ಕನ್ನಡದ ಈ ಸಿನಿಮಾಗಳು ಸೂಪರ್ ಹಿಟ್ ಆಗಿರುವುದಕ್ಕೆ ಕಾರಣವೇ ಆ ಸಿನಿಮಾಗಳಲ್ಲಿ ಪ್ರೀತಿ ಸೋತಿರುವುದರಿಂದಾಗಿ. ಅಂತಹ ಸಿನಿಮಾಗಳು ಯಾವುವು ಅನ್ನೋದು ನೋಡೋಣ.
sandalwood Mar 16 2026
Author: Pavna Das Image Credits:social media
Kannada
ಸಂಜು ವೆಡ್ಸ್ ಗೀತಾ
ಸಂಜು ವೆಡ್ಸ್ ಗೀತಾ ಸಿನಿಮಾ ಕೂಡ ಅದಕ್ಕೆ ಹೊರತಲ್ಲ ಈ ಚಿತ್ರದಲ್ಲೂ ಸಂಜು ಮತ್ತು ಗೀತಾ ಇಬ್ಬರೂ ಕೂಡ ಕೊನೆಯಲ್ಲಿ ಸಾವನ್ನಪ್ಪುವ ಇಮೋಷನಲ್ ಎಂಡಿಂಗ್ ಸಿನಿಮಾ ಇದು.
Image credits: social media
Kannada
ದುನಿಯಾ
ದುನಿಯಾ ಚಿತ್ರದಲ್ಲೂ ಸಹ ನಾಯಕ -ನಾಯಕಿ ಇಬ್ಬರೂ ಕೂಡ ಕೊನೆಯಲ್ಲಿ ಸಾವನ್ನಪ್ಪುತ್ತಾರೆ. ಟ್ರಾಜಿಡಿ ಸಿನಿಮಾ ಇದಾಗಿದ್ರೂ ಸಿನಿಮಾ ಸೂಪರ್ ಹಿಟ್.
Image credits: social media
Kannada
ಅಂಬಾರಿ
ಚಪ್ಪಲಿ ಮಾರುವವನ ಜೊತೆ ಓಡಿ ಹೋಗುವ ಶ್ರೀಮಂತ ಹುಡುಗಿ, ಆಕೆಯ ಆಸೆಯಂತೆ ತಾಜ್ ಮಹಲ್ ಮುಂದೆ ಅವಳನ್ನು ಕರೆದುಕೊಂಡು ಹೋಗಿ, ಕೊನೆಗೆ ಅಲ್ಲೇ ಸಾವನ್ನಪ್ಪುತ್ತಾನೆ.
Image credits: social media
Kannada
ಚೆಲುವಿನ ಚಿತ್ತಾರ
ಒಬ್ಬ ಮೆಕ್ಯಾನಿಕ್’ಗಾಗಿ ಮನಸೋಲುವ ಶಾಲೆ ಹುಡುಗಿ, ಅವನ ಜೊತೆ ಓಡಿ ಹೋಗುತ್ತಾಳೆ. ಮತ್ತೆ ಜೀವನದಲ್ಲಿ ಆಗೋದೆಲ್ಲಾ ದುರಂತ. ಆದರೆ ಸಿನಿಮಾ ಮಾತ್ರ ಸೂಪರ್ ಹಿಟ್.
Image credits: social media
Kannada
ಮುಂಗಾರು ಮಳೆ
ಬಂಧನ ಸಿನಿಮಾದಲ್ಲಿ ಮುಂಗಾರುಮಳೆಯಲ್ಲೂ, ನಾಯಕ ಇನ್ನೇನು ಮದುವೆಯಾಗಲಿರುವ ನಾಯಕಿಯನ್ನು ಲವ್ ಮಾಡಿ, ಕೊನೆಗೆ ಪ್ರೀತಿಯನ್ನೇ ತ್ಯಾಗ ಮಾಡುವ ಸಿನಿಮಾ ಇದಾಗಿತ್ತು.
Image credits: social media
Kannada
ಬಂಧನ
ವಿಷ್ಣುವರ್ಧನ್, ಸುಹಾಸಿನಿ ಮತ್ತು ಜೈ ಜಗದೀಶ್ ಅಭಿನಯದ ಬಂಧನ ಸಿನಿಮಾದಲ್ಲಿ, ವಿಷ್ಣುವರ್ಧನ್ ಸುಹಾಸಿನಿಯನ್ನು ಲವ್ ಮಾಡಿದ್ರು, ಆ ಪ್ರೀತಿ ಉಳಿಯಲ್ಲ. ಆದರೆ ಸಿನಿಮಾ ಮಾತ್ರ ಸೂಪರ್ ಹಿಟ್.
Image credits: social media
Kannada
ಅಮೃತಧಾರೆ
ಅಮೃತಧಾರೆ ಸಿನಿಮಾದಲ್ಲಿ ಸ್ಟೋರಿ ಪೂರ್ತಿಯಾಗಿ ಚೆನ್ನಾಗಿದೆ, ಆದರೆ ಇದರಲ್ಲಿ ಲವ್ ಫೆಲ್ಯೂಯರ್ ಕೂಡ ಇಲ್ಲ. ಆದರೆ ನಾಯಕಿ ಕ್ಯಾನ್ಸರ್ ಸಮಸ್ಯೆಯಿಂದ ಬಳಲಿ ಕೊನೆಯಲ್ಲಿ ಸಾಯುವಂತಾಗುತ್ತದೆ.
Image credits: social media
Kannada
ಹುಚ್ಚ
ಕಿಚ್ಚ ಸುದೀಪ್ ಮತ್ತು ರೇಖಾ ಅಭಿನಯದ ಹುಚ್ಚು ಸಿನಿಮಾದಲ್ಲಿ ನಾಯಕಿ ಸಾವನ್ನಪ್ಪುತ್ತಾಳೆ, ನಾಯಕ ಹುಚ್ಚನಾಗುತ್ತಾನೆ. ಇದು ತಮಿಳು ಸಿನಿಮಾದ ರಿಮೇಕ್ ಆದ್ರೂ ಸೂಪರ್ ಹಿಟ್ ಆಗಿತ್ತು.