Asianet Suvarna News Asianet Suvarna News

ಬೀಟ್ ಗುರೂಸ್ ಸಂಗೀತ ಸಂಸ್ಥೆಯ ಮ್ಯೂಸಿಕ್ ಮಸ್ತಿಗೆ ಜೈ; ಸ್ಯಾಂಡಲ್‌ವುಡ್‌ ಅಂಗಳದಲ್ಲೂ 'ಡಿಜೆಂಬೆ' ಕಲರವ!

ಬೀಟ್ ಗುರೂಸ್ (Beat Gurus)ವಿದೇಶಗಳಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಸೇರಿದಂತೆ ಕರ್ನಾಕದ ಹಲವು ಕಡೆಗಳಲ್ಲಿ ತಮ್ಮ ಅಮೋಘ ಪ್ರತಿಭಾ ಪ್ರದರ್ಶನ ನೀಡಿದೆ. ಕಳೆದ 20 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಅಪಾರವಾಗಿ ತೊಡಗಿಸಿಕೊಂಡು ಬಹಳಷ್ಟು ಈವೆಂಟ್‌ಗಳನ್ನು ನಡೆಸಿ ಖ್ಯಾತಿ ಪಡೆದಿದೆ.

Beat Gurus music organization performs various events all over the world srb
Author
First Published Jan 11, 2024, 1:39 PM IST

'ಬೀಟ್ ಗುರೂಸ್' ಹೆಸರಿನ ಮ್ಯೂಸಿಕ್ ಸಂಸ್ಥೆ ಇಂದು ಮುಗಿಲೆತ್ತರಕ್ಕೆ ಬೆಳೆಯುವತ್ತ ಸಾಗಿದೆ. ಗಣೇಶ್ ಗೋವಿಂದಸ್ವಾಮಿ ನೇತೃತ್ವದ ಈ ಸಂಸ್ಥೆ ಮೊಟ್ಟಮೊದಲು ಪ್ರತಿಭಾ ಪ್ರದರ್ಶನ ನೀಡಿದ್ದು ಲಲಿತ್ ಅಶೋಕ್ (Lalith Ashok-Bangalore)ಕಾರ್ಪೋರೇಟ್ಈವೆಂಟ್‌ ಮೂಲಕ ಎಂಬುದು ಗಮನಿಸಬೇಕಾದ ಸಂಗತಿ. ಪ್ರೇಕ್ಷಕರ ರೆಸ್ಪಾನ್ಸ್ ಮೇಲೆ ಮುಂದಿನ ಈವೆಂಟ್ ಕೊಡುವುದಾಗಿ ಹೇಳಿದ್ದ ಆ ಸಂಸ್ಥೆ, ಬಳಿಕ ಬೀಟ್ ಗುರೂಸ್‌ಗೆ ಖಾಯಂ ಆಗಿ ಈವೆಂಟ್ ನೀಡುತ್ತ ಬಂದಿರುವುದು ಬೀಟ್ ಗುರೂಸ್ ಹೆಗ್ಗಳಿಕೆಯಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಕೂಡ ಬೀಟ್ ಗುರೂಸ್‌ ಕೊಡುಗೆ ಸಾಕಷ್ಟಿದೆ.

ಇಂಥ ಬೀಟ್ ಗುರೂಸ್ (Beat Gurus)ವಿದೇಶಗಳಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಸೇರಿದಂತೆ ಕರ್ನಾಕದ ಹಲವು ಕಡೆಗಳಲ್ಲಿ ತಮ್ಮ ಅಮೋಘ ಪ್ರತಿಭಾ ಪ್ರದರ್ಶನ ನೀಡಿದೆ. ಕಳೆದ 20 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಅಪಾರವಾಗಿ ತೊಡಗಿಸಿಕೊಂಡು ಬಹಳಷ್ಟು ಈವೆಂಟ್‌ಗಳನ್ನು ನಡೆಸಿ ಖ್ಯಾತಿ ಪಡೆದಿದೆ ಬೀಟ್ ಗುರೂಸ್. ಮಾಧ್ಯಮ ಕ್ಷೇತ್ರದಲ್ಲಿ ಕೂಡ ಹಲವು ಸಂಸ್ಥೆಗಳಲ್ಲಿ ಈವೆಂಟ್‌ ನಡೆಸಿಕೊಟ್ಟಿದೆ ಬೀಟ್ ಗುರೂಸ್. 

