ಆ ಸಿನಿಮಾ ಬಳಿಕ ಅಣ್ಣಾವ್ರು ನಟನೆಯನ್ನು ನಿಲ್ಲಿಸಲು ಬಯಸಿದ್ದರು, ವಯಸ್ಸಾಯ್ತು ಅಂದಿದ್ರು!
ಹೀಗೆ 25 ವರ್ಷಗಳ ಕಾಲ ಸತತವಾಗಿ ನಟಿಸುತ್ತ ಬರೋಬ್ಬರಿ 200 ಸಿನಿಮಾಗಳ ಸಮೀಪ ಬಂದುಬಿಟ್ಟಿದ್ದರು. ಆದರೆ ಯಾವಾಗ ಅವರು ಆ ಸಿನಿಮಾವನ್ನು ಮಾಡಿದರೋ, ಅದಾದ ಬಳಿಕ ಅವರಿಗೆ ನಟನೆ ಸಾಕು ಎನ್ನಿಸಿಬಿಟ್ಟಿತ್ತು ಎನ್ನಲಾಗಿದೆ. ಈ ಸಂಗತಿಯನ್ನು ಸ್ವತಃ ಅವರ ಮಗಳು..

ಡಾ ರಾಜ್‌ಕುಮಾರ್ (Dr Rajkumar) ಅವರು 1953ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ನಾಯಕರಾಗಿ ಸಿನಿಮಾರಂಗದಲ್ಲಿ ನಟಿಸಲು ಪ್ರಾರಂಭಿಸಿದರು. ಆ ಸಿನಿಮಾ ಸಕ್ಸಸ್ ಕಾಣುವ ಮೂಲಕ ನಟ ಡಾ ರಾಜ್‌ಕುಮಾರ್ ಅವರು ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು. ಅದಕ್ಕೂ ಮೊದಲು ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಡಾ ರಾಜ್‌ಕುಮಾರ್ ಅದಾಗಲೇ ಪೌರಾಣಿಕ ಹಾಗೂ ಐತಿಹಾಸಿಕ ಪಾತ್ರಗಳನ್ನು ಮಾಡುವುದರಲ್ಲಿ ಪಳಗಿದ್ದರು.
ಹೀಗೆ 25 ವರ್ಷಗಳ ಕಾಲ ಸತತವಾಗಿ ನಟಿಸುತ್ತ ಬರೋಬ್ಬರಿ 200 ಸಿನಿಮಾಗಳ ಸಮೀಪ ಬಂದುಬಿಟ್ಟಿದ್ದರು. ಆದರೆ ಯಾವಾಗ ಅವರು 1986ರಲ್ಲಿ ತೆರೆಗೆ ಬಂದ ಆ ಸಿನಿಮಾದಲ್ಲಿ ನಟಿಸಿದರೋ, ಅದಾದ ಬಳಿಕ ಅವರಿಗೆ ನಟನೆ ಸಾಕು ಎನ್ನಿಸಿಬಿಟ್ಟಿತ್ತು ಎನ್ನಲಾಗಿದೆ. ಈ ಸಂಗತಿಯನ್ನು ಸ್ವತಃ ಅವರ ಮಗಳು ಪೂರ್ಣಿಮಾ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅದೇ ವೇಳೆ, ಅಣ್ಣಾವ್ರ ಮಗ ಶಿವರಾಜ್‌ಕುಮಾರ್ ಅವರು ಚಿತ್ರರಂಗಕ್ಕೆ ಬಂದಿದ್ದರು.
ವಿಷ್ಣುವರ್ಧನ್ 'ಮುತ್ತಿನಹಾರ' ಬಿಡುಗಡೆ ವೇಳೆ ಪತ್ರಿಕೆಗೆ ಪತ್ರ ಬರೆದಿದ್ದ ಡಾ ರಾಜ್‌ಕುಮಾರ್!
