ಎಳ್ಳುನೀರು ಬಿಡೋದೇ ಒಳ್ಳೆಯದಾ..? ದರ್ಶನ್ ಡ್ರೀಮ್ ಪ್ರಾಜೆಕ್ಟ್ ಆಗೋದೇ ಕಷ್ಟ ಅನ್ನೋದ್ಯಾಕೆ...?

ನಟ ದರ್ಶನ್ ಸಿನಿಮಾ ಮಾಡುತ್ತಿದ್ದ ನಿರ್ಮಾಪಕ ನಿರ್ದೇಶಕರಿಗಂತೂ ದೊಡ್ಡ ಆಘಾತವೇ ಆಗಿಹೋಗಿದೆ. ದರ್ಶನ್ ಆಸೆ ಕನಸುಗಳೆಲ್ಲ ನುಚ್ಚುನೂರಾಗಿವೆ. ತಾನು ಸಿನಿಮಾಗಳ ಬಗ್ಗೆ ಕಂಡಿದ್ದ ಕನಸುಗಳೆಲ್ಲ ಈಗ ಕತ್ತಲ ಕೋಣೆ ಸೇರಿವೆ...

talk on actor darshan about his dream project movie veera madakari in future srb

ನಟ ದರ್ಶನ್ (Actor Darshan) ವಿಷ್ಯದಲ್ಲಿ ಇಂತಹದ್ದೊಂದು ಪ್ರಶ್ನೆ ಹಲವರ ಮನಸ್ಸಿನ್ನು ಕಾಡತೊಡಗಿದೆ. ಕಾರಣ, ಕನ್ನಡದ ಸ್ಟಾರ್ ನಟ ದರ್ಶನ್ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಜೈಲಿನಲ್ಲಿ ಇರೋದು. ನಟಿ ಹಾಗು ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಕಾರಣಕ್ಕೆ ರೇಣುಕಾಸ್ವಾಮಿ ಬೆಂಗಳೂರಿನಲ್ಲಿ ಕೊಲೆಯಾಗಿದ್ದಾನೆ. ಆ ಕೊಲೆ ಕೇಸ್ ಆರೋಪದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಒಟ್ಟೂ ಹದಿನೇಳು ಜನರು ಆರೋಪಿಗಳಾಗಿದ್ದಾರೆ. 

ಇದು ಈಗ ಇಡೀ ಪ್ರಪಂಚಕ್ಕೇ ಗೊತ್ತಿರುವ ವಿಷಯ ಎನ್ನಬಹುದು. ಆದರೆ, ನಟ ದರ್ಶನ್ ಚಿತ್ರರಂಗಕ್ಕೆ ಬಂದ ಕಾಲದಿಂದಲೂ ಒಂದು ಸಿನಿಮಾ ಮಾಡಬೇಕು, ಆ ಪಾತ್ರದಲ್ಲಿ ನಟಿಸಬೇಕು ಎಂದು ಕನಸು ಕಾಣುತ್ತಲೇ ಇದ್ದರು. ಆದರೆ, ಆ ಬಗ್ಗೆ ಸಾಕಷ್ಟು ಸಮಸ್ಯೆಗಳಾಗಿ ಚಿತ್ರವನ್ನು ಮಾಡಲು ಇಲ್ಲಿಯವರೆಗೂ ಸಾಧ್ಯವಾಗಿರಲಿಲ್ಲ. ಆದರೆ,  ಕಳೆದ ತಿಂಗಳು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದೆ ಆಗಿದ್ದು, ಕನ್ನಡ ಚಿತ್ರರಂಗವೇ ಬೆಚ್ಚಿಬಿದ್ದಿತ್ತು. 

