Asianet Suvarna News Asianet Suvarna News

ಇದು Tagaru Palya ಪ್ರಮೋಷನಲ್ ಸಾಂಗ್: ಡಾಲಿ ಧನಂಜಯ್‌ ಲಿರಿಕ್ಸ್... ಪ್ರೇಮ್ ವಾಯ್ಸ್ ಚಿಂದಿ!

ಟಗರು ಪಲ್ಯ ಕನ್ನಡದ ಅಪ್ಪಟ ಹಳ್ಳಿ ಸೊಗಡು ಸೊಬಗಿನ ಸಿನಿಮಾ. ಅಷ್ಟೆ ಆಗಿದ್ದಿದ್ರೆ ಪರವಾಗಿಲ್ಲ. ಟಗರು ಪಲ್ಯಾ ಸಂಬಂಧ ಬೆಸೆಯೋ ಬೆಳಸೋ ಸಿನಿಮಾ. ಹೀಗಾಗಿ ಈ ಸಂಬಂಧದ ವ್ಯಾಲ್ಯೂ ತಿಳಿಸೋ ಹಾಡಿಗೆ ಪ್ರೇಮ್ ಕಂಠದಾನ ಮಾಡಿದ್ದಾರೆ.
 

tagaru palya movie promotional latest song release gvd
Author
First Published Oct 25, 2023, 8:43 PM IST

ಜೋಗಿ ಪ್ರೇಮ್.. ಡೈರೆಕ್ಟರ್, ಹೀರೋ, ಪ್ರೊಡ್ಯೂಸರ್, ಲಿರಿಕ್ಸಿಸ್ಟ್ ಅಷ್ಟೆ ಅಲ್ಲ. ಅದ್ಭುತ ಸಿಂಗರ್ ಕೂಡ ಹೌದು. ಪ್ರೇಮ್ ಕಂಠದಲ್ಲಿ ಸಾಂಗ್ ಬಂದ್ರೆ ಅದು ಬ್ಲ್ಯಾಕ್ ಬಸ್ಟರ್ ಹಿಟ್ ಆಗೋದು ಪಕ್ಕಾ. ಇದಕ್ಕೆ ಪ್ರೇಮ್ ಹಾಡಿರೋ ಹತ್ತಾರು ಹಾಡುಗಳೇ ಸಾಕ್ಷಿ. ಎಕ್ಸ್‌ಕ್ಯೂಸ್‌ ಮಿ ಸಿನಿಮಾದಿಂದ ಶುರುವಾದ ಪ್ರೇಮ್ ಗಾನ ಬಜಾನ ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ, ಏಕ್ ಲವ್ ಯಾ, ಡಿಕೆ. ಪ್ರೇಮ್ ಅಡ್ಡ ಹೀಗೆ ತನ್ನ ಡೈರೆಕ್ಷನ್ ಜತೆ ಬೇರೆ ಸಿನಿಮಾಗಳ ಹಾಡುಗಳಿಗೂ ಧ್ವನಿಯಾಗಿದ್ದಾರೆ. ಪ್ರೇಮ್ ವಾಯ್ಸ್ನಲ್ಲಿ ಬಂದ ಆ ಹಾಡುಗಳೆಲ್ಲಾ ಹಿಟ್ ಲೀಸ್ಟ್ ಸೇರಿವೆ. ಪ್ರೇಮ್ ವಾಯ್ಸ್ ಕನ್ನಡ ಸಂಗೀತ ಲೋಕದ ಬ್ರ್ಯಾಂಡ್ ಆಗಿದೆ. 

ಈಗ ಒನ್ಸ್ ಅಗೈನ್ ಪ್ರೇಮ್ ಕಂಠದಲ್ಲಿ ಮತ್ತೊಂದು ಅದ್ಭುತ ಹಾಡು ಬಂದಿದೆ. ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯದ ಪ್ರಮೋಷನಲ್ ಹಾಡಿಗೆ ಪ್ರೇಮ್ ಧ್ವನಿ ಆಗಿದ್ದಾರೆ. ಟಗರು ಪಲ್ಯ ಕನ್ನಡದ ಅಪ್ಪಟ ಹಳ್ಳಿ ಸೊಗಡು ಸೊಬಗಿನ ಸಿನಿಮಾ. ಅಷ್ಟೆ ಆಗಿದ್ದಿದ್ರೆ ಪರವಾಗಿಲ್ಲ. ಟಗರು ಪಲ್ಯಾ ಸಂಬಂಧ ಬೆಸೆಯೋ ಬೆಳಸೋ ಸಿನಿಮಾ. ಹೀಗಾಗಿ ಈ ಸಂಬಂಧದ ವ್ಯಾಲ್ಯೂ ತಿಳಿಸೋ ಹಾಡಿಗೆ ಪ್ರೇಮ್ ಕಂಠದಾನ ಮಾಡಿದ್ದಾರೆ. ಟಗರು ಪಲ್ಯ ನಿರ್ಮಾಪಕ ಡಾಲಿ ಧನಂಜಯ್ ಬರೆದಿರೋ ಈ ಹಾಡಿಗೆ ವಾಸುಕಿ ವೈಭವ್ ಟ್ಯೂನ್ ಸೆಟ್ ಮಾಡಿದ್ದಾರೆ. ಈ ಹಾಡಿನ ವಿಶೇಷತೆ ಅಂದ್ರೆ ಹಿರಿ ಕಿರಿಯರು ಅನ್ನೋ ಬೇದ ಇಲ್ಲದೇ ತೆರೆ ಹಿಂದೆ ತೆರೆ ಮೇಲೆ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞನರು ನಟಿಸಿದ್ದಾರೆ. 

