Asianet Suvarna News Asianet Suvarna News

ಬಿಸಿ-ಬಿಸಿ ಐಸ್‌ಕ್ರೀಮ್ ತಿಂದ್ರಾ ಸಿರಿ ರವಿಕುಮಾರ್; ಕೊಟ್ಟಿದ್ಯಾಕೆ ಅರವಿಂದ್ ಅಯ್ಯರ್!

ಡಾರ್ಕ್ ಕಾಮಿಡಿ ರೋಮ್ಯಾನ್ಸ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅರವಿಂದ್ ಐಯ್ಯರ್ ಸಿರಿ ರವಿಕುಮಾರ್ ಜೋಡಿಯಾಗಿ ನಟಿಸುತ್ತಿದ್ದು, ಗೋಪಾಲಕೃಷ್ಣ ದೇಶಪಾಂಡೇ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. 

Siri Ravikumar and Aravind Ayyar lead bisi bisi ice cream trailer release srb
Author
First Published Jan 14, 2024, 1:30 PM IST

ಕಹಿ, ಅಳಿದು ಉಳಿದವರು ಸಿನಿಮಾ ನಿರ್ದೇಶಿಸಿದ್ದ ಅರವಿಂದ್ ಶಾಸ್ತ್ರಿ ‘ಬಿಸಿ-ಬಿಸಿ Ice-Cream’ ತಿನಿಸೋದಿಕ್ಕೆ ಬರ್ತಿದ್ದಾರೆ. ಈ ವಿಭಿನ್ನ ಟೈಟಲ್ ನ ಚಿತ್ರದ ಟ್ರೇಲರ್ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಿನ್ನೆ ಬಿಡುಗಡೆ ಮಾಡಲಾಗಿತು. ಈ ಸಂದರ್ಭದಲ್ಲಿ ಚಿತ್ರತಂಡ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. 

ನಿರ್ದೇಶಕ ಅರವಿಂದ್ ಶಾಸ್ತ್ರೀ ಮಾತನಾಡಿ, 'ಕ್ಯಾಬ್ ಡ್ರೈವರ್ ವೃತ್ತಿ ಬಗ್ಗೆ ನಾವು ಹೇಳಲು ಹೊರಟಿಲ್ಲ. ಆ ವ್ಯಕ್ತಿಯ ಕಥೆಯನ್ನು ನಾವು ಸಿನಿಮಾದಲ್ಲಿ ಹೇಳಲು ಹೊರಟಿದ್ದೇವೆ. ಶೂಟಿಂಗ್ ಕಳೆದು ವರ್ಷ ಮುಗಿಸಿದ್ದೇವೆ. ಒಬ್ಬ ಒಂಟಿ ಕ್ಯಾಬ್ ಡ್ರೈವರ್ ಲೈಫ್ ನಲ್ಲಿ ಮಿಸ್ಟಿರಿಯಸ್ ಹುಡುಗಿ ಬಂದಾಗ ಅಡ್ವೆಂಚರ್ಸ್, ಮಿಸ್ ಅಡ್ವೆಂಚರ್ಸ್ ಆಗುತ್ತದೆ ಅನ್ನೋದು ಸಿನಿಮಾ ಕಥೆ. ಸಿನಿಮಾದ ಶೂಟಿಂಗ್ ಮುಗಿದೆ. ಮಾರ್ಚ್ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತೇವೆ' ಎಂದರು.

ನಟ ಅರವಿಂದ್ ಐಯ್ಯರ್ ಮಾತನಾಡಿ, 'ನನ್ನದು ವಿಭಿನ್ನ ಪಾತ್ರ. ಈ ಪಾತ್ರಕ್ಕಾಗಿ ವರ್ಕೌಟ್ ಬಿಟ್ಟಿದ್ದೇನೆ. ಪರ್ಫಾಮ್ ಮಾಡಲು ಒಳ್ಳೆ ಸ್ಪೇಸ್ ಸಿಕ್ಕಿದೆ. ಆಕ್ಟಿಂಗ್ ಮಾಡಬೇಕು. ಪರ್ಫಾಮ್ ಮಾಡಬೇಕು ಎಂದು ಮಾಡಿದ್ದಲ್ಲ. ಪ್ರಿಫರೇಷನ್ ಚೆನ್ನಾಗಿತ್ತು, ಬಹಳ ಮಜಾ ಮಾಡಿಕೊಂಡು ಕೆಲಸ ಮಾಡಿದ್ದೇನೆ' ಎಂದರು.

