ವೇದಿಕೆಯ ಮೇಲೆ ಕಾಲ್ಗೆಜ್ಜೆ, ಕಲರ್ ಕಲರ್ ಪಂಚೆ ಧರಿಸಲು ಕಾರಣ ತೆರೆದಿಟ್ಟ ರಘು ದೀಕ್ಷಿತ್!
ಯಾಕ್ ಪಂಚೆನೇ ಬೇಕು? ಡ್ಯಾನ್ಸ್ ಮಾಡಲ್ಲ ಅಂದ್ರೆ ಗಜ್ಜೆನೇ ಬೇಕು? ಪ್ರಶ್ನಿಸುತ್ತಿದ್ದ ಅಭಿಮಾನಿಗಳಿಗೆ ಉತ್ತರಿಸಿದ ರಘು ದಿಕ್ಷಿತ್.
ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ನಿರ್ಮಾಪಕ, ಫಿಲ್ಮಂ ಸ್ಕೂರ್ ಕಂಪೋಸರ್ ರಘು ದಿಕ್ಷಿತ್‌ಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಕೈಯಲ್ಲಿ ಪಂಚೆ ಮತ್ತು ಕಾಲ್ಗೆಜ್ಜೆ ಧರಿಸಿ ಕೈಯಲ್ಲಿ ಗಿಟಾರ್ ಹಿಡಿದು ವೇದಿಕೆ ಮೇಲೆ ಬಂದರೆ ರಘು ದೀಕ್ಷಿತ್ ನೋಡಲು ಜನರು ಹುಚ್ಚರಾಗುತ್ತಾರೆ. ಅದರಲ್ಲೂ ಮೈಸೂರ್ ಸೇ ಆಯಿ, ಅಂತರಂಗಿ, ಹೇ ಭಗವಾನ್, ಗುಡು ಗುಡಿಯಾ ಸೇದಿ ನೋಡೋ ....ಈ ರೀತಿ ಹಾಡುಗಳನ್ನು ಹಾಡಿದರೆ ನಿಂತಲೇ ಜನರು ಕುಣಿಯುವುದಕ್ಕೆ ಶುರು ಮಾಡುತ್ತಾರೆ. ಅಷ್ಟರ ಮಟ್ಟಕ್ಕೆ ರಘು ಕ್ರೇಜ್ ಸೃಷ್ಟಿ ಮಾಡಿದ್ದಾರೆ.
ಆದರೆ ಹಲವರಲ್ಲಿ ಕಾಡುವ ಪ್ರಶ್ನೆ ಏನೆಂದರೆ ಯಾಕೆ ಸದಾ ಪಂಚೆಯಲ್ಲಿ ಇರುತ್ತಾರೆ? ಯಾಕೆ ಸದಾ ಭರತನಾಟ್ಯದ ಕಾಲ್ಗೆಜ್ಜೆ ಧರಿಸಿರುತ್ತಾರೆ. ರಘು ದಿಕ್ಷಿತ್ ಬ್ಯಾಂಡ್‌ನಲ್ಲಿ ಏನು ವಿಶೇಷತೆ ಉಳಿಸಿಕೊಳ್ಳಲು ಹೀಗೆ ಮಾಡುತ್ತಾರೆ ಎಂಬ ಪ್ರಶ್ನೆ ಆಗಾಗ ಹುಟ್ಟಿಕೊಳ್ಳುತ್ತದೆ. ನಾರ್ಥ್ ಅಭಿಮಾನಿಗಳಿಗೆ ಇದು ಹೊಸದಾಗಿ ಕಾಣಿಸುತ್ತದೆ ಆದರೆ ಸೌತ್ ಫ್ಯಾನ್ಸ್ ಇದನ್ನು ನೋಡಿ ಸಖತ್ ಥ್ರಿಲ್ ಆಗುತ್ತಾರೆ.