ಉಮೇಶ್‌ ಕೃಪ ಆಕ್ಷನ್‌ ಕಟ್‌ ಹೇಳಿರೋ 'ಟಗರು ಪಲ್ಯ' ಇದೇ ಶುಕ್ರವಾರ ತೆರೆ ಮೇಲೆ ಮೂಡಿ ಬರಲಿದೆ. ಹೀಗಾಗಿ ಟಗರು ಪಲ್ಯ ಪ್ರಮೋಷನ್ ಗಾಗಿ ಟ್ರಕ್ ಹತ್ತಿ ಹೊರಟಿದ್ದಾರೆ ಡಾಲಿ. ಕ್ಯಾಂಟರ್ ಓಡಿಸಿರೋ ಡಾಲಿ ಊರೂರು ಸುತ್ತಿದ್ದಾರೆ. ಆ ವೀಡಿಯೋ ವೈರಲ್ ಆಗಿದೆ. ಟಗರು ಪಲ್ಯ ಟ್ರೈಲರ್ ಪ್ರೆಸ್‌ ಮೀಟ್‌ನಲ್ಲಿ ಮಾತನಾಡಿದ ಅಮೃತಾ ಪ್ರೇಮ್ "ದರ್ಶನ್ ಸರ್ ನೋಡಿ ನನಗೆ ಭಯ ಆಗ್ತಿದೆ, ದರ್ಶನ್ ಸರ್ ನನ್ನ ಸಿನಿಮಾ ಟ್ರೈಲರ್ ಲಾಂಚ್ ಮಾಡ್ತಿದ್ದಾರೆ. ನಾನು ಇದನ್ನ ಜೀವನದಲ್ಲಿ ಎಂದೂ ಮರೆಯೋಲ್ಲ. ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಗೆ ಫ್ಯಾನ್ ಆಗಿದ್ದೆ. ಅದೇ ನಿರ್ಮಾಣ ಸಂಸ್ಥೆಯಿಂದ ಅವಕಾಶ ಬಂದಿದ್ದು ನನ್ನ ಅದೃಷ್ಟ. ಈ ಸಿನಿಮಾದಲ್ಲಿ ನಟಿಸಿದ ನನಗೆ ಒಳ್ಳೆ ಪಾತ್ರದ ಜೊತೆ ಒಳ್ಳೆ ಹಾಡು ಕೂಡ ಸಿಕ್ತು. ನನ್ನನ್ನ ಇವತ್ತು ಎಲ್ಲರೂ ಸೂರ್ಯ ಕಾಂತಿ ಅಂತ ಕರೀತಿದ್ದಾರೆ" ಎಂದು ಹೇಳಿ ಖುಷಿಯಿಂದ ಮಾತು ಮುಗಿಸಿದರು. 

ನಟನಾಗಬೇಕೆಂದು ಬಂದೆ, ಹೀರೋ ಆಗಿದ್ದು ಬೋನಸ್‌: ನಾಗಭೂಷಣ್‌

ನಟ ನೀನಾಸಂ ಸತೀಶ್ "ನಾನು ಟಗರು ಪಲ್ಯ ಸಿನಿಮಾ ನೋಡಿದ್ದೇನೆ. ನಮ್ಮ ಊರು, ಭಾಷೆ, ಸಂಪ್ರದಾಯ, ಸೊಗಡು ಎಲ್ಲವನ್ನೂ ಸೇರಿ ಟಗರು ಪಲ್ಯಾ ಮಾಡಿದ್ದಾರೆ. ನಟ ರಾಕ್ಷಸ ರಂಗಾಯಣ ರಘು, ನಟಿ ರಾಕ್ಷಸಿ ತಾರಾ ಮೇಡಂ" ಎಂದಿದ್ದಾರೆ. "ಈ ಸಮಯದಲ್ಲಿ ಮಾತನಾಡಿದ ವಾಸುಕಿ ವೈಭವ್ "ದರ್ಶನ್ ಸರ್ ಮನೆಯಲ್ಲಿ ಅನ್ನದ ಋಣ ನನಗಿದೆ. ದರ್ಶನ್ ಸರ್ ಆಡೋ ಮಾತುಗಳು ನಮ್ಮನ್ನ ಇನ್ಸ್ ಪೈರ್ ಮಾಡುತ್ತೆ.. ದರ್ಶನ್ ಸರ್ ಸಿನಿಮಾಗಳನ್ನ ಕಾಲೇಜಿಗೆ ಬಂಕ್ ಹಾಕಿ ಹಾಸ್ಟೆಲ್ ಬೇಲಿ ಹಾರಿಕೊಂಡು ಹೋಗಿ ನೋಡುತ್ತಿದ್ವಿ. ಈಗ ಅವರೇ ನಮ್ಮೆದುರು ಇದ್ದಾರೆ, ರೋಮಾಂಚನ ಆಗ್ತಿದೆ" ಎಂದಿದ್ದಾರೆ. 

Follow Us:
Download App:
  • android
  • ios