Asianet Suvarna News Asianet Suvarna News

ಏಕಂ ವೆಬ್ ಸಿರೀಸ್‌ ಸ್ಟ್ರೀಮ್‌ಗೆ ದಿನಗಣನೆ, ಡೇಟ್ ಘೋಷಿಸಿದ ರಕ್ಷಿತ್‌ ಶೆಟ್ಟಿ ಪರಂವಾ ಸ್ಟುಡಿಯೋ..!

2021ರಲ್ಲೇ ಒಟಿಟಿ ಮೂಲಕ ತೆರೆಗೆ ಬರಬೇಕಾಗಿದ್ದ ಈ ಏಕಂ ವೆಬ್ ಸಿರೀಸ್, ಲೇಟ್ ಆಗಿಯಾದರೂ ಕೂಡ ಲೇಟೆಸ್ಟ್ ಆಗಿ ಮೂಡಿ ಬರುತ್ತಿದೆ ಎನ್ನಲಾಗಿದೆ. ಸದ್ಯ ಬಿಡುಗಡೆ ದಿನಾಂಕವನ್ನು ಸೋಷಿಯಲ್ ಮೀಡಿಯಾ..

Rakshit Shetty Paramvah Studios to release Ekam web series in ott on 13 July 2024 srb
Author
First Published Jul 6, 2024, 3:24 PM IST

ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ (Rakshit Shetty) ಅವರ ಪರಂವಾ ಸ್ಟುಡಿಯೋಸ್ ಮೂಲಕ 'ಏಕಂ' (Ekam) ವೆಬ್ ಸಿರೀಸ್ (Web Series) ಲಾಂಚ್ ಆಗಲಿದೆ. ಈ ತಿಂಗಳು, ಅಂದರೆ 13 ಜುಲೈ 2024ರಂದು 'www.ekamtheseries.com' ನಲ್ಲಿ ರೂ. 149/- ಕ್ಕೆ ರಿಲೀಸ್ ಆಗಲಿದೆ ಎಂಬ ಮಾಹಿತಿಯನ್ನು ಸ್ವತಃ ರಕ್ಷಿತ್ ಶೆಟ್ಟಿ ಹಂಚಿಕೊಂಡಿದ್ದಾರೆ. ಜರ್ನಿಮ್ಯಾನ್ ಫಿಲಂಸ್‌ ನಿರ್ಮಾಣದಲ್ಲಿ ಪರಂವಾ ಸ್ಟುಡಿಯೋಸ್ ಮೂಲಕ ಸಂದೀಪ್ ಪಿಎಸ್ ಹಾಗು ಸುಮಂತ್ ಭಟ್ ನಿರ್ದೇಶನದಲ್ಲಿ ಈ ವೆಬ್ ಸರಣಿ ಮೂಡಿ ಬಂದಿದೆ. ಇದಕ್ಕೆ ಅರಾನ್ ಮ್ಯಾಕ್ ಅಜಿತ್ ಅವರು (Executive Producer) ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. 

ಮೂರ್ನಾಲ್ಕು ವರ್ಷಗಳ ಹಿಂದೆಯೇ ಈ ವೆಬ್ ಸರಣಿ ಶೂಟ್ ಆಗಿ ರಲೀಸ್‌ ಮಾಡಲು ಕಾದು ಕುಳಿತಿದ್ದರು. ಆದರೆ, ಕನ್ನಡದ ಈ ವೆಬ್ ಸರಣಿಯನ್ನು ಇರುವ ಯಾವುದೇ ಒಟಿಟಿ ಪ್ಲಾಟ್‌ಫಾರಂನವರು ರಿಲೀಸ್ ಮಾಡಲು ಒಪ್ಪಿರಲಿಲ್ಲ. ಇದೀಗ, ಈ ಸರಣಿಯನ್ನು ನಟ-ನಿರ್ದೇಶಕ ರಕ್ಷಿತ್ ಶೆಟ್ಟಿಯವರು ತಮ್ಮದೇ ಪರಂವಾ ಸ್ಟುಡಿಯೋಸ್ ಮೂಲಕ ಬಿಡುಗಡೆ ಮಾಡಲು ಮನಸ್ಸು ಮಾಡಿದ್ದಾರೆ. ಅದ್ದರಿಂದ ಈಗ, ಅಂದರೆ ಜುಲೈ 13ರಂದು ಬಿಡುಗಡೆಗೊಂಡು 'ಏಕಂ' ವೆಬ್ ಸಿರೀಸ್ ಪ್ರೇಕ್ಷಕರ ಕಣ್ಣನ್ನು ತಲುಪಲಿದೆ. 