ಸುವರ್ಣ ನ್ಯೂಸ್, ಈಟಿವಿ ಕನ್ನಡ, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ವರ್ಲ್ಡ್ ಸೊಷಿಯಲ್ ಫೋರಂ, ಎನ್‌ಡಿಟಿವಿ, ಬಿಬಿಸಿ, ಉದಯ ಟಿವಿ, ಇಂಟರ್‌ನ್ಯಾಷನಲ್ ಕಲ್ಚರಲ್ ಇವನಿಂಗ್ (ನಾರ್ವೆ), ಹಾಗು ಜಗತ್ತಿನ ಹಲವು ದೇಶಗಳಲ್ಲಿ ಬೀಟ್ ತಮ್ಮ ಗುರೂಸ್ ಸಂಗೀತ ಸುಧೆ ಹರಿದಿದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಂಗೀತದ ಝಲಕ್ ನೀಡಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ಉತ್ಸುಕವಾಗಿದೆ ಬೀಟ್ ಗುರೂಸ್. ಇಂಥ ಬೀಟ್ ಗುರೂಸ್‌ ರೂವಾರಿ ಹಾಗು ಕಲಾವಿದರ ಸಂಕ್ಷಿಪ್ತ ಪರಿಚಯದ ಒಂದು ಕಿರುನೋಟ ಇಲ್ಲಿದೆ, ನೋಡಿ..

ಸುನಿಲ್ ಕೆ ಎಸ್ (sunil KS):
'8ನೇ ವಯಸ್ಸಿಗೆ ಕೊಳಲು ನುಡಿಸಲು ಪ್ರಾರಂಭಿಸಿದ ನಾನು (ಸುನೀಲ್), 15ನೇ ವಯಸ್ಸಿಗೇ ವೇದಿಕೆ ಮೇಲೆ ತಮ್ಮ ಕಲೆಯನ್ನು ಪ್ರದರ್ಶಿಸಲು ಪ್ರಾರಂಭಿಸಿದೆ. ವಿದ್ಯಾನ್ ಬಿ ಶಂಕರ್ ರಾವ್ ಅವರ ಗರಡಿಯಲ್ಲಿ ಕರ್ನಾಟಿಕ್ ಸಂಗೀತ ಹಾಗೂ ಪಂಡಿತ್ ವೆಂಕಟೇಶ್ ಗೋಡ್ಕಿಂಡಿ ಅವರ ಬಳಿ ಹಿಂದೂಸ್ಥಾನಿ ಸಂಗೀತವನ್ನು ಅಭ್ಯಾಸ ಮಾಡಿದ್ಧೇನೆ. ಹೀಗೆ, ಕರ್ನಾಟಿಕ್-ಹಿಂದೂಸ್ಥಾನಿ ಎರಡೂ ಪದ್ಧತಿಯ ಸಂಗೀತ ಜ್ಞಾನ ಹೊಂದಿರುವ ಮೂಲಕ ಎಲ್ಲ ಕಡೆಯೂ ಸಲ್ಲುವ ಕಲಾವಿದರಾಗಿ ಜನಮನ್ನಣೆ ಪಡೆಯುತ್ತಿದ್ದೇನೆ.

2011 ರಿಂದ 2015ರವೆರೆಗೆ RCB ಚಿಯರಿಂಗ್ ಟೀಮ್ ಹಾಗು 2017ರಲ್ಲಿ ಮುಂಬೈನಲ್ಲಿ ಆಯೋಜನೆಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೇಕ್ ಇನ್ ಇಂಡಿಯಾದಲ್ಲಿ ಕೂಡ ಭಾಗಿಯಾಗಿದ್ದೇನೆ. ಭೀಟ್ ಗುರುಸ್ ಸಂಸ್ಥೆಯಲ್ಲಿ ಮುಖ್ಯ ಕೊಳಲು ವಾದಕರಾಗಿ ಕಳೆದ 11 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಾನು, ಸಂಗೀತಲೋಕದಲ್ಲಿ ಇನ್ನೂ ಉತ್ತಮ ಭವಿಷ್ಯದತ್ತ ದೃಷ್ಟಿಯಿಟ್ಟು ಆ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿರುವೆ.

