ಸೀರಿಯಲ್‌ನಲ್ಲಿ ಗೋಳಾಡೋದು ಇಲ್ಲಿ ಮಜಾ ಮಾಡೋದು; ಭಾವಿಪತ್ನಿ ಜೊತೆ ಶಮಂತ್ ಫೋಟೋ ವೈರಲ್
ಭಾವಿಪತ್ನಿ ಜೊತೆ ಸುತ್ತಾಡುತ್ತಾ ಜಾಲಿ ಮಾಡ್ತಿದ್ದಾರೆ ಶಮಂತ್. ತೆರೆ ಮೇಲೆ ಮಾತ್ರ ವೈಷ್ಣವ್ ಕಣ್ಣೀರಿಡುವುದು....

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿ ವೈಷ್ಣವ್ ಆಗಿ ಬ್ರೋ ಗೌಡ ಶಮಂತ್ ಮಿಂಚುತ್ತಿದ್ದಾರೆ. ದಿನದಿಂದ ದಿನ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಗಳಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಶಮಂತ್ ತಮ್ಮ ಬಹುಕಾಲದ ಗೆಳತಿ ಮೇಘನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಈ ವರ್ಷವೇ ಮದುವೆ ಆಗುತ್ತಿರುವುದಾಗಿ ಅನೌನ್ಸ್ ಕೂಡ ಮಾಡಿಬಿಟ್ಟರು.
ಶೂಟಿಂಗ್ ಬಿಡುವಿನ ಸಮಯದಲ್ಲಿ ಮದುವೆ ತಯಾರಿ ಮಾಡಿಕೊಳ್ಳುತ್ತಿರುವ ಶಮಂತ್ ಗೌಡ ತಮ್ಮ ಭಾವಿಪತ್ನಿ ಜೊತೆ ಕೂಡ ಸಮಯ ಕಳೆಯುತ್ತಿದ್ದಾರೆ.
'ಹುಡುಗರು ಮಾತನಾಡುತ್ತಾರೆ ಆದರೆ ರಿಯಲ್ Men ಸಾಭೀತು ಮಾಡ್ತಾರೆ' ಎಂದು ಶಮಂತ್ ಜೊತೆಗಿನ ಫೋಟೋ ಹಂಚಿಕೊಂಡು ಮೇಘನಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಬ್ಲಾಕ್ ಆಂಡ್ ಬ್ಲಾಕ್ ಔಟ್‌ಫಿಟ್‌ನಲ್ಲಿ ಶಮಂತ್ ಕಾಣಿಸಿಕೊಂಡರೆ ಬ್ಲಾಕ್ ಆಂಡ್ ಪರ್ಪಲ್ ಬಣ್ಣದ ಔಟ್‌ಫಿಟ್‌ನಲ್ಲಿ ಮೇಘನಾ ಮಿಂಚಿದ್ದಾರೆ. ಇದು ಯಾವ ಸ್ಥಳ ಎಂದು ರಿವೀಲ್ ಮಾಡಿಲ್ಲ.
ಏನಪ್ಪ ನೀನು ಸೀರಿಯಲ್ಲಿನಲ್ಲಿ ಲಕ್ಷ್ಮಿ ಅಮ್ಮ ಕೀರ್ತಿ ಅನ್ಕೊಂಡು ಗೋಳಾಡೋದು ಆದರೆ ರಿಯಲ್ ಲೈಫ್‌ನಲ್ಲಿ ನಿಮ್ಮ ಹುಡುಗಿ ಜೊತೆ ಖುಷಿಯಾಗಿ ಇದ್ಯಾ ಎಂದು ನೆಟ್ಟಿಗರು ಕಾಮೆಂಟ್‌ನಲ್ಲಿ ಕಾಲೆಳೆದಿದ್ದಾರೆ.
ಮೇಘನಾ ಮತ್ತು ಶಮಂತ್ ಹಲವು ವರ್ಷಗಳಿಂದ ಸ್ನೇಹಿತರು. ಸೋಷಿಯಲ್ ಮೀಡಿಯಾದಲ್ಲಿ ಒಟ್ಟಿಗೆ ರೀಲ್ಸ್ ಮಾಡುವುದು, ಪ್ರಮೋಷನ್ ಹಾಗೂ ಫೋಟೋಶೂಟ್‌ಗಳನ್ನು ಮಾಡುತ್ತಿದ್ದರು. ಲವ್ ಮಾಡ್ತಿದ್ದಾರೆ ಅನ್ನೋ ಸಣ್ಣ ಡೌಟ್ ಅಭಿಮಾನಿಗಳಿಗೆ ಇತ್ತು.