ಅಣ್ಣಾವ್ರ ಮಗ್ಳು ಪೂರ್ಣಿಮಾ-ರಾಮ್‌ಕುಮಾರ್ 'ಲವ್ ಕಹಾನಿ' ಬಲು ರೋಚಕ, ಮಿಸ್ ಮಾಡ್ದೇ ನೋಡಿ..!

ನಟ ರಾಮ್‌ಕುಮಾರ್ ಅವರನ್ನು ಡಾ ರಾಜ್‌ಕುಮಾರ್ ಮಗಳು ಪೂರ್ಣಿಮಾರನ್ನು ಲವ್ ಮಾಡಿ ಮದುವೆ ಆಗಿದ್ದಾರೆ. ಆ ಬಳಿಕ ಪಾರ್ವತಮ್ಮನವರು (Parvathamma Rajkumar) ಮೂರು ವರ್ಷ ಮಾತು ಬಿಟ್ಟಿದ್ದರು. ಅವರಿಬ್ಬರ ಪ್ರೀತಿ ಶುರುವಾಗಿದ್ದು ಎಲ್ಲಿ? ಏನೇನೆಲ್ಲಾ ಆಯ್ತು..? ಇಲ್ಲಿದೆ ಸೀಕ್ರೆಟ್ ಕಹಾನಿ...

Dr Rajkumar daughter Poornima and actor Ramkumar Love Marriage issue

ಡಾ ರಾಜ್‌ಕುಮಾರ್ ( DR Rajkumar) ಫ್ಯಾಮಿಲಿಯಲ್ಲಿ ಲವ್ ಮ್ಯಾರೇಜ್ ಆಗಿರೋ ವಿಷ್ಯ ಇದು.. ನಟ ರಾಮ್‌ಕುಮಾರ್ ಅವರನ್ನು ಡಾ ರಾಜ್‌ಕುಮಾರ್ ಮಗಳು ಪೂರ್ಣಿಮಾರನ್ನು ಲವ್ ಮಾಡಿ ಮದುವೆ ಆಗಿದ್ದಾರೆ. ಆ ಬಳಿಕ ಪಾರ್ವತಮ್ಮನವರು (Parvathamma Rajkumar) ಮೂರು ವರ್ಷ ಮಾತು ಬಿಟ್ಟಿದ್ದರು. ಅವರಿಬ್ಬರ ಪ್ರೀತಿ ಶುರುವಾಗಿದ್ದು ಎಲ್ಲಿ? ಏನೇನೆಲ್ಲಾ ಆಯ್ತು..? ರಾಮ್‌ಕುಮಾರ್-ಪೂರ್ಣಿಮಾ ಲವ್ ಸ್ಟೋರಿ ಹುಟ್ಟಿದ್ದು ಎಲ್ಲಿ? ಬೆಳೆದಿದ್ದು ಎಲ್ಲಿ? ಈ ಪ್ರೇಮ ಕಹಾನಿ ಬಗ್ಗೆ ಆಸಕ್ತಿದಾಯಕ ಸಂಗತಿ ಇಲ್ಲಿದೆ ನೋಡಿ.. 

ಡಾ ರಾಜ್‌ಕುಮಾರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕ ಸಮಾರಂಭದಲ್ಲಿ ರಾಮ್‌ಕುಮಾರ್ ಹಾಗೂ ಪೂರ್ಣಿಮಾ ಅವರಿಬ್ಬರ ಭೇಟಿ ಆಗಿತ್ತು. ಆಗ ಪೂರ್ಣಿಮಾಗೆ 14ರ ವಯಸ್ಸು. ಆರಂಭದಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ನೋಡಿ ಸ್ಮೈಲ್ ಮಾಡ್ತಾ ಇದ್ರಂತೆ ಅಷ್ಟೇ. ಬಳಿಕ ಅಣ್ಣಾವ್ರ ಮನೆಯಲ್ಲಿ ಅಯ್ಯಪ್ಪನ ಪೂಜೆ ಇದ್ದಾಗ ಈ ರಾಮ್‌ಕುಮಾರ್ ಅವರು ಅವರ ಮನೆಗೆ ಬರ್ತಾ ಇದ್ರಂತೆ.. ಆಗೆಲ್ಲ ಲವ್ ಫೀಲಿಂಗ್ ಇರ್ಲಿಲ್ವಂತೆ. 

