ಗಾಯಕಿ ವಾಣಿ ಹರಿಕೃಷ್ಣಗೆ ಸೀರೆ ಗಿಫ್ಟ್ ಕೊಟ್ಟ ತಾರಾ; ನೀನು ಅನಾಥ ಅಲ್ಲ ದ್ಯಾಮೇಶ ಎಂದು ಧೈರ್ಯ ಕೊಟ್ಟ ನಟಿ
ವಾಣಿ ಹರಿಕೃಷ್ಣರವರಿಗೆ ಗಿಫ್ಟ್ ಕೊಟ್ಟ ದ್ಯಾಮೇಶ ಮತ್ತು ನಟಿ ತಾರಾ ಅನುರಾಧ. ಪತ್ರ ನೋಡುತ್ತಿದ್ದಂತೆ ಆಶ್ಚರ್ಯ ನತ್ತು ಖುಷಿ ಪಟ್ಟ ಗಾಯಕಿ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸೀಸನ್ 20 ಸಂಗೀತ ಕಾರ್ಯಕ್ರಮದಲ್ಲಿ ಬಡ ಕುಟುಂ ದ್ಯಾಮೇಶ ಜನರ ಗಮನ ಸೆಳೆದಿದ್ದಾರೆ. ಭತ್ತದ ನಾಡು ಎಂದೇ ಪ್ರಸಿದ್ಧವಾಗಿರುವ ಕಾರಟಗಿಯ ಹುಡುಗ ದ್ಯಾಮೇಶ. 'ನನಗೆ ಯಾರೂ ಇಲ್ಲ....ಅಪ್ಪ ಅಮ್ಮ ಅಣ್ಣ ತಂಗಿ ಯಾರು ಅಂದ್ರೆ ಯಾರೂ ಇಲ್ಲ ನಾನು ಒಬ್ಬನೇ'ಎಂದು ಮೊದಲ ಎಪಿಸೋಡ್‌ನಲ್ಲಿ ದ್ಯಾಮೇಶ ಕಣ್ಣೀರಿಟ್ಟರು. ನಿನ್ನೊಟ್ಟಿಗೆ ನಾವು ಇದ್ದೀವಿ ಎಂದು ಇಡೀ ಸರಿಗಮಪ ತಂಡ ಸಾಥ್ ನೀಡಿದೆ. ದ್ಯಾಮೇಶ ಕಣ್ಣೀರಿಗೆ ಕರಗಿಸ ಗಾಯಕಿ ವಾಣಿ ಹರಿಕೃಷ್ಣ ಇವನು ನನ್ನ ಮಗ ಎಂದಿದ್ದಾರೆ.
ದ್ಯಾಮೇಶನಿಗೆ ಸಿಹಿ ತಿಂಡಿ ಮಾಡಿಕೊಡುವುದು,ಹಾಡಲು ಸಹಾಯ ಮಾಡುವುದು ವಾಣಿ ಹರಿಕೃಷ್ಣ. ಹೀಗಾಗಿ ಅವರಿಬ್ಬರು ನಿಜಕ್ಕೂ ತಾಯಿ ಮಗನಂತೆ ಇದ್ದಾರೆ. ತಾರಾ ಅನುರಾಧ ಆಗಮಿಸಿದ್ದಾಗ ಉಳಿದವರು ಕಂಡಂತೆ ಸಿನಿಮಾದ ಅಮ್ಮಾ ಹಾಡನ್ನು ದ್ಯಾಮೇಶ ಮತ್ತು ವಾಣಿ ಹಾಡಿದ್ದರು. ಆಗ ನಿಜಕ್ಕೂ ಸೆಟ್‌ನಲ್ಲಿದ್ದ ಪ್ರತಿಯೊಬ್ಬರು ಕಣ್ಣೀರಿಟ್ಟಿದ್ದಾರೆ. ಈ ವಾರ ಸಂಗೀತ ನಿರ್ದೇಶಕ ಹರಿಕೃಷ್ಣ ವಿಶೇಷ ಅತಿಥಿಯಾಗಿ ಆಗಮಿಸಿದ್ದಾಗ ದ್ಯಾಮೇಶ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾನೆ. ಗಿಫ್ಟ್ ಓಪನ್ ಮಾಡಿದ ವಾಣಿ ಶಾಕ್ ಆಗಿದ್ದಾರೆ...'ಹರಿಕೃಷ್ಣ ಸರ್ ಮತ್ತು ವಾಣಿ ಅಮ್ಮ ಶಿವ ಪಾರ್ವತಿ ರೀತಿ ಇರುಬೇಕು' ಎಂದಿದ್ದಾನೆ. ಅದಾದ ಮೇಲೆ ವಾಣಿ ಅವರಿಗೆ ಮತ್ತೊಂದು ಗಿಫ್ಟ್ ಬಂದಿದೆ.
