Asianet Suvarna News Asianet Suvarna News

ಕಾಲ್ ಮಾಡಿದ್ರು, ಅವ್ರ ಮನೆಗೆ ಹೋಗಿದ್ದೆ, ಅವ್ರ ಮನೆಲ್ಲಿ ಊಟ ಮಾಡಿದ್ರ ಬಗ್ಗೆ ಹೇಳ್ತೀನಿ: ಕಿರಣ್ ರಾಜ್

ಅವ್ರ ಮನೆಲ್ಲಿ ನನ್ನ ಊಟ ಮುಗಿದ್ಮೇಲೆ ತಟ್ಟೆ ಎತ್ತೋಕೂ ಬಿಡ್ಲಿಲ್ಲ. ರಿಲೇಶನ್‌ಶಿಪ್ ಹಾಳಾಗೋಗುತ್ತೆ ಅನ್ನೋ ಕಾರಣಕ್ಕೆ ಅಂದ್ರು.. ಆ ತರ ಅವ್ರು ನನ್ನ ನೋಡಿದ್ದು.. ನಂಗೆ..

kannadathi fame actor kiran raj talks about darshan and renukaswamy murder case srb
Author
First Published Jul 6, 2024, 8:00 PM IST

ಕನ್ನಡದ ನಟ ಕಿರಣ್ ರಾಜ್ ಅವರು ಯಾರಿಗೆ ಗೊತ್ತಿಲ್ಲ? ಕನ್ನಡತಿ ಸೀರಿಯಲ್‌ ಮೂಲಕ ಮನೆಮಾತಾದ ಕಿರಣ್ ರಾಜ್ (Kiran Raj) ಅವರನ್ನು ಇನ್ಮುಂದೆ ಸಿನಿಮಾಗಳಲ್ಲಿ ಕೂಡ ನೋಡಲು ಸ್ಯಾಂಡಲ್‌ವುಡ್ ಸಿನಿಪ್ರೇಮಿಗಳು ಕಾಯುತ್ತಿದ್ದಾರೆ. ಭವಿಷ್ಯದ ಸ್ಟಾರ್ ಎಂದೇ ಕರೆಯಲಾಗುವ ನಟ ಕಿರಣ್ ರಾಜ್ ಅವರು ಸದ್ಯದ ಮ್ಯಾಟರ್ ಬಗ್ಗೆ ಮಾತನಾಡಿದ್ದಾರೆ. ಅಂದರೆ, ನಟ ದರ್ಶನ್ ಅವರು ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿ ಇರುವ ಬಗ್ಗೆ ಅವರ ಅಭಿಪ್ರಾಯ ಕೇಳಲಾಗಿ, ನಮ್ಮ ಏಷ್ಯಾನೆಟ್ ಸುವರ್ಣ ವೆಬ್‌ ಜೊತೆ  ತಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡಿದ್ದಾರೆ. 

'ಕನ್ನಡ ಚಿತ್ರರಂಗ ಒಂದು ಕುಟುಂಬ ಇದ್ದಹಾಗೆ ಅಂತೀರಾ.. ಈಗ ನೀವೂ ಒಬ್ಬ ಕುಟುಂಬದ ಸದಸ್ಯರಾಗಿ ದರ್ಶನ್ ಕೇಸ್‌ ಬಗ್ಗೆ ಏನ್ ಹೇಳ್ತೀರಾ' ಎಂಬ ಪ್ರಶ್ನೆಗೆ ಕನ್ನಡತಿ (Kannadathi) ಖ್ಯಾತಿಯ ನಟ ಕಿರಣ್ ರಾಜ್ ಹೀಗೆ ಉತ್ತರಿಸಿದ್ದಾರೆ. 'ಇದು ಮಾತಾಡೋಕೆ ಸರಿಯಾದ ಜಾಗ ಮತ್ತು ಸಮಯ ಅಲ್ಲ' ಎಂದಿದ್ದಾರೆ. 'ನೀವು ನ್ಯೂಸ್ ಚಾನೆಲ್‌ ಕೊಡೋ ಸುದ್ದಿನೆಲ್ಲಾ ಫಾಲೋ ಮಾಡ್ತಾನೇ ಇರ್ತಿರಾ.. ಅದ್ರಲ್ಲಿ ಎಷ್ಟು ಸುಳ್ಳಿದೆ, ಎಷ್ಟು ನಿಜ ಇದೆ ಅಂತ ಗೊತ್ತಿಲ್ಲ.. ಅದ್ರಲ್ಲಿ ಎಷ್ಟು ಸುಳ್ಳು ಎಷ್ಟು ನಿಜ ಅನ್ನೋದು ನ್ಯೂಸ್‌ ಅವ್ರಿಗೂ ಆಕ್ಚ್ಯುವಲಿ ಗೊತ್ತಿರಲ್ಲ.. 

ಛೆ.. ಮೈ ಮುಟ್ಟಿ ರೊಮಾನ್ಸ್ ಮಾಡಲಾರೆ, ನಟಿ ಅಮೂಲ್ಯಾಳನ್ನು ನಾನು ಎತ್ತಿ ಆಡಿಸಿದ್ದೇನೆ : ನಟ ದರ್ಶನ್!

