ತಂದೆಯ ಒತ್ತಾಯದಿಂದ ಇಷ್ಟವಿಲ್ಲದ ಸಿನಿಮಾಗಳಲ್ಲಿ ನಟಿಸಿದ್ದಕ್ಕೆ ಮಾನಸಿಕ ಒತ್ತಡ ಅನುಭವಿಸಿದ್ದಾಗಿ ನಟಿ ಸೋನು ಗೌಡ ತಿಳಿಸಿದ್ದಾರೆ. "ಸಿದ್ಲಿಂಗು ೨" ಚಿತ್ರದಲ್ಲಿ ನಟಿಸಿರುವ ಅವರು, ಆರಂಭಿಕ ವೃತ್ತಿಜೀವನದಲ್ಲಿ ತಂದೆಯ ಪರಿಚಯಸ್ಥರಿಗಾಗಿ ನಿರಾಕರಿಸಲಾಗದೆ ಬೇಸರದಿಂದ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೆ ಎಂದಿದ್ದಾರೆ. ಈಗಿನಷ್ಟು ಪ್ರಬುದ್ಧತೆ ಆಗಿದ್ದಿದ್ದರೆ ಆ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ವಿಷಾದಿಸಿದ್ದಾರೆ.

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಸೋನು ಗೌಡ ನಟನೆಯ ಸಿದ್ಲಿಂಗು 2 ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಲೂಸ್ ಮಾದ ಯೋಗಿಗೆ ಜೋಡಿಯಾಗಿ ಅಭಿನಯಿಸುತ್ತಿರುವ ಈ ಸುಂದರಿ ಆರಂಭದಲ್ಲಿ ಆಫರ್‌ ವಿಚಾರ ಬಂದಾಗ ಎಷ್ಟು ಕಷ್ಟ ಪಟ್ಟರು? ತಂದೆ ಕೂಡ ಇಂಡಸ್ಟ್ರಿಯಲ್ಲಿ ಖ್ಯಾತ ಮೇಕಪ್ ಆರ್ಟಿಸ್ಟ್ ಆಗಿರುವ ಕಾರಣ ಅದೆಷ್ಟೋ ಸಿನಿಮಾಗಳನ್ನು ಮನಸ್ಸಿಲ್ಲದ ಮನಸ್ಸಿನಲ್ಲಿ ಒಪ್ಪಿಕೊಂಡಿದ್ದಾರೆ. ಇದರ ಪರಿಣಾಮ ಏನ್ ಆಯ್ತು ಎಂದು ವಿವರಿಸಿದ್ದಾರೆ.

'ಆಗ ನಮ್ಮ ತಂದೆಗೆ ಯಾರೆಲ್ಲಾ ಸಹಾಯ ಮಾಡಿದ್ದಾರೋ ಅವರು ಈಗ ಬಂದು ನಿಮ್ಮ ಮಗಳ ಜೊತೆ ನಾನು ಕೆಲಸ ಮಾಡಬೇಕು ಅಂತಿದ್ದಾರೆ. ಇಲ್ಲ ಎಂದು ತಂದೆಗೆ ಹೇಳಲು ಕಷ್ಟ ಆಗುತ್ತಿತ್ತು ನನಗೂ ಇಲ್ಲ ಎಂದು ಹೇಳಲು ಕಷ್ಟ ಆಗುತ್ತಿತ್ತು. ಇಷ್ಟ ಇಲ್ಲದಿದ್ದರೂ ಅವರೊಟ್ಟಿಗೆ ಸಿನಿಮಾ ಮಾಡುವ ಪರಿಸ್ಥಿತಿ ಎದುರಾಗಿತ್ತು. ಈ ಸಿನಿಮಾ ನನಗೆ ಇಷ್ಟ ಆಗುತ್ತಿಲ್ಲ ನಾನು ಸಿನಿಮಾ ಮಾಡುವುದಿಲ್ಲ ಎಂದು ಮನೆಗೆ ಬಂದು ಅಳುತ್ತಿದ್ದೆ ಅದರೆ ಇದರ ಪರಿಣಾಮ ನನ್ನ ವೈಯಕ್ತಿಕ ಜೀವನದ ಮೇಲೆ ಬಿತ್ತು. ಈ ಬ್ಯುಸಿ ಇದ್ದೀನಿ ಮಾಡಲು ಆಗುವುದಿಲ್ಲ ಅನ್ನಬಹುದು ಆದರೆ ಆ ಸಮಯದಲ್ಲಿ ಕೇಳುತ್ತಿದ್ದವರು ದೊಡ್ಡವರು ಅವರಿ ಇಲ್ಲ ಅಂತ ಉತ್ತರಿಸಬಾರದು ಅಂತ ಅನಿಸುತ್ತಿತ್ತು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಸೋನು ಗೌಡ ಮಾತನಾಡಿದ್ದಾರೆ.