ಆ ಬಗ್ಗೆ ಮಾತಾಡೋಕೆ ಇದು ಟೈಂ ಅಲ್ಲ, ಆದ್ರೂ ಅವ್ರು ಮನೆಲ್ಲಿ ಊಟ ಮಾಡಿದ್ರ ಬಗ್ಗೆ ಹೇಳ್ತೀನಿ: ಕಿರಣ್ ರಾಜ್

ದರ್ಶನ್ ಸಿನಿಮಾ ಮಾಡುತ್ತಿದ್ದ ನಿರ್ಮಾಪಕ ನಿರ್ದೇಶಕರಿಗಂತೂ ದೊಡ್ಡ ಆಘಾತವೇ ಆಗಿ ಹೋಗಿತ್ತು.  ಇದರ ಜೊತೆಗೆ ದರ್ಶನ್ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಎ2 ಆರೋಪಿ ಎನ್ನಿಸಿ ಜೈಲಿಗೆ ಹೋದ ಮೇಲಂತೂ ನಿರ್ಮಾಪಕರಿಗೆ ಮುಂದೇನು ಅನ್ನೋ ಪರಿಸ್ಥಿತಿ ಅಂತ ತೋಚುತ್ತಿಲ್ಲ. ಇನ್ನು ದರ್ಶನ್ ಗೆ ಯಾವಾಗ ಬೇಲ್ ಸಿಗುತ್ತೋ.. ಅಂತ ಕಾದು ನೋಡೋ ಪರಿಸ್ಥಿತಿ. ದರ್ಶನ್ ಕನಸಾಗಿದ್ದ 'ವೀರ ಮದಕರಿ' ನೆರವೇರುತ್ತಾ? 

ಇತ್ತ ದರ್ಶನ್ ಆಸೆ ಕನಸುಗಳೆಲ್ಲ ನುಚ್ಚುನೂರಾಗಿವೆ. ತಾನು ಸಿನಿಮಾಗಳ ಬಗ್ಗೆ ಕಂಡಿದ್ದ ಕನಸುಗಳೆಲ್ಲ ಈಗ ಕತ್ತಲ ಕೋಣೆ ಸೇರಿವೆ.
'ವೀರ ಮದಕರಿ' ದರ್ಶನ್ ಬಹಳ ಹಿಂದೆನೇ ನಟಿಸಬೇಕಿದ್ದ ಸಿನಿಮಾ. ರಾಕ್ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಾಣಕ್ಕೂ ಮುಂದಾಗಿದ್ದರು. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಒಂದಿಷ್ಟು ಈ ಸಿನಿಮಾದ ಶೂಟಿಂಗ್ ಕೂಡ ಮಾಡಲಾಗಿತ್ತು. ಆದರೂ, ಮಧ್ಯದಲ್ಲಿಯೇ ನಿಲ್ಲಿಸಬೇಕಾಗಿ ಬಂದಿತ್ತು.

ಈ ಫೇಸ್‌ಲೀ ಏನೋ ಇದೆ, ಕಣ್ಣಂಚಲಿ ಸವಿ ಮಿಂಚಿದೆ; ತಮಿಳಿನಲ್ಲೂ ಕೊಡಗಿನ ಬೆಡಗಿ ರನ್ನಿಂಗ್!

ಸುದೀಪ್ ದರ್ಶನ್ ಇಬ್ಬರ ನಡುವೆ ಈ ಸಿನಿಮಾ ಮಾಡೋ ಪೈಪೋಟಿ ಎದ್ದಿತ್ತು. ಕೊನೆಗೆ ಸುದೀಪ್ ಕಾಂಪ್ರಮೈಸ್ ಆಗಿ ಅವರೆ ಮಾಡಲಿ ಅಂದಿದ್ರು.'ವೀರ ಮದಕರಿ' ಸಿನಿಮಾ ಮಾಡಬೇಕು ಅನ್ನೋದು ದರ್ಶನ್ ಅವರ ಇತ್ತೀಚೆಗಿನ ಆಸೆಯಲ್ಲ. ದರ್ಶನ್ ಚಿತ್ರರಂಗಕ್ಕೆ ಆರಂಭದ ದಿನಗಳಲ್ಲಿಯೇ 'ವೀರ ಮದಕರಿ' ಸಿನಿಮಾ ಮಾಡಬೇಕು ಅಂತ ಆಸೆ ಪಟ್ಟಿದ್ದರು. ಆದರೆ, ಈ ಸಿನಿಮಾ ಮಾಡುವುದಕ್ಕೆ ಪ್ರಯತ್ನ ಪಟ್ಟಾಗಲೆಲ್ಲ ದರ್ಶನ್ಗೆ ನಿರಾಸೆ ಆಗಿದ್ದೇ ಹೆಚ್ಚು. ಮುಂದೆ ಇಂತಹದ್ದೊಂದು ಐತಿಹಾಸಿಕ ಮಾಡುವ ಎಲ್ಲಾ ಅವಕಾಶವೂ ಇತ್ತು. ಆದ್ರೀಗ ಅವರೇ ತಮ್ಮ ಕೈಯಾರೇ ಕಳೆದುಕೊಂಡಂತಾಗಿದೆ. 