ಗಣೇಶ್ ಗೋವಿಂದಸ್ವಾಮಿ (Ganesh Govindaswamy):
'ಬೀಟ್ ಗುರೂಸ್ ಸ್ಥಾಪಕರೂ ಆಗಿರುವ ನಾನು (ಗಣೇಶ್ ಗೋವಿಂದಸ್ವಾಮಿ ಅವರು ಕಳೆದ 20 ವರ್ಷಗಳಿಂದಲೂ ಬೀಟ್ ಗುರೂಸ್ ಮೂಲಕ ಸೇವೆ ಸಲ್ಲಿಸುತ್ತಿದ್ದೇನೆ. ಬಾಲ್ಯದಿಂದಲೂ ಸಂಗೀತದ ಆಸಕ್ತಿ ನನ್ನಲ್ಲಿ ಹರಿದಾಡುತ್ತಲೇ ಇತ್ತು. ಆದರೆ, ಯಾವ ದಿಕ್ಕಿನಲ್ಲಿ ಹೋಗುತ್ತೇನೆ ಎಂಬುದನ್ನು ಯೋಚಿಸುತ್ತ ನಾನು ಆಫ್ರಿಕನ್ ಡಿಜೆಂಬೆ ಕಲಿತು ಅದರಲ್ಲಿ ಪ್ರಾವಿಣ್ಯ ಪಡೆಯುವ ದಾರಿ ತೆರೆದುಕೊಂಡಿತು. 2003 ರಲ್ಲಿ ನನ್ನ ಹುಟ್ಟೂರಿನಲ್ಲಿ ನನಗೆ ಗುರುವನ್ನು ಹುಡುಕಿಕೊಳ್ಳಲು ಸಾಧ್ಯವಾಗದೇ ನಾನು ಸೀದಾ ಆಫ್ರಿಕಾಕ್ಕೇ ಪ್ರಯಾಣ ಬೆಳೆಸಿದೆ. 

ಅಲ್ಲಿ ಹುಟ್ಟಿದ ಡಿಜೆಂಬೆ ಇನ್‌ಸ್ಟ್ರುಮೆಂಟ್ ಅನ್ನು ಅಲ್ಲಿಯೇ ಕಲಿತು ಅದರಲ್ಲಿ ಮಾಸ್ಟರ್‌ ಆಗುವ ಅದೃಷ್ಟ ನನ್ನದಾಯಿತು. ಅಲ್ಲಿ ಅವರು ಅದನ್ನು ನನಗೆ ಕಲಿಸಿಕೊಟ್ಟ ರೀತಿಯೇ ಅನನ್ಯ.  2011 ರಿಂದ 2015ರವೆರೆಗೆ RCB ಚಿಯರಿಂಗ್ ಟೀಮ್ ಹಾಗು 2017ರಲ್ಲಿ ಮುಂಬೈನಲ್ಲಿ ಆಯೋಜನೆಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೇಕ್ ಇನ್ ಇಂಡಿಯಾದಲ್ಲಿ ಕೂಡ ಭಾಗಿಯಾಗಿರುವೆ.

ಸಿಂಗಾಪುರ ಮತ್ತು ಯುರೋಪ್‌ಗಳಲ್ಲಿ ವರ್ಕ್‌ಶಾಪ್ ಮಾಡಿರುವ ನಾನು 100ಕ್ಕೂ ಹೆಚ್ಚು ಸೋಲೋ ಪರ್ಫಾಮೆನ್ಸ್ ನೀಡಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂಥ ಅವಕಾಶಕ್ಕಾಗಿ ಕಾದಿದ್ದೇನೆ' ಎಂದಿದ್ದಾರೆ ಗಣೇಶ್ ಗೋವಿಂದಸ್ವಾಮಿ. 

ಪ್ರಶಾಂತ್ ಮುರಲಿಧರನ್ (Prashanth Muralidharan):
'ನಾನೊಬ್ಬ ಕಾರ್ಪೋರೇಟ್ ಕಂಪನಿ ಉದ್ಯೋಗಿ ಆಗಿದ್ದರೂ ನನಗೆ ಸಂಗೀತ ತುಡಿತ ಮತ್ತು ಫ್ಯಾಷನ್ ಬಹಳವಾಗಿ ಇತ್ತು. ಅದೇ ನನ್ನನ್ನು ಬೀಟ್ ಗುರೂಸ್‌ಗೆ ಕರೆದುತಂದಿದೆ. ನಾನಿಲ್ಲಿ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಆಫ್ರಿಕನ್ ಡಿಜೆಂಬೆ ಇನ್‌ಸ್ಟ್ರುಮೆಂಟ್ ನುಡಿಸುತ್ತೇನೆ. ಇದನ್ನೇ ಕಲಿಸುತ್ತೇನೆ ಕೂಡ. ಡ್ರಮ್ ಸರ್ಕಲ್ ಅಂತ ಮಾಡಿಕೊಂಡು ಡಿಜಂಬೆ ಪರ್ಫಾಮೆನ್ಸ್ ನೀಡುತ್ತ ಸಂಗೀತದಲ್ಲಿ ನನ್ನ ಇಷ್ಟಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇನೆ. 

