Asianet Suvarna News Asianet Suvarna News

Garuda Release: ಜನವರಿ 21ರಂದು ಶ್ರೀನಗರ ಕಿಟ್ಟಿ-ಐಂದ್ರಿತಾ ರೇ ಚಿತ್ರ ರಿಲೀಸ್

ಸ್ಯಾಂಡಲ್‌ವುಡ್‌ನ ಶ್ರೀನಗರ ಕಿಟ್ಟಿ ಹಾಗೂ ಸಿದ್ಧಾರ್ಥ್ ಮಹೇಶ್ ನಟಿಸಿರುವ 'ಗರುಡ' ಚಿತ್ರದ ಫಸ್ಟ್‌ಲುಕ್, ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಇದೀಗ ಚಿತ್ರವು ತೆರೆಗೆ ಬರಲು ಸಜ್ಜಾಗಿದೆ. 

Starrer Srinagar Kitty Garuda movie to hit theatre on january 2022 gvd
Author
Bangalore, First Published Dec 11, 2021, 8:58 PM IST

ಸ್ಯಾಂಡಲ್‌ವುಡ್‌ನ ಶ್ರೀನಗರ ಕಿಟ್ಟಿ (Srinagar Kitty) ಹಾಗೂ ಸಿದ್ಧಾರ್ಥ್ ಮಹೇಶ್ (Siddharth Mahesh) ನಟಿಸಿರುವ 'ಗರುಡ' (Garuda) ಚಿತ್ರದ ಫಸ್ಟ್‌ಲುಕ್, ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಇದೀಗ ಚಿತ್ರವು ತೆರೆಗೆ ಬರಲು ಸಜ್ಜಾಗಿದೆ. ಹೌದು! ಆರೆಂಜ್ ಪಿಕ್ಸಲ್ಸ್ ಲಾಂಛನದಲ್ಲಿ, ರಾಜರೆಡ್ಡಿ , ಕಿಶೋರ್, ಎ.ಪ್ರಸಾದ್‍ರೆಡ್ಡಿ ಅವರುಗಳು ಅವರು ನಿರ್ಮಿಸುತ್ತಿರುವ 'ಗರುಡ' ಚಿತ್ರವು ಮುಂದಿನ ವರ್ಷ 2022ರ ಜನವರಿ 21ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಈ ಹಿಂದೆ 'ಸಿಪಾಯಿ' (Sipayi) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸಿದ್ಧಾರ್ಥ್ ಮಹೇಶ್ ಅವರ ಎರಡನೇ ಚಿತ್ರ ಇದಾಗಿದೆ.

ಕುಟುಂಬದಲ್ಲಿ ಒಂದು ಘಟನೆ ನಡೆಯುತ್ತದೆ. ಅದು ನಾಯಕನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಕೌಟುಂಬಿಕವಾಗಿ ಶುರುವಾಗುವ ಚಿತ್ರ ಎಲ್ಲೆಲ್ಲಿ ಸಾಗುತ್ತದೆ ಅನ್ನೋದು ಗರುಡ ಚಿತ್ರದ ಪ್ರಧಾನ ಅಂಶ. ಸಿದ್ಧಾಥ್ ಮಹೇಶ್ ಈ ಚಿತ್ರದಲ್ಲಿ ಆ ಕುಟುಂಬದ ಹುಡುಗನಾಗಿ ನಟಿಸಿದ್ದಾರೆ. ನಟ ಶ್ರೀನಗರ ಕಿಟ್ಟಿ ಈ ವರೆಗೆ ಬೇರೆ ಬೇರೆ ರೀತಿಯ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಆದರೆ, ಗರುಡ ಅವರ ವೃತ್ತಿ ಬದುಕಿಗೆ ಕಮರ್ಷಿಯಲ್ ಕಲರ್ ನೀಡಿ ನನ್ನ ಕೆರಿಯರ್‌ಗೆ ಬೇರೆ ದಾರಿ ನೀಡುತ್ತದೆ ಎನ್ನುವ ನಂಬಿಕೆ ಸ್ವತಃ ಕಿಟ್ಟಿ ಅವರದ್ದು. ಮುಖ್ಯವಾಗಿ ಕಿಟ್ಟಿ ಮತ್ತು ರಂಗಾಯಣ ರಘು (Rangayana Raghu) ಕಾಂಬಿನೇಷನ್ ಸಾಕಷ್ಟು ಸಿನಿಮಾಗಳಲ್ಲಿ ವರ್ಕೌಟ್ ಆಗಿದೆ. ಈ ಚಿತ್ರದಲ್ಲೂ ಅದು ಮುಂದುವರೆಯಲಿದೆ. ಈ ಚಿತ್ರದಲ್ಲಿ ಕಿಟ್ಟಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ.

