Dr Rajkumar in Georgia: ಜಾರ್ಜಿಯಾದಲ್ಲಿ ಸೇಮ್ ಟು ಸೇಮ್ ಡಾ ರಾಜ್‌ಕುಮಾರ್, ಜಗತ್ತೇ ಶಾಕ್!

ಜಾರ್ಜಿಯಾ ದೇಶದಲ್ಲಿ ಒಬ್ಬರು ಸೇಮ್ ಟು ಸೇಮ್ ಡಾ ರಾಜ್‌ಕುಮಾರ್ ತರಹವೇ ಇರುವ ವ್ಯಕ್ತಿ ಕಂಡಿದ್ದಾರೆ. ಈ ಪುರುಷ ಮಾಡೆಲ್ ಆಗಿದ್ದು, ಅವರ ಹಾವ-ಭಾವ, ಕಣ್ಣುಗಳು, ಹೈಟ್ ವೇಟ್ ಹಾಗೂ ನಗು ಎಲ್ಲವೂ ಸೇಮ್ ಡಾ ರಾಜ್‌ಕುಮಾರ್ ತರಹವೇ ಇದ್ಯಂತೆ. (Photo ಸ್ಟೋರಿ ಒಳಗಿದೆ, ನೋಡಿ..) ಅವರನ್ನು ನೋಡಿದ್ರೆ ನಮ್ಮ ಅಣ್ಣಾವ್ರನ್ನ...

Viral News in Social Media: Model in Georgia looks same as Dr Rajkumar

ಜಾರ್ಜಿಯಾ (Georgia) ದೇಶದಲ್ಲಿ ಒಬ್ಬರು ಸೇಮ್ ಟು ಸೇಮ್ ಡಾ ರಾಜ್‌ಕುಮಾರ್ (Dr Rajkumar) ತರಹವೇ ಇರುವ ವ್ಯಕ್ತಿ ಕಂಡಿದ್ದಾರೆ. ಅವರನ್ನು ನೋಡಿದ ಯಾರೋ ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಜಾರ್ಜಿಯಾದಲ್ಲಿರುವ ಈ ವ್ಯಕ್ತಿ ಅಲ್ಲಿ ರೂಪದರ್ಶೀ (Model) ಆಗಿದ್ದಾರಂತೆ, ಅವರೇನಾದ್ರೂ ಇಲ್ಲಿ ಕರ್ನಾಟಕ್ಕೆ ಬಂದ್ರೆ ಡಾ ರಾಜ್‌ಕುಮಾರ್ ಹಾಗೂ ಅವರ ಫ್ಯಾಮಿಲಿ ಅಭಿಮಾನಿಗಳಿಗೆ ಹಬ್ಬ ಎನ್ನಬಹುದು. 

ಜಾರ್ಜಿಯಾದ ಈ ಪುರುಷ ಮಾಡೆಲ್ ಆಗಿದ್ದು, ಅವರ ಹಾವ-ಭಾವ, ಕಣ್ಣುಗಳು, ಹೈಟ್ ವೇಟ್ ಹಾಗೂ ನಗು ಎಲ್ಲವೂ ಸೇಮ್ ಡಾ ರಾಜ್‌ಕುಮಾರ್ ತರಹವೇ ಇದ್ಯಂತೆ. ಅವರನ್ನು ನೋಡಿದ್ರೆ ನಮ್ಮ ಅಣ್ಣಾವ್ರನ್ನ ನೋಡಿದಂತೆಯೇ ಅಗುತ್ತೆ ಅಂತಾರೆ ಅವ್ರ ಫೋಟೋ ನೋಡಿದವ್ರು.. ಪ್ರಪಂಚದಲ್ಲಿ ಏಳು ಜನರು ಒಂದೇ ತರಹ ಇರ್ತಾರೆ ಅಂತಾರೆ. ಅಂದ್ರೆ, ಇನ್ನೂ ಐದು ಜನರಯ ಡಾ ರಾಜ್‌ಕುಮಾರ್ ತರಹವೇ ಇದಾರೆ ಅಂದಹಾಗಾಯ್ತು. ಆದರೂ, ಈ ಮಾಡೆಲ್ ಬಗ್ಗೆ ಸರ್ಚ್ ಮಾಡಿದರೆ ಎಂಥ ಮಾಹಿತಿಯೂ ಸಿಗುತ್ತಿಲ್ಲ. ಹಾಗಾಗಿ, ಇದು ಎಐ ಫೋಟೋ ಇರಬಹುದೆಂಬ ಡೌಟೂ  ಕನ್ನಡಿಗರದ್ದು.

ಅಣ್ಣಾವ್ರ ಮಗ್ಳು ಪೂರ್ಣಿಮಾ-ರಾಮ್‌ಕುಮಾರ್ 'ಲವ್ ಕಹಾನಿ' ಬಲು ರೋಚಕ, ಮಿಸ್ ಮಾಡ್ದೇ ನೋಡಿ..!

ಈ ಜಾರ್ಜಿಯಾದ ಮಾಡೆಲ್ ಬೆಂಗಳೂರಿಗೆ, ಅಂದ್ರೆ ನಮ್ಮ ಅಣ್ಣಾವ್ರ ನಾಡಿಗೆ ಬರಬಹುದಾ? ಸದ್ಯಕ್ಕಂತೂ ಈ ಪ್ರಶ್ನೆಗೆ ಉತ್ತರವಿಲ್ಲ. ಕೆಲವರು ಹೇಳೋ ಪ್ರಕಾರ, ಅವರಿಗೆ ಈ ಮ್ಯಾಟರ್ ಅರಿವಿಲ್ಲ. ಆದರೆ, ಎಲ್ಲ ಸಂಗತಿ ಹೇಳಿದರೆ ಬಂದರೂ ಬರಬಹುದು, ಯಾರಿಗೆ ಗೊತ್ತು ಅಲ್ವಾ? ಆದರೆ, ಅಷ್ಟೆಲ್ಲಾ ಆಗಿ ಅವರು ಒಮ್ಮೆ ಬರೋದಾದ್ರೂ ಸಾಕಷ್ಟು ಟೈಮ್ ಆಗಬಹುದು. ಅಷ್ಟಕ್ಕೂ ಅವರು ಖಾಲಿ ಕೂತಿಲ್ಲ, ಅವರು ಮಾಡೆಲ್ ವೃತ್ತಿಯಲ್ಲಿ ಇರುವವರು ಎನ್ನಲಾಗಿದೆ. 