2011 ರಿಂದ 2015ರವೆರೆಗೆ RCB ಚಿಯರಿಂಗ್ ಟೀಮ್ ಹಾಗು 2017ರಲ್ಲಿ ಮುಂಬೈನಲ್ಲಿ ಆಯೋಜನೆಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೇಕ್ ಇನ್ ಇಂಡಿಯಾದಲ್ಲಿ ಕೂಡ ಭಾಗಿಯಾಗಿರುವೆ. ಸಿಂಗಾಪುರ ಮತ್ತು ಯುರೋಪ್‌ಗಳಲ್ಲಿ ವರ್ಕ್‌ಶಾಪ್ ಮಾಡಿರುವ ನಾನು 100ಕ್ಕೂ ಹೆಚ್ಚು ಸೋಲೋ ಪರ್ಫಾಮೆನ್ಸ್ ನೀಡಿದ್ದೇನೆ. ಕಳೆದ 20 ವರ್ಷಗಳಿಂದ ನಾನು ಈ ಡಿಜಂಬೆ ವಾದಕನಾಗಿ ಕೆಲಸ ಮಾಡುತ್ತಿದ್ದೇನೆ.' ಎಂದಿದ್ದಾರೆ. 

ಗಣೇಶ್ ಎಮ್ (Ganesh M):
'ಹೊಟೆಲ್ ಉದ್ಯಮದಲ್ಲಿ ನಾನೊಬ್ಬ ಯಶಸ್ವೀ ವ್ಯಕ್ತಿಯಾಗಿದ್ದೇನೆ. ಕಳೆದ 16 ವರ್ಷಗಳಿಂದ ನಾನು ಡಿಜೆಂಬೆ ಇನ್‌ಸ್ಟ್ರುಮೆಂಟ್ ನುಡಿಸುತ್ತಿದ್ದು, ನನಗೆ ಅಪಾರವಾದ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಸಂಗೀತದ ಈ ನನ್ನ ಪಯಣವನ್ನು ತುಂಬಾ ಜನರು ಪ್ರೀತಿ-ಅಭಿಮಾನ ಕೊಟ್ಟು ಬೆಳೆಸುತ್ತ ಬಂದಿದ್ದಾರೆ. 

2011 ರಿಂದ 2015ರವೆರೆಗೆ RCB ಚಿಯರಿಂಗ್ ಟೀಮ್ ಹಾಗು 2017ರಲ್ಲಿ ಮುಂಬೈನಲ್ಲಿ ಆಯೋಜನೆಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೇಕ್ ಇನ್ ಇಂಡಿಯಾದಲ್ಲಿ ಕೂಡ ಭಾಗಿಯಾಗಿದ್ದೇನೆ' ಎಂದಿದ್ದಾರೆ.

ಪಿಬಿ ಆದರ್ಶ್‌ (PB Adarsh):
'ನನಗೆ  ಸಂಗೀತದ ಯಾವುದೇ ಬ್ಯಾಕ್‌ಗ್ರೌಂಡ್ ಇರಲಿಲ್ಲ. ಆದರೆ ನಾನು ಸಂಗೀತ ಕುಟುಂಬದ ಹಿನ್ನೆಲೆ ಇಲ್ಲದಿದ್ದರೂ ಆಫ್ರಿಕನ್ ಡಿಜಂಬೆ ಇನ್‌ಸ್ಟ್ರುಮೆಂಟ್ ಕಲಿಯಲು ಇಷ್ಟಪಟ್ಟು ನಾನು ಅದನ್ನು ಕಲಿತೆ. 2011 ರಿಂದ ಇದನ್ನು ಕಲಿಯುತ್ತಿರುವ ನಾನು ನನ್ನ ಗುರುಗಳಾದ ಗಣೇಶ್ ಗೋವಿಂದಸ್ವಾಮಿ ಅವರಲ್ಲಿ ಈ ವಿದ್ಯೆಯಲ್ಲಿ ಮಾಸ್ಟರ್ ಆಗುತ್ತಿರುವೆ. ಕನ್ನಡ ಸಿನಿಮಾ ಉದ್ಯಮದ ಖ್ಯಾತ ಸಂಗೀತ ನಿರ್ದೇಶಕರಾದ ಅರ್ಜುನ್‌ ಜನ್ಯಾ ಹಾಗೂ ಚಂದನ್‌ ಶೆಟ್ಟಿ ಅವರುಗಳ ಜತೆ ಕೂಡ ನಾನು ಕೆಲಸ ಮಾಡಿದ್ದೇನೆ. 