ಆ ಸಿನಿಮಾ ಬಳಿಕ ಅಣ್ಣಾವ್ರು ನಟನೆಯನ್ನು ನಿಲ್ಲಿಸಲು ಬಯಸಿದ್ದರು, ವಯಸ್ಸಾಯ್ತು ಅಂದಿದ್ರು!

ಆದ್ರೆ, ಯಾವಾಗ ರಾಘವೇಂದ್ರ ರಾಜ್‌ಕುಮಾರ್ ಮದ್ವೆಲಿ ಈ ಇಬ್ಬರೂ ಭೇಟಿ ಆದ್ರೋ ಆಗ ಅವರಿಬ್ಬರಲ್ಲಿ ಪ್ರೇಮ ಮೂಡಿದೆ. ಬಳಿಕ ಕದ್ದುಮುಚ್ಚಿ ಓಡಾಟ, ಪ್ರೇಮದ ಆಟ ಶುರುವಾಗಿದೆ. ಅದು ಮನೆಯವರಿಗೆ ಗೊತ್ತಾಗಿ ಸಹಜವಾಗಿಯೇ ವಿರೋಧ ವ್ಯಕ್ತವಾಗಿದೆ. ಆದರೆ, ಸಾಮಾನ್ಯವಾಗಿ ಯಾವತ್ತೂ ಪ್ರೇಮಿಗಳು ಪೋಷಕರ ವಿರೋಧವನ್ನು ಕಡೆಗಣಿಸುತ್ತಾರೆ. ಇಲ್ಲೂ ಅದೇ ಆಗಿದೆ. ಡಾ ರಾಜ್‌ಕುಮಾರ್ ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ರಾಮ್‌ಕುಮಾರ್-ಪೂರ್ಣಿಮಾ ಮದುವೆ ನಡೆದುಹೋಗಿದೆ. 

ಆ ಬಳಿಕ, ಹೆಚ್ಚಿನ ಎಲ್ಲಾ ಫ್ಯಾಮಿಗಳಲ್ಲಿ ಆಗುವಂತೆ ನಿಧಾನಕ್ಕೆ ದ್ವೇಷ, ಬೇಸರ ಮರೆಯಾಗಿದೆ. ಆದರೆ ಪಾರ್ವತಮ್ಮನವರು ಮೂರು ವರ್ಷಗಳ ಕಾಲ ಮಗಳು ಪೂರ್ಣಿಮಾ ಬಳಿ ಮಾತು ಬಿಟ್ಟಿದ್ದರಂತೆ. ಇನ್ನು ಅಳಿಯ ರಾಮ್‌ಕುಮಾರ್ ಜೊತೆ ಮಾತನ್ನಾಡುವುದಂತೂ ದೂರದ ಮಾತು ಬಿಡಿ.. ಒಟ್ಟಿನಲ್ಲಿ, ಡಾ ರಾಜ್‌ಕುಮಾರ್ ಕುಟುಂಬದಲ್ಲಿ ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ ಪೂರ್ಣಿಮಾ ಅವರದ್ದು ಲವ್ ಮ್ಯಾರೇಜ್. ಬಳಿಕ, ಮೊಮ್ಮಗ ಯುವ ರಾಜ್‌ಕುಮಾರ್ ಅವರದ್ದು ಕೂಡ ಪ್ರೇಮ ವಿವಾಹವೇ ಹೌದು. 

ವಿಷ್ಣುವರ್ಧನ್ 'ಮುತ್ತಿನಹಾರ' ಬಿಡುಗಡೆ ವೇಳೆ ಪತ್ರಿಕೆಗೆ ಪತ್ರ ಬರೆದಿದ್ದ ಡಾ ರಾಜ್‌ಕುಮಾರ್!

Latest Videos
Follow Us:
Download App:
  • android
  • ios