'ಹುಡುಗರು' ಮಾಡುವವರೆಗೂ ಪುನೀತ್ ರಾಜ್‌ಕುಮಾರ್ ಬಗ್ಗೆ ಬೇರೆನೇ ಅಭಿಪ್ರಾಯ ಇತ್ತು: ಶ್ರೀನಗರ ಕಿಟ್ಟಿ
'ಸದಾ ಪಂಚೆ ಹಾಕಿಕೊಂಡು ಹಾಡುವುದಕ್ಕೂ ಹಿನ್ನಲೆ ಇದೆ. ಬರೀ ಮ್ಯೂಸಿಕ್ ಮಾತ್ರವಲ್ಲದೆ ನಮ್ಮ ಸಂಪ್ರದಾಯವನ್ನು ಪ್ರತಿನಿಧಿಸುವ ವಸ್ತ್ರ ಪಂಚೆ. ನಮ್ಮ ಹೆಮ್ಮೆಯ ಕರ್ನಾಟಕ ನಮ್ಮ ಸೌತ್ ಇಂಡಿಯಾನ್ ಆಗಿ..ಮನೆಯಲ್ಲಿ ಪಂಚೆ ಧರಿಸಿ ಬೆಳೆದು ಬಂದಿರುವ ಅಭ್ಯಾಸ ಇದೆ. ಅದನ್ನು ಸ್ಟೇಚ್ ಮೇಲೆ ತೆಗೆದುಕೊಂಡು ಹೋಗಿ ಯಾರು ನಾವು ಎಂದು ಹೆಮ್ಮೆಯಿಂದ ತೋರಿಸಿಕೊಳ್ಳುವ ಕೆಲಸ ಮಾಡುತ್ತಿದ್ದೀನಿ. ಯಾವ ರೀತಿಯ ಮ್ಯೂಸಿಕ್ ನುಡಿಸುತ್ತೀವಿ ಅನ್ನೋದು ಮುಖ್ಯವಾಗುತ್ತದೆ...ಫೋಕ್ ಮ್ಯೂಸಿಕ್ ಅಂದ್ರೆ ಬಣ್ಣ ಹೀಗಾಗಿ ಬಣ್ಣ ಬಣ್ಣದ ಲುಂಗಿ ಧರಿಸುತ್ತೀನಿ. ಕಾಲ್ಗೆಜ್ಜೆ ಹಾಕುವುದು ನಮ್ಮ ಸಂಪ್ರದಾಯ ಆ ಜಾನಪತ ಸಂಪ್ರದಾಯವನ್ನು ತಾಳಕ್ಕೆ ಬಳಸಿಕೊಳ್ಳುತ್ತೀನಿ. ಬಹಳ ವರ್ಷಗಳಿಂದ ಭರತನಾಟ್ಯ ಕಲಿತಿದ್ದ ಕಾರಣ ಗೆಜ್ಜೆ ಹಾಕಿಕೊಳ್ಳುವುದು ಸಹಜ ಅದರದೊಂದು ಎಲಿಮೆಂಟ್ ಇರಲಿ ಎಂದು ಬಳಸುತ್ತೀನಿ. ಪ್ರತಿಯೊಬ್ಬರಿಗೂ ಅದರ ಬಗ್ಗೆ ಕುತೂಹಲ ಇರುತ್ತದೆ ಅದಿಕ್ಕೆ ಪ್ರಶ್ನೆ ಮಾಡುತ್ತಾರೆ ಅದು ನಮಗೆ ಮಾರ್ಕೆಟಿಂಗ್ ಪಾಯಿಂಟ್ ಆಯ್ತು' ಎಂದು ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ರಘು ದೀಕ್ಷಿತ್ ಮಾತನಾಡಿದ್ದರು.
ಶೂ, ಚಪ್ಪಲಿಯಿಂದ ಪಾದ ವಾಸನೆ ಬರ್ತಿದ್ಯಾ? ಟೆನ್ಶನ್ ಕಮ್ಮಿ ಮಾಡುತ್ತೆ ಈ ಟ್ರಿಕ್
2008ರಲ್ಲಿ ಸೈಕೋ ಚಿತ್ರದ ಮೂಲಕ ಮ್ಯೂಸಿಕ್ ಡೈರೆಕ್ಟರ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಘು ದೀಕ್ಷಿತ್..ಜಸ್ಟ್ ಮಾತ್ ಮಾತಲ್ಲಿ, ಕೋಟೆ, ಹ್ಯಾಪಿ ನ್ಯೂ ಇಯರ್, ಗರುಡ, ಲವ್ ಮಾಕ್ಟೇಲ್, ನಿನ್ನ ಸನಿಹಕೆ, ಆರ್ಕೆಸ್ಟ್ರಾ ಮೈಸೂರು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.