ಇದೇನು ಈ ತರ ಪೋಸ್ಟ್, ಖುಷಿಯಾಗಿ ಇರೋದಕ್ಕಿಂತ ಹೆಚ್ಚು ಸುಖ ಇನ್ನೆಲ್ಲಿದೆ ಅಂದಿದ್ಯಾಕೆ ಕಿಚ್ಚ ಸುದೀಪ್..!

ಏಕಂ ವೆಬ್‌ ಸಿರೀಸ್‌ನಲ್ಲಿ ಖ್ಯಾತನಾಮ ನಟನಟಿಯರು ನಟಿಸಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಹಿರಿಯ ನಟ ಪ್ರಕಾಶ್ ರಾಜ್ (ಪ್ರಕಾಶ್ ರೈ), ರಾಜ್ ಬಿ ಶೆಟ್ಟಿ, ಮಾನಸಿ ಸುಧೀರ್, ಶೈನ್ ಶೆಟ್ಟಿ, ಪ್ರಕಾಶ್ ತಮಿನಾಡು, ಶನಿಲ್ ಗುರು ಮುಂತಾದವರು ಪ್ರಮುಖ ಪಾತ್ರ ಮಾಡಿದ್ದಾರೆ. ಈ ವೆಬ್ ಸಿರೀಸ್‌ನಲ್ಲಿ 7 ಕಥೆಗಳಿವೆ ಎನ್ನಲಾಗಿದ್ದು ಅದನ್ನು 'even stories, one epic series'; ಎಂದೇ ಬಣ್ಣಿಸಲಾಗಿದೆ. ಕರಾವಳಿ ಕೋಸ್ಟಲ್ ಬೆಲ್ಟ್‌ ನ ಕೇಶವ್ ಮಾಮ, ದೇವದತ್ತನ್, ಮಂಜುಳಾ ಮತ್ತು ಖುಷಿ ಇವರುಗಳ ಕಥೆಯೇ ಈ ಏಕಂ ಸ್ಟೋರಿ ಎನ್ನಲಾಗಿದೆ. 

ತಂದೆ-ತಾಯಿ ಬಗ್ಗೆ ಮಾತಾಡ್ತಾ ಇದ್ರೂ ನಮ್ ಇಮೇಜೂ ಅಂತ ಕೂತ್ಕೊಳ್ಳೋಕೆ ಆಗಲ್ಲ: ನಟ ಯಶ್

ಒಟ್ಟಿನಲ್ಲಿ, 2021ರಲ್ಲೇ ಒಟಿಟಿ ಮೂಲಕ ತೆರೆಗೆ ಬರಬೇಕಾಗಿದ್ದ ಈ ಏಕಂ ವೆಬ್ ಸಿರೀಸ್, ಲೇಟ್ ಆಗಿಯಾದರೂ ಕೂಡ ಲೇಟೆಸ್ಟ್ ಆಗಿ ಮೂಡಿ ಬರುತ್ತಿದೆ ಎನ್ನಲಾಗಿದೆ. ಸದ್ಯ ಬಿಡುಗಡೆ ದಿನಾಂಕವನ್ನು ಸೋಷಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಲಾಗಿದ್ದು, ಇದೀಗ ಬಹಳಷ್ಟು ಜನರು, ಅಂದರೆ ವೆಬ್ ಸಿರೀಸ್ ಪ್ರಿಯರು ಜುಲೈ 13ನೇ ಡೇಟ್‌ ಬರುವುದನ್ನೇ ಕಾಯುವಂತಾಗಿದೆ. ರಕ್ಷಿತ್ ಶೆಟ್ಟಿ ಸ್ಡುಡಿಯೋ ಮೂಲಕ ಏಕಂ ಬಿಡುಗಡೆ ಆಗಲಿದ್ದರೂ, ಅದರಲ್ಲಿ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿಲ್ಲ, ಬದಲಿಗೆ ತಮ್ಮ ಮೂಲಕ ರಿಲೀಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ. 

ನಿಮ್ ಮಾತು ಕೇಳಿ ಕೇಳಿ ಸಾಕಾಗೋಗಿದೆ, ನಮ್ Bossಗೆ ಈ ತರ ಚಿತ್ರಹಿಂಸೆ ಕೊಡಬೇಡಿ, ಜೈ ಡಿ ಬಾಸ್..!

 

 

Latest Videos
Follow Us:
Download App:
  • android
  • ios