Asianet Suvarna News Asianet Suvarna News

ಧಾರಾವಾಹಿ ನಿರ್ಮಾಣಕ್ಕಿಳಿದ ಶ್ರೀನಗರ ಕಿಟ್ಟಿ; ನಾಯಕಿಯ ಹುಡುಕಾಟದಲ್ಲಿ ಸೀರಿಯಲ್‌ ತಂಡ!

ನಟಿಯಾಗಬೇಕು ಎಂದು ಕನಸು ಕಾಣುತ್ತಿರುವವರಿಗೆ ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳಗೆರೆ ಸೂಪರ್ ಅವಕಾಶ ನೀಡುತ್ತಿದ್ದಾರೆ. ಹೆಚ್ಚಿನ ಮಾಹಿತಿ ಕೇಳಗಿದೆ ನೋಡಿ....
 

Kannada Srinagar Kitty and Bhavana Belagere hunt for new talents for a daily soap  vcs
Author
Bangalore, First Published Oct 21, 2021, 10:26 AM IST
  • Facebook
  • Twitter
  • Whatsapp

ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಲವರ್ ಬಾಯ್ ಆದ ಶ್ರೀನಗರ ಕಿಟ್ಟಿ (Srinagar Kitty) ಹಾಗೂ ಪತ್ರಕರ್ತ ರವಿ ಬೆಳೆಗೆರೆ (Ravi Belagere) ಅವರ ಮುದ್ದಿನ ಕಿರಿಯ ಪುತ್ರಿ ಭಾವನಾ ಬೆಳಗೆರೆ (Bhavana Belagere) ಜಂಟಿಯಾಗಿ ಧಾರಾವಾಹಿಯೊಂದನ್ನು ನಿರ್ಮಿಸುತ್ತಿದ್ದಾರೆ. 

ಧಾರಾವಾಹಿಯ (Daily Soap) ಹೆಸರು ಇನ್ನಷ್ಟೇ ಹೊರಬರಬೇಕಿದ್ದು, ಸದ್ಯ ನಾಯಕಿಯ ತಲಾಶೆಯಲ್ಲಿದ್ದಾರೆ. ಮಹಾನದಿ ಕ್ರಿಯೇಷನ್ಸ್‌ (Mahanadi Creactions) ಮೂಲಕ ನಿರ್ಮಾಣ ಆಗುತ್ತಿರುವ ಧಾರಾವಾಹಿ ಇದಾಗಿದ್ದು, 21 ರಿಂದ 24 ವರ್ಷದೊಳಗಿನ ಪ್ರತಿಭಾವಂತ ನಟಿಯರು ವಿಡಿಯೋ ಆಡಿಷನ್‌ (Video Audition) ಕೊಡಬಹುದಾಗಿದೆ. ಈ ಹೊಸ ಧಾರಾವಾಹಿಗೆ ಆಯ್ಕೆ ಆಗಲು ಗೆಳತಿಯೊಂದಿಗೆ ಪ್ರೇಮದ (Love) ಬಗ್ಗೆ ತನಗಿರುವ ಅಭಿಪ್ರಾಯವನ್ನು ಸಹಜವಾದ ಭಾವನೆಯಲ್ಲಿ ತಿಳಿಸುವ ಸಂಭಾಷಣೆಯನ್ನು ವಿಡಿಯೋ ಮಾಡಿ ಧಾರಾವಾಹಿ ತಂಡಕ್ಕೆ ಕಳುಹಿಸಬೇಕು.

Kannada Srinagar Kitty and Bhavana Belagere hunt for new talents for a daily soap  vcs

ಸಂಭಾಷಣೆ (Dialogue): ನಾನು ಪ್ರೀತಿಸ್ತೀನಿ ಅಂತ ಇವತ್ತಿನ ಈ ಕ್ಷಣದ ತನಕ ಅವ್ನಿಗೆ ಗೊತ್ತಿಲ್ಲ ಕಣೇ. ಅದು ಗೊತ್ತು ಮಾಡೋ ಸಂಗತಿ ಅಲ್ಲ. ಈ ಹುಡ್ಗಿ ನನ್ನ ಪ್ರೀತಿಸ್ತಾ ಇದಾಳೆ ಅನ್ನೋ ಫೀಲ್‌ ಕೊಡ್ಬೇಕು, ಆಗಲೇ ಅದು ಪ್ರೀತಿ ಅನ್ನಿಸ್ಕೊಳ್ಳೋದು. ನನ್ನ ಪ್ರೀತಿಗೆ ಶಕ್ತಿ ಇದ್ದಿದ್ದೆ ಆದ್ರೆ ಯಾವತ್ತೋ ಒಂದು ದಿನ ಅವ್ನಿಗೆ ಅದು ಅರ್ಥ ಆಗುತ್ತೆ ಬಿಡು.

ಶ್ರೀನಗರ ಕಿಟ್ಟಿಯ ಗೌಳಿ ಚಿತ್ರಕ್ಕೆ ಅದ್ದೂರಿ ಮುಹೂರ್ತ

ಮೊ.ಸಂ: 8123727808 ಈ ನಂಬರ್‌ಗೆ ಈ ಮೇಲಿನ ಸಂಭಾಷಣೆಯ ಹೇಳುವ ವಿಡಿಯೋ ಮಾಡಿ ವಾಟ್ಸ್‌ ಅಪ್‌ (Whatsapp) ಮಾಡಬಹುದು.

Follow Us:
Download App:
  • android
  • ios