Viral News in Social Media: Model in Georgia looks same as Dr Rajkumar

ಈಗ ನಮ್ಮೊಡನೆ ಡಾ ರಾಜ್‌ಕುಮಾರ್ ಇಲ್ಲ. ಆದರೆ, ಅವರ ಫ್ಯಾಮಿಲಿ ಎನ್ನುವ ಮಕ್ಕಳು ಹಾಗೂ ಮೊಮ್ಮಕ್ಕಳು ಇದ್ದಾರೆ. ಅವರೇನಾದ್ರೂ ಜಾರ್ಜಿಯಾದ ಈ ಮಾಡೆಲ್ ನೋಡಿದ್ರೆ ಖುಷಿ ಪಡಬಹುದು. ಅಣ್ಣಾವ್ರ ಅಭಿಮಾನಿಗಳೂ ಕೂಡ ತುಂಬಾ ಖುಷಿ ಪಡೋದ್ರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಆದರೆ, ಅಣ್ಣಾವ್ರ ತರಹವೇ ಇರೋ ಆ ಮಾಡೆಲ್ ಇಲ್ಲಿಗೆ ಬರಬೇಕಲ್ಲಾ? ಅಥವಾ ನೋಡಲು, ಮಾತನಾಡಲು ಸಿಗಬೇಕಲ್ಲ!

ಆ ಸಿನಿಮಾ ಬಳಿಕ ಅಣ್ಣಾವ್ರು ನಟನೆಯನ್ನು ನಿಲ್ಲಿಸಲು ಬಯಸಿದ್ದರು, ವಯಸ್ಸಾಯ್ತು ಅಂದಿದ್ರು!

ಇಂದು ಪ್ರಯತ್ನ ಪಟ್ಟರೆ ಯಾವುದೂ ಅಸಾಧ್ಯವಲ್ಲ.. ಜಾರ್ಜಿಯಾದ ಆ ಮಾಡೆಲ್‌ ಇಲ್ಲಿಗೆ ಬರಲು ಸೋಷಿಯಲ್ ಮೀಡಿಯಾವೊಂದೇ ಸಾಕು. ಆದರೆ, ಎಲ್ಲರೂ ನೆಟ್ ಮಾತನ್ನು, ಸುದ್ದಿಯನ್ನು ನಂಬಿ ಅದರ ಬೆನ್ನು ಹತ್ತಿ ಓಡಾಡೋದಿಲ್ಲ. ಅವರು ಎಂಥವರೋ ಯಾರಿಗೆ ಗೊತ್ತು? ಅವರೇನಾದ್ರೂ ಈ ಸುದ್ದಿ ತಿಳಿದರೆ, ಅಥವಾ ದೊಡ್ಮನೆಯವರಿಗೇನಾದ್ರೂ ಈ ಸಂಗತಿ ಮುಖ್ಯ ಎನ್ನಿಸಿ ಕಾರ್ಯರೂಪಕ್ಕೆ ಇಳಿದರೆ, ಅವರನ್ನು ಇಲ್ಲಿಗೆ ಕರೆಸುವುದು ತುಂಬಾ ಸುಲಭ!

ಆದರೆ, ಅವೆಲ್ಲಾ ಆಗಬಹುದೇ? ಆಗೋದಾದ್ರೂ ಯಾವಾಗ ಅಂತ ಸದ್ಯಂಕ್ಕಂತೂ ಗೊತ್ತಿಲ್ಲ. ಇನ್ನು ಕೆಲವರು ಹೇಳೋ ಪ್ರಕಾರ, ಅದು ಏಐ (AI) ಮ್ಯಾಜಿಕ್. ಅಂಥ ವ್ಯಕ್ತಿಯನ್ನು ಜಾರ್ಜಿಯಾದಲ್ಲಿ ಯಾರೂ ನೋಡಿಲ್ಲ. ಅಲ್ಲಿ ಡಾ ರಾಜ್‌ ತರಹ ಇರೋ ಮಾಡೆಲ್ ಇರೋದೈ ಡೌಟ್. ಒಮ್ಮೆ ನಿಜವಾಗಿ ಇದ್ದರೆ, ಅವರನ್ನು ಹುಡುಕಿ ಕರೆತಂದರೆ, ನಿಖರ ಸಾಕ್ಷಿ ಸಿಕ್ಕರೆ ನಿಜ ಅಂತ ನಂಬಬಹುದು. ಅಲ್ಲಯತನಕ, ಫೋಟೋ ನೋಡಿ ಖುಷಿ ಪಡೋದಕ್ಕೇನು ಕಾಸು ಕೊಡಬೇಕೇ..?

Nanjundi Kalyana Secret: ಮಾಲಾಶ್ರೀ-ರಾಘಣ್ಣ 'ನಂಜುಂಡಿ ಕಲ್ಯಾಣ'ದ ಈ ಸೀಕ್ರೆಟ್ ನಿಮ್ಗೆ ಗೊತ್ತಿಲ್ಲ!

Latest Videos
Follow Us:
Download App:
  • android
  • ios