ಈ ಬಗ್ಗೆ ಡಾ ರಾಜ್‌ಕುಮಾರ್ 'ನಾನು ಇಪ್ಪತೈದು ವರ್ಷ ನಟಿಸಿದ್ದೇನೆ. ಈಗ ನನ್ನ ಮಗ ಚಿತ್ರರಂಗಕ್ಕೆ ಕಾಲಿಟ್ಟಿದ್ದಾನೆ. ಅಂದರೆ ನನಗೆ ವಯಸ್ಸಾಯ್ತು ಅಂತ ಅರ್ಥ. ಇನ್ಮೇಲೆ ನಾನು ಸಿನಿಮಾ ನಟನೆ ಮಾಡೋದನ್ನ ನಿಲ್ಲಿಸಲು ಇಷ್ಟಪಡುತ್ತೇನೆ..' ಎಂದಿದ್ದರಂತೆ. ಆದರೆ ವಿಧಿಯಾಟವೋ, ಅಭಿಮಾನಿಗಳ ಆಟವೋ ಗೊತ್ತಿಲ್ಲ ಡಾ ರಾಜ್‌ಕುಮಾರ್ ಅವರು ಅದಾದ ಬಳಿಕ ಕೂಡ ನಟಿಸಿದ್ದಾರೆ. ಕೊನೆಗೆ, ಎಸ್ ನಾರಾಯಣ್ ನಿರ್ದೇಶನದ ಚಿತ್ರದ ವರೆಗೂ ನಟಸಿ, ಕೊನೆಗೆ ನಿಧನರಾಗಿದ್ದಾರೆ ಡಾ ರಾಜ್‌ಕುಮಾರ್.
ಕನ್ನಡದಲ್ಲಿ ಅತಿ ಹೆಚ್ಚುಇ ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ ಕೀರ್ತಿ ಕೂಡ ಡಾ ರಾಜ್‌ಕುಮಾರ್ ಹೆಸರಿನಲ್ಲೇ ಇದೆ. ಅವರಿಗಿಂತ ಸ್ವಲ್ಪವೇ ಕಡಿಮೆ ಸಂಖ್ಯೆಯ ಚಿತ್ರಗಳಲ್ಲಿ ನಟ ವಿಷ್ಣುವರ್ಧನ್ ನಟಿಸಿದ್ದಾರೆ. ಅನುರಾಗ ಅರಳಿತು ಬಳಿಕ ಅದ್ಯಾಕೆ ಡಾ ರಾಜ್‌ಕುಮಾರ್ ಅವರಿಗೆ ನಟನೆ ಸಾಕು ಎನ್ನಿಸಿತ್ತು ಎಂಬುದನ್ನು ಆ ದೇವರೇ ಬಲ್ಲ ಎನ್ನಬೇಕು. ಆಗ ಡಾ ರಾಜ್‌ಕುಮಾರ್ ಇನ್ನೂ ಎನರ್ಜಟಿಕ್ ಆಗಿಯೇ ಇದ್ದರು. ಅವರಿಗೆ ಮಂಡಿ ನೋವೂ ಇರಲಿಲ್ಲ. ಆದರೂ ಕೂಡ ಆವರಿಗೆ ಸಾಕು ಎನ್ನಿಸಿಬಿಟ್ಟಿತ್ತು..! ಹಾಗಿದ್ದರೆ ಆ ಸಿನಿಮಾ ಯಾವುದು? ಅದು ಡಾ ರಾಜ್‌ಕುಮಾರ್, ಗೀತಾ ಹಾಗೂ ಮಾಧವಿ ನಟನೆಯ 'ಅನುರಾಗ ಅರಳಿತು'..!
ಡಾ ರಾಜ್ ಚಿತ್ರ ಪ್ರದರ್ಶನದ ವೇಳೆ ಥಿಯೇಟರ್‌ಗೆ ಬೆಂಕಿ ಹಚ್ಚಿದ್ಯಾರು? ಡಾನ್‌ಗೆ ಚಾಡಿ ಹೇಳಿದ್ದು ಯಾರು?