತ್ರ ಧರಿಸಿರುವುದು ಅಲ್ಲ ಕೈಯಲ್ಲಿ ಗನ್ ಹಿಡಿದು ಪೋಸ್ ಕೊಟ್ಟಿದ್ದಾರೆ. ಖಾಕಿ ಬಟ್ಟೆ ಮೇಲೆ ನೀಲಿ ಬಣ್ಣದ ಹೆಸರಿನ ಬ್ಯಾಡ್ಜ್‌ ಧರಿಸಿದ್ದು ಅಲ್ಲಿ ಸೋನು ಅಂತ ಇಲ್ಲ.ಯಾಕೆ ಈ ಲುಕ್ ಎಂದು ತಲೆ ಕೆಡಿಸಿಕೊಂಡವರಿಗೆ ಸಿಕ್ಕ ಉತ್ತರವೇ ಶೂಟಿಂಗ್‌ನಲ್ಲಿ ಕ್ಲಿಕ್ ಮಾಡಿರುವುದು ಎಂದು.ಹೌದು! ಸೋನು ಗೌಡ ವೆಬ್‌ ಸೀರಿಸ್‌ ಒಂದರಲ್ಲಿ ನಟಿಸುತ್ತಿದ್ದಾರೆ ಆ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಶೂಟಿಂಗ್ ಸಮಯದಲ್ಲಿ ಕ್ಲಿಕ್ ಮಾಡಿರುವ ಫೋಟೋ ಇದು ಎನ್ನಲಾಗಿದೆ. 

ಸೀರಿಯಲ್‌ನಲ್ಲಿ ಗೋಳಾಡೋದು ಇಲ್ಲಿ ಮಜಾ ಮಾಡೋದು; ಭಾವಿಪತ್ನಿ ಜೊತೆ ಶಮಂತ್‌ ಫೋಟೋ ವೈರಲ್

ಸಿನಿಮಾಗಳಲ್ಲಿ ನಟಿಸಬೇಕು ಅನ್ನೋದು ಸೋನು ಗೌಡ ಆಸೆ. ಒಳ್ಳೆ ಚಿತ್ರಕಥೆಗಳು ಬರಲಿ ಎಂದು ಕಾಯುತ್ತಿದ್ದರು ಹೀಗಾಗಿ ಯಾವುದೇ ಸಿನಿಮಾ ಪ್ರೀಮಿಯರ್ ಶೋ ನಡೆದರೂ ಪ್ರಮೋಷನ್‌ ನೆಪದಲ್ಲಿ ಭಾಗಿಯಾಗುತ್ತಿದ್ದರು. ಅಯ್ಯೋ ನಿಜ ಜೀವನದಲ್ಲಿ ಸೋನು ಪೊಲೀಸ್ ಆಗಿಬಿಟ್ಟರೆ ಖಂಡಿತ ಟ್ರೋಲ್ ಮಾಡುವವರನ್ನು ಎಳೆದು ತಂದು ರುಬ್ಬಿ ಬಿಸಾಡುತ್ತಾಳೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.ಸುಮಾರು 11 ಲಕ್ಷ ಫಾಲೋವರ್ಸ್‌ನ ಇನ್‌ಸ್ಟಾಗ್ರಾಂನಲ್ಲಿದ್ದಾರೆ, ಇವರೆಲ್ಲಾ ವೆಬ್‌ ಸೀರಿಸ್‌ ನೋಡಿಬಿಟ್ಟರೆ 1 ಮಿಲಿಯನ್ ವೀಕ್ಷಣೆ ಸುಲಭವಾಗಿ ಮುಟ್ಟುತ್ತದೆ.ಬಿಗ್ ಬಾಸ್ ಓಟಿಟಿಯಲ್ಲಿ ಸ್ಪರ್ಧಿಸಿರುವ ಸೋನು ಗೌಡ ಹೊರ ಬಂದ್ಮೇಲೆ ಸಾಕಷ್ಟು ಬದಲಾಗಿದ್ದಾರೆ. ಒಂದು ಸ್ಟ್ಯಾಂಡರ್ಡ್‌ ಆಫಿ ಲೀವಿಂಗ್ ಬೆಳೆಸಿಕೊಂಡು ಜೀವನ ಕಟ್ಟಿಕೊಳ್ಳುತ್ತಿದ್ದಾರೆ.

ಬಿಗ್ ಬಾಸ್ ಅಂದ್ರೆನೇ ನಂಗೆ ಕೋಪ ಬರುತ್ತೆ; ex-ಸ್ಪರ್ಧಿ ಅಕ್ಷತಾ ಹೇಳಿಕೆ ವೈರಲ್