ಮಜಾ ಟಾಕೀಸ್‌ನಲ್ಲಿ ಸಿದ್ಲಿಂಗು ೨ ಚಿತ್ರತಂಡ ಭಾಗಿ. ಸೋನು ಗೌಡ ತಮ್ಮ ಕಳ್ಳತನದ ಚಟವನ್ನು ಬಹಿರಂಗಪಡಿಸಿದರು. ಬಾಲ್ಯದಲ್ಲಿ ಅಂಗಡಿಯಿಂದ ಟಾಪ್ ಕದ್ದಿದ್ದನ್ನೂ, ಗೋವಾದಲ್ಲಿ ತಂಗಿ ಬೆಳ್ಳಿ ಕದ್ದಿದ್ದನ್ನೂ ವಿವರಿಸಿದರು. ಸಿದ್ಲಿಂಗು ೨ ಒಪ್ಪಿಕೊಳ್ಳುವ ಮುನ್ನ ನಿರ್ದೇಶಕರ ಬಗ್ಗೆ ವಿಚಾರಿಸಿದ್ದನ್ನೂ ಹೇಳಿಕೊಂಡರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್‌ ಕಾರ್ಯಕ್ರಮದಲ್ಲಿ ಸಿದ್ಲಿಂಗು 2 ಸಿನಿಮಾ ಪ್ರಮೋಷನ್ ನಡೆದಿದೆ. ಆಗ ಲೂಸ್ ಮಾದಾ ಯೋಗಿ, ನಟಿ ಸೋನು ಗೌಡ ಹಾಗೂ ನಿರ್ದೇಶಕ ವಿಜಯ್ ಪ್ರಸಾದ್ ಭಾಗಿಯಾಗಿದ್ದರು. ಚಿತ್ರೀಕರಣದ ವೇಳೆ ನಡೆದ ಘಟನೆಗಳು, ಕಥೆ ಒಪ್ಪಿಕೊಳ್ಳಲು ಕಾರಣ ಹೀಗೆ ಹಲವಾರು ವಿಚಾರಗಳನ್ನು ಚರ್ಚೆ ಮಾಡುವಾಗ ಸೋನು ಗೌಡ ರಿವೀಲ್ ಮಾಡಿದ್ದು ನಿಜಕ್ಕೂ ಒಂದು ಇಂಟ್ರೆಸ್ಟಿಂಗ್ ಮ್ಯಾಟರ್. ಅದುವೇ ಕಳ್ಳತನ .....ಸೋನು ಗೌಡ ಬಗ್ಗೆ ಗುಣಗಾನ ಮಾಡಬೇಕು ಏಕೆಂದರೆ ಆಕೆಗೆ ಕದಿಯುವ ಚಟ ಇದೆ ಎಂದು ಸೃಜನ್ ಲೋಕೇಶ್ ರಿವೀಲ್ ಮಾಡಿದ್ದಾರೆ. ಪ್ರತಿಯೊಬ್ಬರು ಏನು ಏನು ಎಂದು ಪ್ರಶ್ನೆ ಮಾಡಿದಾಗ ಸೋನು ರಿವೀಲ್ ಮಾಡಿದ್ದು ಎರಡು ಘಟನೆಗಳು...

'ಸ್ಕೂಲ್ ಸಮಯದಲ್ಲಿ ನಡೆದ ಘಟನೆಯನ್ನು ನಾನು ಹಂಚಿಕೊಳ್ಳುತ್ತಿದ್ದೀನಿ. ಅಣ್ಣನಿಗೆ ಮೊದಲ ಸಂಬಳ ಸಿಕ್ಕಿತ್ತು ಏನಾದರೂ ಕೊಡ್ಸು ಅಂತ ಕೇಳುತ್ತಿದ್ದೆ ಅದಿಕ್ಕೆ ಜಾಸ್ತಿ ಖರ್ಚು ಮಾಡಬೇಡ ಅಂತ ಅಮ್ಮ ಹೇಳಿ ಕಳುಹಿಸಿದ್ದರು. ನಾನು ಮತ್ತು ನನ್ನ ತಂಗಿ ಶಾಪಿಂಗ್ ಮಾಡಿದ್ವಿ...ಆಗ ನನಗೆ ಎರಡು ಟಾಪ್ ಇಷ್ಟ ಆಗಿತ್ತು. ಖರೀದಿ ಮಾಡಿದ್ದು ಒಂದು ಟಾಪ್ ಆದರೆ ಧರಿಸಿದ್ದ ಟಾಪ್‌ ಒಳಗೆ ಮತ್ತೊಮ್ಮೆ ಟಾಪ್‌ ಹಾಕಿಕೊಂಡು ಅಂಗಡಿಯಿಂದ ಹೊರ ಬಂದೆ' ಎಂದು ಸೋನು ಗೌಡ ಮಾತನಾಡಿದ್ದಾರೆ. 