ಕರ್ನಾಟಕದ ಜನಪ್ರಿಯ ಉತ್ಸವಗಳಲ್ಲಿ ಒಂದಾದ ಹಂಪಿ ಉತ್ಸವಗಳಲ್ಲಿ (ಹಂಪಿ, ಚಿಕ್ಕಮಗಳೂರು, ಗದಗ ಹಾಗು ಚಿಕ್ಕಬಳ್ಳಾಪುರ) ನಾನು ನನ್ನ ಪ್ರತಿಭೆ ಪ್ರದರ್ಶನ ಮಾಡಿದ್ದೇನೆ. 2011 ರಿಂದ 2015ರವೆರೆಗೆ RCB ಚಿಯರಿಂಗ್ ಟೀಮ್ ಹಾಗು 2017ರಲ್ಲಿ ಮುಂಬೈನಲ್ಲಿ ಆಯೋಜನೆಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೇಕ್ ಇನ್ ಇಂಡಿಯಾದಲ್ಲಿ ಕೂಡ ಭಾಗಿಯಾಗಿರುವೆ. ಮುಂದಿನ ದಿನಗಳಲ್ಲಿ ನನ್ನ ಪ್ರತಿಭಾ ಪ್ರದರ್ಶನಕ್ಕೆ ಇನ್ನೂ ಹೆಚ್ಚಿನ ಅವಕಾಶಗಳನ್ನು ಎದುರು ನೋಡುತ್ತಿದ್ದೇನೆ' ಎಂದಿದ್ದಾರೆ.

ದರ್ಶನ್-ಯಶ್ ಕರೆಸ್ತೀನಿ ಅಂತ ಕೈ ಕೊಟ್ಟ ಡೈರೆಕ್ಟರ್; ಸೇಡು ತೀರಿಸಿಕೊಂಡ್ರು ಹೀರೋ-ಹೀರೋಯಿನ್!

ಪ್ರಸಾದ್ ಗೋವಿಂದ (Prasad Govind):
'ನಾನು ಗಣೇಶ್ ಗೋವಿಂದಸ್ವಾಮಿ ಅವರ ಕಿರಿಯ ಸಹೋದರನಾಗಿದ್ದು ನಮ್ಮ ಕುಟುಂಬದ ಸಂಗೀತದ ಜರ್ನಿಯನ್ನು ನಮ್ಮ ಬೀಟ್ ಗುರೂಸ್ ಮೂಲಕ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ.  ಆಫ್ರಿಕನ್ ಜಂಬೆ ವಾದನವನ್ನು ನನ್ನ ವೃತ್ತಿಯನ್ನಾಗಿ ಮಾಡಿಕೊಂಡು ನನ್ನ ಸಹೋದರ ಗಣೇಶ್ ಗೋವಿಂದಸ್ವಾಮಿ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ಪ್ರತಿಭೆ ಗಳಿಸಿಕೊಳ್ಳುವತ್ತ ಸಾಗಿದ್ದೇನೆ. ಡಿಜಂಬೆ ಹಾಗು ವೆಸ್ಟರ್ನ್‌ ಕ್ಲಾಸಿಕಲ್ ಸಂಗೀತದಲ್ಲಿ ನಾನು ಹಲವಾರು ಶೋಗಳಲ್ಲಿ ಪಾಲ್ಗೊಂಡಿದ್ದೇನೆ.