ಧಾರಾವಾಹಿ ನಿರ್ಮಾಣಕ್ಕಿಳಿದ ಶ್ರೀನಗರ ಕಿಟ್ಟಿ; ನಾಯಕಿಯ ಹುಡುಕಾಟದಲ್ಲಿ ಸೀರಿಯಲ್‌ ತಂಡ!

ನಟಿ ಆಶಿಕಾ ರಂಗನಾಥ್ (Ashika Ranganath) ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದು, ಐಂದ್ರಿತಾ ರೇ (Aindrita Ray) ಕೂಡಾ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ನಟ ಆದಿ ಲೋಕೇಶ್ (Adi Lokesh) ಖಳನಟನಾಗಿ ಕಾಳಿಂಗನ ಪಾತ್ರದಲ್ಲಿ ಕ್ರೂರವಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಬಿಡುಗಡೆಯಾದ ಮೇಲೆ 'ಹೆಣ್ಮಕ್ಕಳು ನನ್ನನ್ನು ನೋಡಿದರೆ ಚಪ್ಪಲಿ ತಗೊಂಡು ಹೊಡೀತಾರೆ' ಹಾಗೂ ನನಗೆ ಚಿತ್ರದಲ್ಲಿ ಅದ್ಭುತ ಫೈಟ್‌ಗಳಿವೆ. ಫೈಟ್ ಮಾಸ್ಟರ್ ರವಿವರ್ಮ ಅವರು ನಮ್ಮಿಂದ ಸಾಕಷ್ಟು ಕೆಲಸವನ್ನು ತೆಗೆಸಿಕೊಂಡಿದ್ದಾರೆ ಎಂದು ಈ ಹಿಂದೆ ಹೇಳಿದ್ದಾರೆ. ಗಾಯಕ ರಘು ದೀಕ್ಷಿತ್ (Ragh Dixit) ಈ ಚಿತ್ರದಲ್ಲಿ ಸಂಗೀತ ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿರೋದು ವಿಶೇಷ. ಕಳೆದ ಹನ್ನೆರಡು ವರ್ಷಗಳಿಂದ ಸ್ವತಂತ್ರ ನೃತ್ಯ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿರುವ ಧನ ಕುಮಾರ್ (Dhana Kumar) 'ಗರುಡ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಶ್ರೀನಗರ ಕಿಟ್ಟಿಯ ಗೌಳಿ ಚಿತ್ರಕ್ಕೆ ಅದ್ದೂರಿ ಮುಹೂರ್ತ

ಇನ್ನು 'ಗರುಡ' ಚಿತ್ರದಲ್ಲಿ ನನಗೆ ಡಿಫರೆಂಟ್ ಇಮೇಜ್ ಇರುವ ಪಾತ್ರ ಸಿಕ್ಕಿದ್ದು, ನನ್ನ ವೃತ್ತಿ ಬದುಕಿಗೆ ಕಮರ್ಷಿಯಲ್ ಟಚ್ ನೀಡಿರುವುದರೊಂದಿಗೆ ನನ್ನ ಮುಂದಿನ ಕೆರಿಯರ್‌ಗೆ ದಾರಿ ಮಾಡಿಕೊಡಲಾಗಿದೆ ಎಂದು ಶ್ರೀನಗರ ಕಿಟ್ಟಿ ಹೇಳಿದ್ದಾರೆ.  ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ಸಂಯೋಜನೆ, ಜೈ ಆನಂದ್ ಕ್ಯಾಮೆರಾ ಕೈಚಳಕ, ದೀಪು ಎಸ್ ಕುಮಾರ್ ಸಂಕಲನ, ರವಿವರ್ಮ ( Ravivarma) ಸಾಹಸ ನಿರ್ದೇಶನದವಿದೆ. ಸಿದ್ಧಾರ್ಥ್ ಮಹೇಶ್, ಶ್ರೀನಗರ ಕಿಟ್ಟಿ, ಐಂದ್ರಿತಾ ರೇ, ಆಶಿಕಾ ರಂಗನಾಥ್, ಕಾಮ್ನಾ ಜೇಠಲ್ಮಾನಿ, ರಂಗಾಯಣ ರಘು, ಆದಿ ಲೋಕೇಶ್, ರಾಜೇಶ್ ನಟರಂಗ, ರವಿಶಂಕರ್ ಗೌಡ, ರಮೇಶ್ ಪಂಡಿತ್, ಸುನೇತ್ರ ಪಂಡಿತ್, ಮೈಕೋ ನಾಗರಾಜ್, ಪೆಟ್ರೋಲ್ ಪ್ರಸನ್ನ, ಉಗ್ರಂ ಮಂಜು,ಸುಜಯ್ ಶಾಸ್ತ್ರಿ ರಘುದೀಕ್ಷಿತ್ ಸೇರಿದಂತೆ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.

Follow Us:
Download App:
  • android
  • ios