ಬಿಗ್ ಬಾಸ್ ಅಂದ್ರೆನೇ ನಂಗೆ ಕೋಪ ಬರುತ್ತೆ; ex-ಸ್ಪರ್ಧಿ ಅಕ್ಷತಾ ಹೇಳಿಕೆ ವೈರಲ್
ನಿಮಗೆ ಏನು ಇಷ್ಟ ಆಗಲ್ಲ ಅಂತ ಕೇಳಿದ್ದಕ್ಕೆ ಬೇರೆ ಉತ್ತರ ಕೊಡದೆ ಬಿಗ್ ಬಾಸ್ ಹೆಸರು ತೆಗೆದಿದ್ದು ಯಾಕೆ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಅಕ್ಷತಾ ಪಾಂಡವಪುರ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು! ಇತ್ತೀಚಿಗೆ ನೀಡಿದ ಖಾಸಗಿ ಸಂದರ್ಶನದಲ್ಲಿ ಅಕ್ಷಿತಾ ಮತ್ತೆ ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆ ಮಾತನಾಡಿದ್ದಾರೆ. ನಿರೂಪಕಿ ಸಿಂಪಲ್ ಪ್ರಶ್ನೆ ಕೇಳಿದರೂ ಯಾಕೆ ಬಿಗ್ ಬಾಸ್ ಎಳೆದರು ಎಂದು ಇಲ್ಲಿದೆ ನೋಡಿ.
'ನಿಮಗೆ ತುಂಬಾ ಕೋಪ ಬರುವ ವಿಷಯ ಯಾವುದು?' ಎಂದು ನಿರೂಪಕಿ ಪ್ರಶ್ನೆ ಮಾಡಿದಾಗ. 'ಏನೋ ಗೊತ್ತಿಲ್ಲ ಬಿಗ್ ಬಾಸ್ ಅಂತ ಹೇಳಿದರೆ ಸಾಕು ಕೋಪ ಬರುತ್ತದೆ' ಎಂದು ಅಕ್ಷತಾ ಹೇಳಿದ್ದಾರೆ.
'ಏನೋ ಗೊತ್ತಿಲ್ಲ ಬಿಗ್ ಬಾಸ್ ಅಂದ್ರೆನೇ ಕೋಪ ಬರುತ್ತೆ. ಪಾಪ ನಾನು ಬಿಗ್ ಬಾಸ್ ತಂಡವನ್ನು ದೂರುತ್ತಿಲ್ಲ ಆದರೆ ನನ್ನನ್ನು ಬಿಗ್ ಬಾಸ್ ಕಾರ್ಯಕ್ರಮದಿಂದ ಗುರುತಿಸಿದರೆ ಕೋಪ ಬರುತ್ತೆ' ಎಂದಿದ್ದಾರೆ ಅಕ್ಷತಾ.
ಬಿಗ್ ಬಾಸ್ ಮನೆಯಲ್ಲಿದ್ದಾಗ ಅಕ್ಷತಾ ಪಾಂಡವಪುರ ಅಷ್ಟಾಗಿ ಹೆಸರು ಮಾಡಲಿಲ್ಲ. ಸಾಮಾನ್ಯವಾಗಿ ಶೋ ಮುಗಿದ ಮೇಲೆ ಎಲ್ಲರೂ ಸಿನಿಮಾ ಮತ್ತು ಸೀರಿಯಲ್ ಅಂತ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿ ಬಿಡುತ್ತಾರೆ.
'ಪಿಂಕಿ ಎಲ್ಲಿ?' ಮತ್ತು 'ಕೋಳಿ ಎಸ್ರು' ಚಿತ್ರದಲ್ಲಿ ಅಕ್ಷತಾ ಪಾಂಡವಪುರ ಅಭಿನಯಿಸಿದ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ಸಿನಿಮಾ ಜೊತೆಯಲ್ಲಿ ರಂಗಭೂಮಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗೂ ತಮ್ಮದೇ ಫ್ಯಾಷನ್ ಬೋಟೆಕ್ ಹೊಂದಿದ್ದಾರೆ. ಇಲ್ಲಿ ಪಕ್ಕಾ ಕಾಟನ್ ವಸ್ತ್ರಗಳು ದೊರೆಯುತ್ತದೆ.