ಮ್ಯಾಟರ್ ಕೋರ್ಟ್‌ನಲ್ಲಿದೆ. ಹೀಗಾಗಿ ಈಗ ನಾನು ಏನೇ ಹೇಳಿದ್ರೂ ಅದು ಸಮಯಕ್ಕೆ, ಸಂದರ್ಭಕ್ಕೆ ಸರಿ ಹೋಗಲ್ಲ.. ಕೋರ್ಟ್‌ ತೀರ್ಪು ಬಂದಾದ್ಮೇಲೆ ನಮ್ ಅಭಿಪ್ರಾಯ, ನಮ್ ಅನಿಸಿಕೆ, ನಮ್ ಮಾತು ಎಲ್ಲಾನೂ ಮ್ಯಾಟರ್ ಆಗೋದು.. ಸೋ, ಜಡ್ಜ್‌ಮೆಂಟ್ ಬರೋ ಬರೋವರೆಗೂ ಕಾಯೋಣ ಅಂತ.. ಇನ್ನು 'ದರ್ಶನ್ ಸರ್ ಜೊತೆಗೆ ಹಾಗೂ ತೂಗುದೀಪ ಶ್ರೀನಿವಾಸ್ ಅವರ ಕುಟುಂಬ ಅಂದ್ರೆ ಮೀನಮ್ಮ ಅವ್ರ ಜೊತೆಗೆ ನಿಮ್ಮ ಬಾಂಧವ್ಯ ಹೇಗಿದೆ..' ಎಂಬ ಪ್ರಶ್ನೆಗೆ ಕೂಡ ನಟ ಕಿರಣ್ ರಾಜ್ ಉತ್ತರಿಸಿದ್ದಾರೆ.  

ಆರ್ಟಿಸ್ಟ್ ಆಗಿರೋ ನನ್ನ ಅವ್ರು ಮನೆಗೆ ಕರೆದು, ತುಂಬಾ ಚೆನ್ನಾಗಿ ಟ್ರೀಟ್ ಮಾಡಿದ್ರು.. ಅದ್ನ ನೋಡಿ ನಂಗೆ ನಾನು ಬ್ಲೆಸ್ಡ್‌ ಅಂತ ಅನ್ನಿಸಿದೆ.. ನಾನು ಧಾರಾವಾಹಿ ಮಾಡ್ತಾ ಇರೋವಾಗ ಅವ್ರು  ಮನೆಗೆ ಕರೆದಿದ್ರು.. ಅವ್ರು ನನ್ನ ವೆಲ್‌ಕಮ್ ಮಾಡಿರೋ ರೀತಿ, ಅವ್ರು ಟ್ರೀಟ್ ಮಾಡಿರೋ ರೀತಿ ಎಲ್ಲಾನೂ ನಂಗೆ ಒಂಥರಾ ಅವಾರ್ಡ್ ಇದ್ದಹಾಗೆ.. ಒಂದ್ ಆರ್ಟಿಸ್ಟ್, ಅಂದ್ರೆ ನಮ್ಮೊಳಗಿನ ಕಲೆ, ಕಲಾವಿದನ್ನ ನೋಡಿ ನಮಗೆ ಅಷ್ಟೊಂದು ಬೆಲೆ ಕೊಟ್ಟಿರೋದನ್ನ ನಾನು ಫಸ್ಟ್ ಟೈಮ್ ನೋಡಿದ್ದು..

ಅದಿಲ್ಲ ಅಂದ್ರೆ ಮನುಷ್ಯ ಸತ್ತೋಗ್ಬಿಡ್ಬೇಕು, ಅದೂ ಒಂದ್ ಲೈಫಾ; ಯಶ್ ಪ್ರಶ್ನೆಗೆ ಉತ್ರ ಕೊಟ್ರಾ ಅನುಶ್ರೀ..? 

ಮೀನಮ್ಮ ಅವ್ರು, ತಮ್ಮ ಮನೆಲ್ಲಿ ನನ್ನ ಊಟ ಮುಗಿದ್ಮೇಲೆ ತಟ್ಟೆ ಎತ್ತೋಕೂ ಬಿಡ್ಲಿಲ್ಲ. ರಿಲೇಶನ್‌ಶಿಪ್ ಹಾಳಾಗೋಗುತ್ತೆ ಅನ್ನೋ ಕಾರಣಕ್ಕೆ ಅಂದ್ರು.. ಆ ತರ ಅವ್ರು ನನ್ನ ನೋಡಿದ್ದು.. ನಂಗೆ ಆವತ್ತು ಸ್ಪೆಷಲ್ ಡೇ ಅಂತಾನೇ ಆಯ್ತು.. ಆ ತರ ಅವ್ರು ನನ್ನ ನೋಡಿದ್ದು.. ಅವ್ರು ನನ್ನ ಜಾತಿ, ಊರು ಯಾವ್ದನ್ನೂ ಕೇಳಿಲ್ಲ, ನಾನೊಬ್ಬ ಕಲಾವಿದ, ಕನ್ನಡತಿ ಪಾತ್ರದಲ್ಲಿ ನನ್ನ ನಟನೆ ಇಷ್ಟ ಆಯ್ತು ಅಂತ ಕಾಲ್ ಮಾಡಿ ಹೇಳಿ, ಮನೆಗೆ ಕರೆದು ಊಟ ಹಾಕಿದ್ರು.. ನಾನು ಅದ್ನ ಯಾವತ್ತೂ ಮರೆಯಲ್ಲ..' ಎಂದಿದ್ದಾರೆ ಕನ್ನಡತಿ ಖ್ಯಾತಿ ಹಾಗೂ ಚಂದನವನದ ಸ್ಟಾರ್ ಆಗುವ ಹಾದಿಯಲ್ಲಿರುವ ನಟ ಕಿರಣ್ ರಾಜ್.

ಇದೇನು ಈ ತರ ಪೋಸ್ಟ್, ಖುಷಿಯಾಗಿ ಇರೋದಕ್ಕಿಂತ ಹೆಚ್ಚು ಸುಖ ಇನ್ನೆಲ್ಲಿದೆ ಅಂದಿದ್ಯಾಕೆ ಕಿಚ್ಚ ಸುದೀಪ್..!

Latest Videos
Follow Us:
Download App:
  • android
  • ios