ನಾಯಕಿ ಸಿರಿ ರವಿಕುಮಾರ್ ಮಾತನಾಡಿ, 'ನಾನು ಅರವಿಂದ್ ಶಾಸ್ತ್ರೀ ಅವರ ಕಹಿ ಸಿನಿಮಾ ಸಮಯದಲ್ಲಿ ಮಾತನಾಡಿದ್ದೇವು. ನಾನು ಆಗ ರೆಡಿಯೋ ಮಿರ್ಚಿಯಲ್ಲಿದ್ದೆ. ಕೆಲಸದಲ್ಲಿ ಬ್ಯುಸಿ ಇದ್ದೇ. ಬಹಳ ವರ್ಷಗಳ ನಂತರ ಕಾಲ್ ಮಾಡಿದಾಗ ಖುಷಿಪಟ್ಟೆ. ಇವರ ಕಹಿ ಮತ್ತು ಅಳಿದುಳಿದವರು ಸಿನಿಮಾ ನನಗೆ ಇಷ್ಟ. ಕಾಮಿಡಿ, ಥ್ರಿಲ್ಲರ್, ಅಡ್ವೆಂಚರ್ ಎಲ್ಲವೂ ಕಥೆಯಲ್ಲಿ ಇದೆ. ಇದನ್ನು ನಾನು ಮಾಡಲು ರೆಡಿಯಾದೆ. ಶೂಟಿಂಗ್ ಪ್ರೊಸೆಸ್ ಮಜವಾಗಿತ್ತು. ಸಿನಿಮಾ ನೋಡಿದಾಗ ಖುಷಿ ಎನಿಸಿತು' ಎಂದರು. 

ಬೀಟ್ ಗುರೂಸ್ ಸಂಗೀತ ಸಂಸ್ಥೆಯ ಮ್ಯೂಸಿಕ್ ಮಸ್ತಿಗೆ ಜೈ; ಸ್ಯಾಂಡಲ್‌ವುಡ್‌ ಅಂಗಳದಲ್ಲೂ 'ಡಿಜೆಂಬೆ' ಕಲರವ!

ಕ್ಯಾಬ್ ಡ್ರೈವರ್ ಕಥೆ ಹೇಳುವ ಸಿನಿಮಾಗಳು ಈಗಾಗಲೇ ಬಂದಿವೆ. ಆದರೆ ಬಿಸಿಬಿಸಿ Ice-Cream, ಅನಾರೋಗ್ಯದಲ್ಲಿರುವ ಕ್ಯಾಬ್ ಡ್ರೈವರ್‌ ಜೀವನದಲ್ಲಿ ನಿಗೂಢ ಮಹಿಳೆಯೊಬ್ಬಳು ಬಂದಾಗ, ಅವಳು ಅವನ ದುಃಖಗಳಿಗೆ ಔಷಧ ಮತ್ತು ಅನೇಕ ಸಾಹಸಗಳಿಗೆ ನಾಂದಿಯಾಗುತ್ತಾಳೆ ಎಂಬ ಕಥೆ ಎಳೆಯನ್ನು ಇಟ್ಟುಕೊಂಡು ಅರವಿಂದ್ ಶಾಸ್ತ್ರೀ ಸಿನಿಮಾ ಮಾಡಿದ್ದಾರೆ. ಕಥೆ ಬರೆದು ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. 

ಬಾಗಿಲು ತೆಗಿ ಭಾಗೀರಥಿ ಎಂದ್ರು ಪ್ರಶಾಂತ್ ಸಿದ್ಧಿ; 'ಮತ್ಸ್ಯಗಂಧ'ದ ಕಿಕ್ ಕೊಟ್ಟು ಎಲ್ಲಿಗೆ ಕರೀತಿದಾರೆ ನೋಡ್ರಿ!

ಡಾರ್ಕ್ ಕಾಮಿಡಿ ರೋಮ್ಯಾನ್ಸ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅರವಿಂದ್ ಐಯ್ಯರ್ ಸಿರಿ ರವಿಕುಮಾರ್ ಜೋಡಿಯಾಗಿ ನಟಿಸುತ್ತಿದ್ದು, ಗೋಪಾಲಕೃಷ್ಣ ದೇಶಪಾಂಡೇ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ, ಎನೋಷ್ ಒಲಿವೇರಾ ಛಾಯಾಗ್ರಹಣ ಚಿತ್ರಕ್ಕಿದೆ. ಬೋಯಿಲ್ಡ್ ಬೀನ್ಸ್ ಪಿಕ್ಚರ್ಸ್ ಬ್ಯಾನರ್ ನಡಿ ಅಕ್ಷರ ಭಾರಧ್ವಾಜ್ ‘ಬಿಸಿ-ಬಿಸಿ Ice-Cream’ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಟ್ರೇಲರ್ ರಿಲೀಸ್ ಮಾಡುವ ಮೂಲಕ ಪ್ರಚಾರ ಶುರು ಮಾಡಿರುವ ಚಿತ್ರತಂಡ, ಮಾರ್ಚ್ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದೆ.

Follow Us:
Download App:
  • android
  • ios