ಸಿಸಿಟಿವಿ ವರ್ಕ್ ಆಗ್ತಿಲ್ಲ ಅಂತ ಗಾಬರಿ ಆಗಿದ್ದಾನೆ ಜಯಂತ್; ಜಾನು ಬುದ್ಧಿವಂತಿಕೆ ಸಹಾಯ ಮಾಡುತ್ತಾ?
ಹೌದು! ಒಂದು ದುಬಾರಿ ಸೀರೆ ಮತ್ತು ಪತ್ರವೊಂದು ವಾಣಿ ಅವರಿಗೆ ತಲುಪುತ್ತದೆ. 'ಉಳಿದವರು ಕಂಡಂತೆ' ಚಿತ್ರದ ಹಾಡನ್ನು ಇಂಪಾಗಿ ಹಾಡುವುದಲ್ಲದೆ ದ್ಯಾಮೇಶ ಎಂಬ ಹುಡುಗನಿಗೆ ಮಾನಸ ತಾಯಿ ಆಗಿ ಆ ಹುಡುಗನನ್ನು ಮಗನಾಗಿ ಸ್ವೀಕರಿಸಿದ ಗೆಳತಿ ಶ್ರೀಮತಿ ವಾಣಿ ಹರಿಕೃಷ್ಣ ಅವರಿಗೆ ನನ್ನ ತುಂಬು ಹೃದಯದ ಸಾವಿರ ಮುತ್ತುಗಳು. ದ್ಯಾಮೇಶ ನೀನು ಅನಾಥ ಅಲ್ಲ..ಎಷ್ಟು ಚಂದ ಹಾಡಿ ಖಂಡಿತಾ ನನ್ನ ಮನಸ್ಸು ಕದ್ದಿದ್ಯಾ...ನನಗೂ ಕೂಡ ನನ್ನ ತಾಯಿಯ ನೆನಪು ಆಗುವಂತೆ ಮಾಡಿದೆ. ಪವಿತ್ರವಾದ ವೇದಿಕಯೆಲ್ಲಿ ಎಂದೂ ಕಣ್ಣೀರು ಹಾಕಬೇಡ' ಎಂದು ಪತ್ರದಲ್ಲಿ ತಾರಾ ಅನುರಾಧ ಬರೆದು ಕಳುಹಿಸಿದ್ದರು. ದ್ಯಾಮೇಶನಿಗೆ ಚಿತ್ರರಂಗದಲ್ಲಿ ಆಫರ್ ಕೊಡಿಸಬೇಕು ಸಿನಿಮಾ ಹಾಡು ಹಾಡಿಸಬೇಕು ಅಲ್ಲದೆ ಒಂದು ನೆಲೆ ಕಟ್ಟುಕೊಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ರಚಿತಾ ರಾಮ್ ಸಿನಿಮಾದಲ್ಲಿ ರಾಗಿಣಿ ದ್ವಿವೇದಿಯ 20 ನಿಮಿಷದ ಸೀನ್ ಡಿಲೀಟ್ ?; ತುಪ್ಪದ ಬೆಡಗಿ ಗರಂ