ಗಾಯಕಿ ವಾಣಿ ಹರಿಕೃಷ್ಣಗೆ ಸೀರೆ ಗಿಫ್ಟ್‌ ಕೊಟ್ಟ ತಾರಾ; ನೀನು ಅನಾಥ ಅಲ್ಲ ದ್ಯಾಮೇಶ ಎಂದು ಧೈರ್ಯ ಕೊಟ್ಟ ನಟಿ

'ಮತ್ತೊಂದು ಮರೆಯಲಾಗದ ಘಟನೆ ಏನೆಂದರೆ ನಾವು ಗೋವಾ ಟ್ರಿಪ್ ಹೋಗಿದ್ವಿ...ಗೋವಾದಲ್ಲಿ ಬೆಳ್ಳಿ ಬೆಲೆ ತುಂಬಾ ಜಾಸ್ತಿ ಅಲ್ಲಿ ಜನಪ್ರಿಯ ಸಿಲ್ವರ್ ಮಾರ್ಕೆಟ್ ಇದೆ. ಒಂದು ಯಾವುದೋ ತುಂಬಾ ಇಷ್ಟ ಆಯ್ತು ಅದನ್ನು ನನ್ನ ಗರ್ಲ್‌ಫ್ರೆಂಡ್‌ಗೆ ಕೊಡಬೇಕು ಅಂತ ಅಣ್ಣ ಹೇಳಿದ್ದ. ಇಷ್ಟ ಆಯ್ತಾ ಅಂತ ಕೇಳಿ ನನ್ನ ತಂಗಿ ಅದನ್ನು ಬಾಯಿಗೆ ಹಾಕಿಕೊಂಡುಬಿಟ್ಟಳು....ಆಗ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ..ಓಡು ಓಡು ಅಂತ ಅಲ್ಲಿಂದ ಜಾಗ ಕಾಲಿ ಮಾಡಿದ್ದು' ಎಂದು ಸೋನು ಗೌಡ ಹೇಳಿದ್ದಾರೆ. ಕದಿಯುವುದನ್ನು ಎಷ್ಟು ಸುಲಭ ಮಾಡಿಕೊಂಡಿದ್ದಾರೆ ಎಂದು ನಿರ್ದೇಶಕ ಯೋಗರಾಜ್ ಭಟ್ರು ಹೇಳಿದ್ದಾರೆ. ಸಿದ್ಲಿಂಗು ಸಿನಿಮಾ ಆಫರ್ ಬಂದಾಗ ಸೋನು ತುಂಬಾನೇ ಯೋಚನೆ ಮಾಡಿದ್ದಾರೆ. ತಮ್ಮ ಸಂಪರ್ಕದಲ್ಲಿ ಇರುವ ಹಲವರ ಬಳಿ ನಿರ್ದೇಶಕರು ಮತ್ತು ಕಥೆ ಬಗ್ಗೆ ಚರ್ಚೆ ಮಾಡಿದ್ದಾರೆ. ಅಯ್ಯೋ ಆ ನಿರ್ದೇಶಕರ ಜೊತೆ ಚೆನ್ನಾಗಿ ಇರಿ ಎಂದು ಒಬ್ಬರು ಸಲಹೆ ಕೊಟ್ಟಿದ್ದಾರೆ. ಆದರೂ ಕಥೆ ಇಷ್ಟವಾಗಿದ್ದಕ್ಕೆ ಸಿನಿಮಾ ಒಪ್ಪಿಕೊಂಡು ಮುಂದುವರೆದಿದ್ದಾರೆ. ಅಲ್ಲಿಗೆ ನಿರ್ದೇಶಕರು ನಿಜಕ್ಕೂ ಒಳ್ಳೆಯ ಮನುಷ್ಯ ಎಂದು ಅರ್ಥವಾಗಿತ್ತು ಎಂದಿದ್ದಾರೆ.

ಸಿಸಿಟಿವಿ ವರ್ಕ್ ಆಗ್ತಿಲ್ಲ ಅಂತ ಗಾಬರಿ ಆಗಿದ್ದಾನೆ ಜಯಂತ್; ಜಾನು ಬುದ್ಧಿವಂತಿಕೆ ಸಹಾಯ ಮಾಡುತ್ತಾ?

View post on Instagram