Asianet Suvarna News Asianet Suvarna News

ಶ್ರೀನಗರ ಕಿಟ್ಟಿಯ ಗೌಳಿ ಚಿತ್ರಕ್ಕೆ ಅದ್ದೂರಿ ಮುಹೂರ್ತ

ಬೆಂಗಳೂರಿನಲ್ಲಿ ಗೌಳಿ ಚಿತ್ರದ ಅದ್ಧೂರಿ ಮುಹೂರ್ತ. ಶ್ರೀನಗರ ಕಿಟ್ಟಿಗೆ ಜೋಡಿಯಾಗಿ  ಪಾವನಾ.
 

Srinagar Kitty Pavana signs film project gowli vcs
Author
Bangalore, First Published Sep 18, 2021, 9:49 AM IST
  • Facebook
  • Twitter
  • Whatsapp

ಶ್ರೀನಗರ ಕಿಟ್ಟಿನಟನೆಯ ‘ಗೌಳಿ’ ಚಿತ್ರಕ್ಕೆ ಇತ್ತೀಚೆಗೆ ಅದ್ದೂರಿಯಾಗಿ ಮುಹೂರ್ತ ನಡೆಯಿತು. ರಘು ಸಿಂಗಮ್‌ ನಿರ್ಮಿಸುತ್ತಿರುವ ಈ ಚಿತ್ರವನ್ನು ಸೂರ ನಿರ್ದೇಶನ ಮಾಡುತ್ತಿದ್ದಾರೆ. ಆ್ಯಕ್ಷನ್‌, ಥ್ರಿಲ್ಲರ್‌ ಚಿತ್ರ ಇದಾಗಿದ್ದು, ಮೊದಲ ಬಾರಿಗೆ ಶ್ರೀನಗರ ಕಿಟ್ಟಿತುಂಬಾ ರಗ್‌್ಡ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ನಾನು ಇಲ್ಲಿಯವರೆಗೂ ಮಾಡಿರುವ ಚಿತ್ರಗಳದ್ದೇ ಒಂದು ಹಂತವಾದರೆ, ಗೌಳಿ ಚಿತ್ರದ್ದೇ ಮತ್ತೊಂದು ಹಂತ. ಈ ಚಿತ್ರದಲ್ಲಿನ ನನ್ನ ಪಾತ್ರದ ಲುಕ್ಕು, ಕತೆಯಲ್ಲಿ ಸಾಕಷ್ಟುಹೊತನದಿಂದ ಕೂಡಿದೆ. ಪೂರ್ತಿ ಗಡ್ಡ ಬಿಟ್ಟು ಹೀಗೆ ನಾನು ಕಾಣಿಸಿಕೊಂಡಿರಲಿಲ್ಲ. ಇದೇ ಮೊದಲು. ನಿರ್ದೇಶಕ ಸೂರ ನನ್ನನ್ನು ಹೊಸ ರೀತಿಯಲ್ಲಿ ಈ ಚಿತ್ರದ ಮೂಲಕ ತೋರಿಸುತ್ತಿದ್ದಾರೆ’ ಎನ್ನುತ್ತಾರೆ ನಟ ಶ್ರೀನಗರ ಕಿಟ್ಟಿ.

ಆಬ್ರಕಡಾಬ್ರದ ಏಕೈಕ ಸ್ಟಾರ್‌ ಅನಂತನಾಗ್‌: ಶಿಶಿರ್‌ ರಾಜಮೋಹನ್‌

ಪಾವನಾ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಯಶ್‌ ಶೆಟ್ಟಿಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು ಚಿತ್ರದ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರಜ್ವಲ್‌ ಗೌಡ ಕ್ಯಾಮೆರಾ ಹಿಡಿಯುತ್ತಿದ್ದು, ಶಶಾಂಕ್‌ ಶೇಷಗಿರಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸೆ.21ರಿಂದ ಯಲ್ಲಾಪುರ, ಶಿರಸಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

 

Follow Us:
Download App:
  • android
  • ios