ಏಕಂ ವೆಬ್ ಸಿರೀಸ್‌ ಸ್ಟ್ರೀಮ್‌ಗೆ ದಿನಗಣನೆ, ಡೇಟ್ ಘೋಷಿಸಿದ ರಕ್ಷಿತ್‌ ಶೆಟ್ಟಿ ಪರಂವಾ ಸ್ಟುಡಿಯೋ..!

ಇನ್ನು ವೀರ ಮದಕರಿ ನಾಯಕ..ಚಿತ್ರದುರ್ಗದ ಹುಲಿ ಮದಕರಿ ನಾಯಕ ಚರಿತ್ರೆಯನ್ನು ಕೇಳವುದೇ ಕುತೂಹಲದ ಕತೆ.ಇಂತಹ ಐತಿಹಾಸಿಕ ಪುರುಷ ಸಾಹಸವನ್ನು ದರ್ಶನ್ ತೆರೆಮೇಲೆ ತರುವುದಕ್ಕೆ ಮುಂದಾಗಿದ್ದರು. ಆದ್ರೀಗ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಮುಂದೆ ಇಂತಹ ಸಿನಿಮಾವನ್ನು ಕೈಗೆತ್ತಿಕೊಳ್ಳಲು ಸಾಧ್ಯವೇ? 

ಒಂದು ವೇಳೆ ಐತಿಹಾಸಿಕ ಮಹಾಪುರುಷರ ಚರಿತ್ರೆಯಲ್ಲಿ ನಟಿಸಿದರೆ, ಜನರು ಒಪ್ಪುತ್ತಾರೆಯೇ ಅನ್ನೋ ಪ್ರಶ್ನೆ ಚಿತ್ರರಂಗದಲ್ಲಿ ಎದುರಾಗಿದೆ. ದರ್ಶನ್ ಮಾಡಲಿ ಅನ್ನುವವರು ಎಷ್ಟಿದ್ದಾರೊ ಬೇಡ ಎನ್ನುವವರು ಅಷ್ಟೆ ಇದ್ದಾರೆ. ಒಂದು ಕೊಲೆ.. ಒಂದೇ ಒಂದು ಕೊಲೆ.. ದರ್ಶನ್ ಕನಸುಗಳನ್ನೆಲ್ಲಾ ನುಚ್ಚುನೂಡು ನೂರು ಮಾಡಿದ್ದಂತೂ ಸತ್ಯ..ಆದರೆ ಮುಂದೇನು ಎನ್ನುವುದನ್ನು ಕಾಲವೇ ನಿರ್ಧರಿಸಲಿದೆ. 

ನಾವೂ ಅಪ್ಪ-ಅಮ್ಮಂಗೆ ಹುಟ್ಟಿದ ಮಕ್ಕಳೇ, ತಂದೆ-ತಾಯಿಗೆ ಮಾತಾಡ್ತಾ ಇದ್ರೂ ನಮ್ ಇಮೇಜು..: ನಟ ಯಶ್

Latest Videos
Follow Us:
Download App:
  • android
  • ios