ಲವ್ ಮಾಕ್ಟೇಲ್‌ 2 ಚಿತ್ರದ ಜಂಕಿ ಸುಷ್ಮಿತಾ ಗೌಡ ಎಲ್ಲಿ ಕಳೆದೋದರು?

'ನಾಯಕಿಯರ ಲೈಫ್‌ ಸ್ಪ್ಯಾನ್ ತುಂಬಾನೇ ಕಡಿಮೆ ಹೀಗಾಗಿ ಬರುವ ಆಫರ್‌ಗಳನ್ನು ಒಪ್ಪಿಕೊಳ್ಳಬೇಕು ಅನ್ನೋ ಮೈಂಡ್‌ ನಮ್ಮ ತಂದೆಗೆ ಇತ್ತು. ಈ ಆಲೋಚನೆಯಲ್ಲಿ ನಮ್ಮ ತಂದೆಯನ್ನು ಬದಲಾಯಿಸುವಷ್ಟರಲ್ಲಿ ವರ್ಲ್ಡ್‌ ವಾರ್ ಆಗುತ್ತಿತ್ತು. ಆ ಸಮಯದಲ್ಲಿ ನನ್ನ ತಂಗಿ ಜೊತೆಗಿದ್ದಳು, ಆಗಲ್ಲ ಅಂದ್ರೆ ಇಲ್ಲ ಎಂದು ಹೇಳು ಎನ್ನುತ್ತಿದ್ದಳು. ನನ್ನ ತಂಗಿಗೆ ಸುಮಾರು ಸಿನಿಮಾ ಆಫರ್‌ಗಳು ಬರುತ್ತಿತ್ತು ಆದರೆ ಅವಳು ಎಲ್ಲಾ ರಿಜೆಕ್ಟ್ ಮಾಡಿ ಇಲ್ಲ ಎನ್ನುತ್ತಿದ್ದಳು. ಒಂದಿಷ್ಟು ಅವಾರ್ಡ್‌ಗಳು ಬಂದಿದೆ ಒಳ್ಳೆ ಸಿನಿಮಾ ನೀಡಿದ್ದೀನಿ ಆದರೆ ಮೆಂಟಲ್ ಪ್ರೆಷರ್ ಹೆಚ್ಚಿರುತ್ತಿತ್ತು. ಈಗ ಇರುವ ಮೆಚ್ಯೂರಿಟಿ ಆಗ ಇದ್ದಿದ್ದರೆ ಆ ಸಿನಿಮಾಗಳನ್ನು ಒಪ್ಪಿಕೊಳ್ಲುತ್ತಿರಲಿಲ್ಲ' ಎಂದು ಸೋನು ಗೌಡ ಹೇಳಿದ್ದಾರೆ.

ಬೆಳ್ಳಿ ಕೊಳ್ಳಲು ದುಡ್ಡಿಲ್ಲದೇ ಗೋವಾದಲ್ಲಿ ಕಳ್ಳತನ ಮಾಡಿದ ನಟಿ ಸೋನು ಗೌಡ!

40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸೋನು ಗೌಡ ಅಭಿನಯಿಸಿದ್ದಾರೆ. ಅಷ್ಟರಲ್ಲಿ ಜನರ ಮನಸ್ಸಿನಲ್ಲಿ ಸದಾ ಉಳಿದಿರುವುದು ಇಂತಿ ನಿನ್ನ ಪ್ರೀತಿಯಾ, ಪರಮೇಶ್ವರ ಪಾನ್‌ವಾಲಾ, ಪೊಲೀಸ್ ಕ್ವಾಟರ್ಸ್‌, ಕಿರಗೂರಿನ ಗಯಾಳಿಗಳು, ಹ್ಯಾಪಿ ನ್ಯೂ ಇಯರ್, ಗುಲ್ಟು, ಡಿಯರ್ ವಿಕ್ರಮ್ ಹಾಗೂ ನೋಡುವವರು ಏನಂತಾರೆ ಸಿನಿಮಾ. ಅಲ್ಲದೆ 2022ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಗಾಯಕಿ ವಾಣಿ ಹರಿಕೃಷ್ಣಗೆ ಸೀರೆ ಗಿಫ್ಟ್‌ ಕೊಟ್ಟ ತಾರಾ; ನೀನು ಅನಾಥ ಅಲ್ಲ ದ್ಯಾಮೇಶ ಎಂದು ಧೈರ್ಯ ಕೊಟ್ಟ ನಟಿ