ಕಳೆದ 11 ವರ್ಷಗಳಿಂದ ನಾನು ಈ ವೃತ್ತಿಯಲ್ಲಿದ್ದು, ಮುಂದೆ ಶಾಸ್ತ್ರೀಯ ಸಂಗೀತ ಹಾಗೂ ಇನ್‌ಸ್ಟ್ರುಮೆಂಟ್‌ ನಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಅಭಿಲಾಷೆ ಹೊಂದಿದ್ದೇನೆ. 2011 ರಿಂದ 2015ರವೆರೆಗೆ RCB ಚಿಯರಿಂಗ್ ಟೀಮ್ ಹಾಗು 2017ರಲ್ಲಿ ಮುಂಬೈನಲ್ಲಿ ಆಯೋಜನೆಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೇಕ್ ಇನ್ ಇಂಡಿಯಾದಲ್ಲಿ ಕೂಡ ಭಾಗಿಯಾಗಿದ್ದೇನೆ' ಎಂದಿದ್ದಾರೆ.

ರವಿ ಬಸ್ರೂರ್ ಹೆಸರಿನ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ: ಸಂಗೀತ ನಿರ್ದೇಶಕನ ಮಾತು ಕೇಳಿ ನಾದಬ್ರಹ್ಮ ಫುಲ್ ಶಾಕ್!

ಕನ್ಹಯ್ಯ ಡಿ (Kannaiya D)
'ನಾನು ನನ್ನ 18ನೇ ವಯಸ್ಸಿನಲ್ಲಿ ಈ ಸಂಗೀತದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು  ಆಫ್ರಿಕನ್ ಡಿಜೆಂಬೆ ಹಾಗೂ ಫರ್ಕೂಸಿಯನಿಸ್ಟ್ ಆಗಿ ಬೀಟ್ ಗುರೂಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಬೀಟ್ ಗುರೂಸ್‌ನಲ್ಲಿ ನನ್ನ ಜರ್ನಿ ಕಳೆದ 10 ವರ್ಷಗಳಿಂದ ನಿರಂತರವಾಗಿ ಸಾಗಿದೆ. 

ಬನ್ನಿ ಮಂಟಪ ಸೇರಿದಂತೆ ಕರ್ನಾಟಕದ ಜನಪ್ರಿಯ ಉತ್ಸವಗಳಲ್ಲಿ ಒಂದಾದ ಹಂಪಿ ಉತ್ಸವಗಳಲ್ಲಿ (ಹಂಪಿ, ಚಿಕ್ಕಮಗಳೂರು, ಗದಗ ಹಾಗು ಚಿಕ್ಕಬಳ್ಳಾಪುರ) ನಾನು ನನ್ನ ಪ್ರತಿಭೆ ಪ್ರದರ್ಶನ ಮಾಡಿದ್ದೇನೆ. 2011 ರಿಂದ 2015ರವೆರೆಗೆ RCB ಚಿಯರಿಂಗ್ ಟೀಮ್ ಹಾಗು 2017ರಲ್ಲಿ ಮುಂಬೈನಲ್ಲಿ ಆಯೋಜನೆಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೇಕ್ ಇನ್ ಇಂಡಿಯಾದಲ್ಲಿ ಕೂಡ ಭಾಗಿಯಾಗಿದ್ದೇನೆ' ಎಂದಿದ್ದಾರೆ.

ಒಟ್ಟಿನಲ್ಲಿ, ಗಣೇಶ್ ಗೋವಿಂದಸ್ವಾಮಿ ನೇತೃತ್ವದ 'ಬೀಟ್ ಗುರೂಸ್' ಸೌಂಡ್ ಸಖತ್ ಜೋರಾಗಿ ಜಗತ್ತಿನಾದ್ಯಂತ ಮೊಳಗುತ್ತಿದೆ. ಇನ್ನೂ ಹೆಚ್ಚಿನ ಸಾಧನೆ ಮೂಲಕ ತಾಯ್ನಾಡು ಹಾಗೂ ನಮ್ಮ ಭಾರತದ ಹೆಸರನ್ನು ಪ್ರಪಂಚದಾದ್ಯಂತ ಪಸರಿಸಬೇಕೆಂಬ ಮಹದಾಸೆ ಹೊತ್ತಿದೆ ಬೀಟ್ ಗುರೂಸ್ ಟೀಮ್. ಅವರಿಗೊಂದು ಆಲ್‌ ದಿ ಬೆಸ್ಟ್!

 

Follow Us:
Download App:
  • android
  • ios